
ಪುತ್ತೂರು: ಎಜುಕೇಶನಲ್ ಎಕ್ಸೆಲೆನ್ಸ್ ಫೌಂಡೇಶನ್ ವತಿಯಿಂದ ಮೆಡ್ಲ್ಯಾಂಡ್ ಆಸ್ಪತ್ರೆ ಸಂಪ್ಯ ಪುತ್ತೂರು ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಡಿ.14ರಂದು ಬೆಳಿಗ್ಗೆ ಗಂಟೆ 9-30ರಿಂದ ಮದ್ಯಾಹ್ನ 1-30ರ ವರೆಗೆ ಕಬಕ ಮಸ್ಜಿದ್ ಹಾಲ್ನಲ್ಲಿ ನಡೆಯಲಿದೆ.
ಶಿಬಿರದಲ್ಲಿ ಸಾಮಾನ್ಯ ದೇಹ ತಪಾಸಣೆ, ಲ್ಯಾಬ್ ಟೆಸ್ಟ್ ಸಹಿತ ವಿವಿಧ ತಪಾಸಣೆ ನಡೆಯಲಿದ್ದು ತಜ್ಞ ವೈದ್ಯರಿಂದ ಉಚಿತ ಸಲಹೆ ಕೂಡಾ ಸಿಗಲಿದೆ. ಹೃದಯ ತಜ್ಞರು, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು, ಮೂಳೆ ತಜ್ಞರು, ದಂತ ತಪಾಸಣೆ ತಜ್ಞರು ಭಾಗವಹಿಸಲಿದ್ದು, ಶಿಬಿರದಲ್ಲಿ ಸವಲತ್ತು ಕಾರ್ಡ್ ವಿತರಣೆ ನಡೆಯಲಿದೆ.
ಆಸಕ್ತರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದೆಂದು ಎಜುಕೇಶನಲ್ ಎಕ್ಸೆಲೆನ್ಸ್ ಫೌಂಡೇಶನ್ನ ಅಧ್ಯಕ್ಷ ಅಮ್ಜದ್ ಖಾನ್ ಪೋಳ್ಯ ಹಾಗೂ ಮೆಡ್ಲ್ಯಾಂಡ್ ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.