ಪುತ್ತೂರು: ಬನ್ನೂರು ಕೃಷ್ಣನಗರ ಸಮೀಪದಲ್ಲಿರುವ ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲಿನಲ್ಲಿ ಜು. 29ರಂದು “ಪೋಷಕರ ಸಭೆ ಮತ್ತು ಕೃತಜ್ಞತಾ ಸಭೆ” ನಡೆಸಲಾಯಿತು.
ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಇವರು ಶೈಕ್ಷಣಿಕ ಚಿಂತನೆಯ ಕುರಿತು ಶಾಲೆಯ ಪೋಷಕರಿಗೆ ಹಾಗೂ ಶಿಕ್ಷಕರಿಗೆ ಸಲಹೆ ಸೂಚನೆಯನ್ನು ನೀಡಿದರು. ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಗುಡ್ಡಪ್ಪ ಗೌಡ ಬಲ್ಯ ಕೃತಜ್ಞತಾ ನುಡಿಗಳನ್ನು ಆಡುತ್ತಾ ಎವಿಜಿ ವಿದ್ಯಾಸಂಸ್ಥೆಯು ಆರಂಭವಾಗಲು ಶ್ರಮಿಸಿದ ಎಲ್ಲರಿಗೂ ಹಾಗೂ ಶಾಲೆಗೆ ವಿದ್ಯಾರ್ಥಿಗಳನ್ನು ಕಳುಹಿಸಿಕೊಟ್ಟ ಪೋಷಕ ವೃಂದದವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ಪುತ್ತೂರಿನಂತಹ ಪ್ರದೇಶದಲ್ಲಿ ಹೊಸ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವುದು ಎವಿಜಿ ಸಂಸ್ಥೆಯ ಕನಸು ಆಗಿತ್ತು, ಆ ಕನಸನ್ನು ನನಸಾಗಿಸಲು ಸಂಸ್ಥೆಯ ಸಂಚಾಲಕರಾದ ಎ.ವಿ. ನಾರಾಯಣ, ಸಂಸ್ಥೆಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಹಾಗೂ ಇತರ ಆಡಳಿತ ಮಂಡಳಿಯ ಸದಸ್ಯರು ತಮ್ಮ ತನು ಮನ ಧನಗಳ ಮೂಲಕ ಶ್ರಮಿಸಿರುತ್ತಾರೆ, ಇದು ಮುಂದೆ ಒಂದು ಉತ್ತಮ ವಿದ್ಯಾಸಂಸ್ಥೆಯಾಗಲು ಎಲ್ಲರ ಸಹಕಾರ ಅಗತ್ಯ ಎಂದು ನುಡಿದರು.
ಸಂಸ್ಥೆಯ ಅಧ್ಯಕ್ಷ ವೆಂಕಟರಮಣಗೌಡ ಕಳುವಾಜೆ ಸಭಾಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಸಂಚಾಲಕ ಎ ವಿ ನಾರಾತಣ ಅತಿಥಿಗಳನ್ನು ಗೌರವಿಸಿದರು. ಎವಿಜಿ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ನ ಉಪಕಾರ್ಯದರ್ಶಿ ಕೆ.ವಿ. ಪ್ರತಿಭಾ ದೇವಿ, ಉಪಾಧ್ಯಕ್ಷೆ ಕೆ.ವಿ. ಪುಷ್ಪವತಿ ಗೌಡ ಕಳುವಾಜೆ, ಕಾನೂನು ಸಲಹೆಗಾರ ಟಿ ಜಿ ದೀಕ್ಷಾ, ಹಾಗೂ ಸಂಸ್ಥೆಯ ಖಜಾಂಚಿ ವನಿತಾ ಎ.ವಿ., ನಿರ್ದೇಶಕರಾದ ಗಂಗಾಧರ ಗೌಡ ಎ.ವಿ., ಗೌರಿ ಬನ್ನೂರು, ಸೀತಾರಾಮ ಪೂಜಾರಿ ಮೇಲ್ಮಜಲು, ಸಂಸ್ಥೆಯ ಸಹಾಯಕರಾದ ನಾರಾಯಣ ಕುಲಾಲ್ ಮತ್ತು ಭುವನೇಶ್ವರಿ, ಹಾಗೂ ಮಕ್ಕಳ ಪೋಷಕರು ಉಪಸ್ಥಿತಿಯಲ್ಲಿದ್ದರು. ಶಾಲೆಯ ಪುಟಾಣಿಯರಾದ ಅನಿಕ, ವಿನೀಶ್, ಗಯನ್, ತನಿಷ್ಕ ಮತ್ತು ಆನ್ವಿ ಇವರು ಪ್ರಾರ್ಥನೆ ನಡೆಸಿದರು, ಸಂಸ್ಥೆಯ ಶಿಕ್ಷಕಿ ಶುಭ ರೈ ಇವರು ಸಂವಿಧಾನದ ಪೂರ್ವ ಪೀಠಿಕೆಯನ್ನು ವಾಚಿಸಿದರು, ಸಂಸ್ಥೆಯ ಕಛೇರಿ ಸಿಬ್ಬಂದಿ ವನಿತಾ ಸ್ವಾಗತಿಸಿದರು, ಸಂಸ್ಥೆಯ ಉಪಾಧ್ಯಕ್ಷ ಉಮೇಶ್ ಮಳುವೇಲು ವಂದಿಸಿದರು. ಸಂಸ್ಥೆಯ ಪ್ರಾಂಶುಪಾಲೆ ಉಷಾಕಿರಣ ಕೆ.ಎಸ್. ಕಾರ್ಯಕ್ರಮವನ್ನು ನಿರೂಪಿಸಿದರು.