ಯಾವುದು ತಪ್ಪು, ಸರಿಯೆಂಬುದು ಮಕ್ಕಳಿಗೆ ಮಾತ್ರವಲ್ಲ ಪೋಷಕರಿಗೂ ಅರಿವು ಮೂಡಿಸಬೇಕು

0

ಸರಕಾರದೊಡನೆ ಮಕ್ಕಳ ಭಾಗವಹಿಸುವಿಕೆ ಕಾರ್ಯಾಗಾರದಲ್ಲಿ ಇ.ಒ ನವೀನ್ ಕುಮಾರ್ ಭಂಡಾರಿ ಹೆಚ್

ಎಲ್ಲಾ ಮಕ್ಕಳ ರಕ್ಷಣೆಯಲ್ಲಿ ಕೈಜೋಡಿಸೋಣ – ಶ್ರೀಲತಾ
ಪ್ರತಿಯೊಂದು ಮಗು ಶಾಲೆಗೆ ಬರುವಂತೆ ಮಾಡೋಣ – ಹರಿಪ್ರಸಾದ್

ಪುತ್ತೂರು: ಇವತ್ತು ತಾಂತ್ರಿಕವಾಗಿ ನಾವು ಮುಂದೆ ಹೋಗಿದ್ದೇವೆ. ಆದರೆ ಅದರ ಬಳಕೆಯಲ್ಲೂ ದುರುಪಯೋಗ ಆದಾಗ ಸಮಸ್ಯೆಗಳು ಬರುತ್ತವೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಯಾವುದು ತಪ್ಪು, ಯಾವುದು ಸರಿ ಎಂದು ತಿಳಿ ಹೇಳುವ ಕಾರ್ಯಕ್ರಮಗಳು ಆಗಬೇಕು. ಇದು ಬರಿ ಮಕ್ಕಳಿಗೆ ಮಾತ್ರವಲ್ಲ ಪೋಷಕರಿಗೂ ಅರಿವು ಮೂಡಿಸಬೇಕೆಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ಅವರು ಹೇಳಿದರು.


ಮಕ್ಕಳ ಹಕ್ಕು ಪ್ರತಿಪಾದನೆಗಾಗಿ, ಅಂತರಾಷ್ಟ್ರೀಯ ಮಕ್ಕಳ ಒಡಂಬಡಿಕೆ ಮತ್ತು ಸುಸ್ತಿರ ಅಭಿವೃದ್ಧಿಯ ಗುರಿಗಳು ಕಾಲಕಾಲಕ್ಕೆ ಅಭಿವೃದ್ಧಿ ಪಡಿಸುವ ನಿಟ್ಟನಲ್ಲಿ ಮಕ್ಕಳ ಗ್ರಾಮ ಸಭೆ ನಡೆಸುವ ಕುರಿತು ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜು.28ರಂದು ನಡೆದ ಕಾರ್ಯಾಗಾರದಲ್ಲಿ ‘ಮಕ್ಕಳ ಹಕ್ಕುಗಳಿಗಾಗಿ ಮಕ್ಕಳ ಹಕ್ಕುಗಳ ಗ್ರಾಮಸಭೆ’ ಕರ ಪತ್ರಗಳನ್ನು ಅವರು ಬಿಡುಗಡೆ ಮಾಡಿ ಮಾತನಾಡಿದರು. ಜಾಗೃತಿ ಕಾರ್ಯಕ್ರಮಗಳು ಸಭೆ ಸಮಾರಂಭದಲ್ಲಿ ಮಾತ್ರ ಆದರೆ ಸಾಲದು ಮಕ್ಕಳು ಶಾಲೆಯಿಂದ ಹೊರಗುಳಿದ್ದಿದ್ದಾರೆ ಎಂಬುದನ್ನು ಗುರುತಿಸಿ ಅವರಿಗೆ ಅರಿವು ಮೂಡಿಸಬೇಕು. ಇತ್ತೀಚಿಗಿನ ದಿನ ಮಕ್ಕಳ ಕಡೆ ಗಮನ ಕಡಿಮೆ ಆಗುತ್ತಿದೆ. ಮಕ್ಕಳ ಸಮಸ್ಯೆಗಳನ್ನು ಅರಿತು ಪರಿಹಾರ ಕಂಡುಕೊಂಡರೆ ನಾವು ಯಶಸ್ವಿಯಾಗಬಹುದು. ಸಾಮಾಜಿಕ ಜಾಲತಾಣವನ್ನು ಒಳ್ಳೆಯ ವಿಚಾರಕ್ಕೆ ಮಾತ್ರ ಬಳಸಿಕೊಳ್ಳುವಂತೆ ಕ್ರಮ ವಹಿಸಬೇಕೆಂದರು.


