ಮುಂಬಯಿ ‘ಹೊರನಾಡು ಕನ್ನಡ ಸಂಸ್ಕೃತಿ ಸಂಭ್ರಮ’ ದಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ‘ಸಹಕಾರ ಭೂಷಣ’ ಪ್ರಶಸ್ತಿ ಪ್ರದಾನ

0

ಮಂಗಳೂರು: ಸಹಕಾರಿ ರಂಗದಲ್ಲಿ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ರಾಜ್ಯದ ಅಗ್ರಮಾನ್ಯ ನಾಯಕರಾಗಿ ಗುರುತಿಸಿ ಕೊಂಡಿರುವ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಶನಿವಾರ ಮುಂಬೈಯಲ್ಲಿ ‘ಸಹಕಾರ ಭೂಷಣ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಕರ್ನಾಟಕ ಸಂಘ ಅಂಧೇರಿ,  ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮುಂಬೈಯ ವಿವಿಧ ಕನ್ನಡ ಪರ ಸಂಘಟನೆಗಳ ಸಹಯೋಗದಲ್ಲಿ ಜುಲೈ 29ರಂದು ಮುಂಬಯಿ ಕುರ್ಲಾ ಬಂಟರ ಭವನದಲ್ಲಿ ‘ಹೊರನಾಡು ಕನ್ನಡ ಸಂಸ್ಕೃತಿ ಸಂಭ್ರಮ’ ಹಾಗೂ ‘ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪು’ ಕಾರ್ಯಕ್ರಮ ಆಯೋಜನೆಯಾಗಿತ್ತು.

ಕರ್ನಾಟಕದ ಸಾಂಸ್ಕೃತಿಕ ಹಿರಿಮೆ ಹಾಗೂ ವೈಭವವನ್ನು ಪ್ರತಿಬಿಂಬಿಸುವ ಈ ಅದ್ದೂರಿಯ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ ಹಾಗೂ ಕರ್ನಾಟಕ ವಿಧಾನ ಪರಿಷತ್ ನ ಸಭಾಪತಿ ಬಸವರಾಜ ಹೊರಟ್ಟಿ ಅವರಿಂದ ರಾಜೇಂದ್ರ ಕುಮಾರ್ ಅವರು ‘ಸಹಕಾರ ಭೂಷಣ’ ಪ್ರಶಸ್ತಿಯನ್ನು ಸ್ವೀಕರಿಸಿಕೊಂಡರು.

ಎಂಎನ್ಆರ್ ಅದ್ಭುತ ಸಾಧನೆ:
ಸಹಕಾರ ಕ್ಷೇತ್ರದಲ್ಲಿ ಸುಮಾರು ನಾಲ್ಕೂವರೆ ದಶಕಗಳ ಕಾಲ ತನ್ನನ್ನು ತೊಡಗಿಸಿಕೊಂಡಿರುವ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಒಬ್ಬ ಮಾದರಿ ಸಹಕಾರಿ ನಾಯಕರು. ಕಳೆದ 29 ವರ್ಷಗಳಿಂದ  ಎಸ್ ಸಿಡಿಸಿಸಿ ಬ್ಯಾಂಕ್ ನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಇವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳೊಂದಿಗೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಎಸ್ ಸಿಡಿಸಿಸಿ ಬ್ಯಾಂಕ್ 111 ಶಾಖೆಗಳು  ಕೋರ್ ಬ್ಯಾಂಕಿಂಗ್ ನಂತಹ ಉತ್ಕೃಷ್ಟ ಬ್ಯಾಂಕಿಂಗ್ ಸೇವೆಯನ್ನು ಗ್ರಾಹಕರಿಗೆ ನೀಡುತ್ತಿದೆ. ಜನರ ಮನೆ ಬಾಗಿಲಿಗೆ ಬ್ಯಾಂಕ್ ಎನ್ನುವ ಆಶಯದೊಂದಿಗೆ ಮೊಬೈಲ್ ಬ್ಯಾಂಕನ್ನು ಪರಿಚಯಿಸಿದ ಹೆಗ್ಗಳಿಕೆ ಕೂಡ ರಾಜೇಂದ್ರ ಕುಮಾರ್ ಅವರದ್ದು.

