ಸರ್ವೆ: ಸೈನಿಕರೋರ್ವರಿಂದ ನೆಕ್ಕಿತ್ತಡ್ಕದಲ್ಲಿ ಸರಕಾರಿ ಜಾಗಕ್ಕೆ ಬೇಲಿ ಹಾಕಲು ಯತ್ನ- ಸ್ಥಳಕ್ಕೆ ಅಧಿಕಾರಿಗಳ ಭೇಟಿ, ಕಾಮಗಾರಿ ಸ್ಥಗಿತ

0

ಪುತ್ತೂರು: ಸೈನಿಕರೋರ್ವರು ತಮಗೆ ಮಂಜೂರಾದ ಜಾಗವೆಂದು ಸರಕಾರಿ ಜಾಗಕ್ಕೆ  ಹಾಕಲು ಮುಂದಾದ ಹಾಗೂ ಬಳಿಕದ ಬೆಳವಣಿಗೆಯಲ್ಲಿ ಸ್ಥಳಕ್ಕೆ ಅಧಿಕಾರಿಗಳು ಮತ್ತು ಗ್ರಾ.ಪಂ ಸದಸ್ಯರು ಆಗಮಿಸಿದ ಬಳಿಕ ಅಗರ್ (ಅಗಲು) ಕಾಮಗಾರಿಯನ್ನು ಸ್ಥಗಿತಗೊಳಿಸಿದ ಘಟನೆ ಸರ್ವೆ ಗ್ರಾಮದ ಸೊರಕೆ ಸಮೀಪದ ನೆಕ್ಕಿತ್ತಡ್ಕ ಎಂಬಲ್ಲಿ ಜು.29ರಂದು ಸಂಜೆ ನಡೆದಿದೆ.

ವಿಟ್ಲ ಮೂಲದ ನಿವಾಸಿ, ಸೈನಿಕರೋರ್ವರು ಜೆಸಿಬಿ ಮೂಲಕ ನೆಕ್ಕಿತ್ತಡ್ಕದಲ್ಲಿರುವ ಸರಕಾರಿ ಜಾಗದ ಸುತ್ತ 2 ಎಕ್ರೆಗಿಂತಲೂ ಹೆಚ್ಚಿನ ಜಾಗ ಗುರುತು ಮಾಡಲು  ಜಾಗದ ಸುತ್ತ  ಅಗರ್ (ಅಗಲು) ತೋಡಿದ್ದರು. ಮಾಹಿತಿ ತಿಳಿದ ಗ್ರಾಮ ಸಹಾಯಕ ಹರ್ಷಿತ್ ಮತ್ತು ಕೆಸಿಡಿಸಿ ಸಿಬ್ಬಂದಿ ಶರತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಂಡೂರು ಗ್ರಾ.ಪಂ ಸದಸ್ಯರಾದ ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ,  ಕಮಲೇಶ್ ಸರ್ವೇದೋಳಗುತ್ತು ಹಾಗೂ ಸ್ಥಳೀಯರು ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದರು.

ಈ ವೇಳೆ ಯಾವುದೇ ದಾಖಲೆ ಇಲ್ಲದೆ ಜಾಗ ಅಗರ್ (ಅಗಲು) ಮಾಡಿದ್ದ ವ್ಯಕ್ತಿಯಲ್ಲಿ ವಿಚಾರಿಸಿದಾಗ ಸರಕಾರದಿಂದ ನಿವೇಶನ ಸಿಗುತ್ತದೆಂದು ಇಲ್ಲಿ ಜಾಗಕ್ಕೆ ಅಗರ್ (ಅಗಲು) ಮಾಡಿದ್ದೇನೆ, ಇನ್ನು ಕಾಮಗಾರಿ ಮುಂದುವರಿಸುವುದಿಲ್ಲ. ದಾಖಲೆ ಪಡೆದ ಬಳಿಕ ಮುಂದಿನ ಕಾರ್ಯ ಮಾಡುವುದಾಗಿ ಸೈನಿಕ ಹೇಳಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here