ಎಲ್ಲಾ ಮಕ್ಕಳ ರಕ್ಷಣೆಯಲ್ಲಿ ಕೈಜೋಡಿಸೋಣ:
ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಮತ್ತು ಶಿಶು ಅಭಿವೃದ್ದಿ ಯೋಜನಾಧಿಕಾರಿ ಶ್ರೀಲತಾ ಅವರು ಮಾತನಾಡಿ ಜೀವನದ ವ್ಯವಸ್ಥೆ ಹೈಪೈ ಆದಾಗ ಹಲವು ಘಟನೆಗಳಿಗೆ ಕಾರಣ ಆಗುತ್ತದೆ. ಇವತ್ತಿನ ಬ್ಯುಶಿ ಸೆಡ್ಯೂಲಿನಲ್ಲಿ ಯಾರಿಗೂ ಸಮಯವಿಲ್ಲ. ಆದರೂ ಮಕ್ಕಳು ಒಂದು ಹಂತಕ್ಕೆ ಬರುವ ತನಕ ಮೈಯೆಲ್ಲ ಕಣ್ಣಾಗಿರಬೇಕು. ಮಕ್ಕಳಿಗಾಗಿ ಸರಕಾರದಿಂದ ಬೇರೆ ಬೇರೆ ಸವಲತ್ತುಗಳಿವೆ. ಉಚಿತ ಶಿಕ್ಷಣ, ಉಚಿತ ಹಾಸ್ಟೇಲ್ ಸೌಲಭ್ಯವಿದೆ. ಪ್ರತಿ ಗ್ರಾ.ಪಂ ಕಾವಲು ಸಮಿತಿ ಇದೆ. ಆಯಾ ಗ್ರಾಮದ ಮಕ್ಕಳ ಕೆಟಗರಿಯ ಪಟ್ಟಿ ಗ್ರಾ.ಪಂನಲ್ಲಿ ಇರಬೇಕು. ಈ ಕುರಿತು ಪ್ಲಾನಿಂಗ್ ಇದ್ದಾಗ ಬಾಲ್ಯವಿವಾಹ, ಪೋಕ್ಸೋ ಪ್ರಕರಣಗಳನ್ನು ತಡೆಯಬಹುದು ಮತ್ತು ಸವಲತ್ತು ನೀಡಲು ಸುಲಭವಾಗುತ್ತದೆ. ಇದರ ಜೊತೆಗೆ ಪ್ರತಿಯೊಬ್ಬ ತಾಯಿ ಎಚ್ಚೆತ್ತು ಕೊಂಡು ಮಕ್ಕಳ ರಕ್ಷಣೆ ಮಾಡಬೇಕು. ಮಕ್ಕಳ ರಕ್ಷಣೆಯ ವಿಚಾರದಲ್ಲಿ ಎಲ್ಲರು ಕೈ ಜೋಡಿಸೋಣಾ ಎಂದರು.
ಪ್ರತಿಯೊಂದು ಮಗು ಶಾಲೆಗೆ ಬರುವಂತೆ ಮಾಡೋಣ:

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕ ಹರಿಪ್ರಸಾದ್ ಅವರು ಮಾತನಾಡಿ ಮಕ್ಕಳ ಹಕ್ಕು ಮತ್ತು ಕರ್ತವ್ಯ ಎರಡು ಮುಖ್ಯವಾದವು. ಮಕ್ಕಳನ್ನು ಬಹಳಷ್ಟು ಸೂಕ್ಷ್ಮತೆಯಿಂದ ನೋಡಿಕೊಳ್ಳಬೇಕು. ಅದೇ ರೀತಿ ಪ್ರತಿಯೊಂದು ಮಗುವು ಶಾಲೆಗೆ ಬರುವಂತೆ ಮಾಡಬೇಕೆಂದರು. ಚೈಲ್ಡ್ ರೈಟ್ಸ್ ಟ್ರಸ್ಟ್‌ನ ಸಂಯೋಜಕಿ ಕಸ್ತೂರಿ ಬೊಳುವಾರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳ ಹಕ್ಕುಗಳ ವಿಶೇಷ ಗಾಮ ಸಭೆಯಲ್ಲಿ ಏನೆಲ್ಲ ಮಾತನಾಡಬೇಕು. ಯಾವ ಉದ್ದೇಶಕ್ಕಾಗಿ ಗ್ರಾಮ ಸಭೆಯ ಅಗತ್ಯತೆ ಇದೆ ಎಂಬುದರ ಕುರಿತು ಅರಿವು ಮೂಡಿಸಲು ಮತ್ತು ಸಿದ್ದತೆ ನಡೆಸಲು ಕಾರ್ಯಗಾರ ನಡೆಸಲಾಗುತ್ತದೆ ಎಂದರು. ಶಿಕ್ಷಣ ಸಂಪನ್ಮೂಲ ಕೇಂದ್ರ ಒಕ್ಕೂಟದ ಅಧ್ಯಕ್ಷೆ ನಯನಾ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚೈಲ್ಡ್ ರೈಟ್ಸ್ ಟ್ರಸ್ಟ್‌ನ ಕಾರ್ಯಕರ್ತ ವಿನೋದ್ ಕಾರ್ಯಕ್ರಮ ನಿರೂಪಿಸಿದರು. ದಿವ್ಯಾ ಸಹಕರಿಸಿದರು. ಸಮಾರಂಭದ ಬಳಿಕ ಅಂಗನವಾಡಿ ಮೇಲ್ವಿಚಾರಕರು, ಶಾಲಾ ಶಿಕ್ಷಕರುಗಳಿಗೆ ಕಾರ್ಯಾಗಾರ ನಡೆಯಿತು.

LEAVE A REPLY

Please enter your comment!
Please enter your name here