ರಾಜೇಂದ್ರ ಕುಮಾರ್ ಮುಖ್ಯವಾಗಿ ಎಸ್ ಸಿಡಿಸಿಸಿ ಬ್ಯಾಂಕ್ ಮೂಲಕ ರೈತರ ಹಿತಾಸಕ್ತಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಬ್ಯಾಂಕ್  ರೈತರಿಗೆ ಕ್ಲಪ್ತ ಸಮಯದಲ್ಲಿ ಕೃಷಿ ಸಾಲ ನೀಡುತ್ತಿದೆ. ಹಾಗೆಯೇ ರೈತರಿಗೆ ನೀಡಿದ ಕೃಷಿ ಸಾಲಗಳು ಕ್ಲಪ್ತ ಸಮಯದಲ್ಲಿ ಮರುಪಾವತಿಯಾಗಿರುತ್ತದೆ. ಕಳೆದ 28 ವರ್ಷಗಳಿಂದ ಸತತವಾಗಿ  ಕೃಷಿ ಸಾಲಗಳು ಶೇ.100 ಮರುಪಾವತಿಯಾಗಿರುವುದು ರಾಷ್ಟ್ರೀಯ ದಾಖಲೆ ಆಗಿರುತ್ತದೆ. ರಾಜೇಂದ್ರ ಕುಮಾರ್ ಅಧ್ಯಕ್ಷರಾದ ಬಳಿಕ ಎಸ್ ಸಿಡಿಸಿಸಿ ಬ್ಯಾಂಕಿಗೆ 20 ಬಾರಿ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ನಿಂದ  ರಾಜ್ಯ ಪ್ರಶಸ್ತಿ ಹಾಗೂ 18 ಬಾರಿ ನಬಾರ್ಡ್ ರಾಜ್ಯ ಪ್ರಶಸ್ತಿ ಲಭಿಸಿದೆ. ಬ್ಯಾಂಕೋ ಬ್ಲೂ ರಿಬ್ಬನ್ ಹಾಗೂ ಬ್ಯಾಂಕಿಂಗ್ ಫ್ರೋಂಟಿಯರ್ಸ್ ಪ್ರಶಸ್ತಿ ಬ್ಯಾಂಕಿಗೆ ತಲಾ ಎರಡು ಬಾರಿ ದೊರೆತಿದೆ. ಮಾತ್ರವಲ್ಲ ವೈಯಕ್ತಿಕ ಸಾಧನೆಗಾಗಿ ರಾಜೇಂದ್ರ ಕುಮಾರ್ ಅವರಿಗೆ ಹಲವಾರು ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.

ಗಣ್ಯರ ಉಪಸ್ಥಿತಿ :
ಭಾಸ್ಕರ ಸುವರ್ಣ ಸಸಿಹಿತ್ಲು ಅಧ್ಯಕ್ಷರು ಕರ್ನಾಟಕ ಸಂಘ ಅಂಧೇರಿ, ಎಸ್. ಎನ್. ಉಡುಪ ಅಧ್ಯಕ್ಷರು ಸ್ವಾಗತ ಸಮಿತಿ, ಪ್ರಕಾಶ್ ಮತ್ತಿಹಳ್ಳಿ ಕಾರ್ಯದರ್ಶಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷರು ಕಲ್ಕೂರ ಪ್ರತಿಷ್ಠಾನ ಮಂಗಳೂರು, ಸುಧಾಕರ್ ಆರಾಟೆ, ಅಧ್ಯಕ್ಷರು ಚೆಂಬೂರು ಕರ್ನಾಟಕ ಸಂಘ,
ಉದ್ಯಮಿಗಳಾದ ನಾಗರಾಜ ಪಡುಕೋಣೆ,  ಪರಮೇಶ್ ಲಿಂಗಾಯತ್, ಎನ್.ಟಿ. ಪೂಜಾರಿ, ಮಾಧವ ಶೆಟ್ಟಿ, ಭಾಸ್ಕರ ಶೆಟ್ಟಿ ಮತ್ತು  ಡಿ.ಬಿ.ಅಮೀನ್, ಅಧ್ಯಕ್ಷರು ಕನ್ನಡ ಎಜುಕೇಶನ್ ಸೊಸೈಟಿ,  ಅರವಿಂದ್ ಎಲ್, ಕಾಂಚನ್, ಉಪಾಧ್ಯಕ್ಷರು ಎಂವಿಎಂ ಮುಂಬೈ , ಉಮಮಹೇಶ್ವರಿ, ಪ್ರಾಂಶುಪಾಲರು ಎನ್ ಕೆಇಎಸ್ ವಾಡ್ಲಾ, ಅಡ್ವಕೇಟ್ ವಿಜಯ್‌ ಕುಲಕರ್ಣಿ,  ಹೆಚ್. ಆರ್. ಛಲವಾದಿ, ಅಧ್ಯಕ್ಷರು ನಿಜಲಿಂಗಪ್ಪ ಶಾಲೆ, ಮಿಸ್ ಇಂಡಿಯಾ ರನ್ನರ್ ಅಪ್ ಪ್ರಭಾ ಸುವರ್ಣ ಹಾಗೂ ಕಾಸರಗೋಡು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಮೊದಲಾದವರು ಉಪಸ್ಥಿತರಿದ್ದರು. 

LEAVE A REPLY

Please enter your comment!
Please enter your name here