ಪುತ್ತೂರು: ಧೀಶಕ್ತಿ ಮಹಿಳಾ ಯಕ್ಷಬಳಗ ಪುತ್ತೂರು ಇದರ ದಶಮಾನೋತ್ಸವ ಸಂಭ್ರಮಕ್ಕೆ ಅಭಿಮುಖವಾಗಿ ನಡೆಯುವ ಸರಣಿ ಸಂವಾದ ಕಾರ್ಯಕ್ರಮದಲ್ಲಿ ಮೊದಲಿಗೆ, ರತಿ-ಮನ್ಮಥ ಮತ್ತು ನಂತರ ಸುಧನ್ವ-ಪ್ರಭಾವತಿ “ಯಕ್ಷಯುಗ್ಮ ಸಂವಾದಗಳು” ಪುತ್ತೂರಿನ ವಕೀಲರಾದ ಕೆ ಆರ್ ಆಚಾರ್ಯ ಅವರ ತೆಂಕಿಲದ ಸ್ವಗೃಹದಲ್ಲಿ ಜು. 29 ರಂದು ನಡೆಯಿತು.
ಹಿಮ್ಮೇಳದಲ್ಲಿ, ಶರಣ್ಯಾ ರಾವ್, ಶ್ರೀವಿದ್ಯಾ ಜೆ ರಾವ್, ವಿನಯಾ ಜಿ ಕೇಕುಣ್ಣಾಯ ಸಹಕರಿಸಿದರು. ಮುಮ್ಮೇಳದಲ್ಲಿ, ವಕೀಲರಾದ ಹೀರಾ ಉದಯ್ (ಪ್ರಭಾವತಿ) ಶೃತಿ ವಿಸ್ಮಿತ್ (ಸುಧನ್ವ), ಸ್ವಪ್ನ ಉದಯ್ (ಮನ್ಮಥ), ಅಭಿಜ್ಞಾ ದಾಳಿಂಬ (ರತಿ) ಭಾಗವಹಿಸಿದರು. ಪದ್ಮಾ ಕೆ ಆರ್ ಆಚಾರ್ಯ ಸ್ವಾಗತಿಸಿ, ವಂದಿಸಿದರು. ಪ್ರೇಮಾ ಕಿಶೋರ್ ಮತ್ತು ಜಯಲಕ್ಷ್ಮಿ ವಿ ಭಟ್ ಸಹಕರಿಸಿದರು. ಗೀತಾ ಕೊಂಕೋಡಿ, ಶುಭಾ ಪಿ ಆಚಾರ್ಯ, ಪ್ರೇಮಾ ನೂರಿತ್ತಾಯ, ಮಲ್ಲಿಕಾ ಜೆ ರೈ, ಜ್ಯೋತಿ ರಾವ್, ಶಾಲಿನಿ ಶೆಟ್ಟಿ, ವರ್ಷಾ ಕೆ. ಟಿ ಉಪಸ್ಥಿತರಿದ್ದರು.