25 ನೇ ವಿಶ್ವ ಜಾಂಬೂರಿ : ನರೇಂದ್ರ ಪ.ಪೂ.ಕಾಲೇಜಿನ ವಿದ್ಯಾರ್ಥಿನಿ ದಕ್ಷಿಣ ಕೊರಿಯಾಕ್ಕೆ

0

ಪುತ್ತೂರು: ತೆಂಕಿಲದ ನರೇಂದ್ರ ಪ.ಪೂ ಕಾಲೇಜಿನ 2022-23 ನೇ ಶೈಕ್ಷಣಿಕ ಸಾಲಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುವ ವಿದ್ಯಾರ್ಥಿನಿ ವರ್ಷಿಣಿ ಆಗಸ್ಟ್ 1 ರಿಂದ 12 ರವರೆಗೆ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ 25ನೇ ವಿಶ್ವ ಸ್ಕೌಟ್ ಜಾಂಬೂರಿಗೆ ಆಯ್ಕೆಯಾಗಿದ್ದಾರೆ.

ಇವರು ಕೊಕ್ಕಡ ನಿವಾಸಿಗಳಾದ ಚಂದ್ರಶೇಖರ ಪೂಜಾರಿ ಮತ್ತು ವನಿತಾ ದಂಪತಿಗಳ ಪುತ್ರಿ. ಅಂತರ್ರಾಷ್ಟ್ರೀಯ ಉತ್ಸವದಲ್ಲಿ ಭಾಗವಹಿಸಲಿರುವ ವಿದ್ಯಾರ್ಥಿನಿಗೆ ನರೇಂದ್ರ ಪ.ಪೂ.ಕಾಲೇಜಿನ ಆಡಳಿತ ಮಂಡಳಿ ,ಉಪನ್ಯಾಸಕ ವೃಂದ ಮತ್ತು ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here