ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯ ಮೇಲೆ ಕಾಂಗ್ರೆಸ್ ಸುಳ್ಳು ಆಪಾದನೆ ಮಾಡಿ ಭಕ್ತಾದಿಗಳಲ್ಲಿ ಅಪನಂಬಿಕೆ ತರಲು ಯತ್ನ-ವೆಂಕಟ್ ವಳಲಂಬೆ

0

ಸುಬ್ರಹ್ಮಣ್ಯ: ನಾವೆಲ್ಲ ಆರಾಧಿಸುವ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿಯ ಮೇಲೆ ಇಲ್ಲದ ಸಲ್ಲದ ಸುಳ್ಳು ಆಪಾದನೆ ಮಾಡಿ ಆರೋಪ ಹೊರಿಸಿ ದೇಶ ವಿದೇಶದಿಂದ ಬರುವ ಭಕ್ತಾದಿಗಳಲ್ಲಿ ಅಪನಂಬಿಕೆ ಬರುವಂತೆ ಮಾಡಿರುವ ಕಾಂಗ್ರೆಸ್ ಸಮಿತಿ ಸುಬ್ರಹ್ಮಣ್ಯ ಇವರ ಹೇಳಿಕೆ ಖಂಡಿಸುತ್ತೇವೆ. ಕುಕ್ಕೆ ಸುಬ್ರಹ್ಮಣ್ಯದ ಬಗ್ಗೆ ಅಪ ನಂಬಿಕೆ ತರಿಸುವ ಕೆಲಸ ನಡೆಯುತ್ತಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಒಂದೇ ಒಂದು ರೂಪಾಯಿ ಅವ್ಯವಹಾರ ನಡೆದಿಲ್ಲ, ಒಳ ಒಪ್ಪಂದ ಮಾಡಿ ದಂಧೆ ಮಾಡಿದವರು ಈಗ ಮಾತನಾಡುತಿದ್ದಾರೆ ಎಂದು ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೆಂಕಟ್ ವಳಲಂಬೆ ಹೇಳಿದರು.ಅವರು ಸುಬ್ರಹ್ಮಣ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಆಡಳಿತ ಮಂಡಳಿಯ ಮೇಲೆ ಆರೋಪ ಹೊರಿಸುವವರೆಲ್ಲರೂ ದೇವಸ್ಥಾನದ ಆಡಳಿತ ಮಂಡಳಿ ಮತ್ತು ದೇವಾಲಯದಿಂದ ವೈಯಕ್ತಿಕ ಲಾಭ ಪಡೆದುಕೊಂಡಿದ್ದಾರೆ. ಈಗ ಯಾವುದೇ ಮಧ್ಯವರ್ತಿ ಕೆಲಸಗಳಿಗೆ ಅವಕಾಶ ನೀಡದೆ ಈಗಿನ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ಪ್ರಾಮಾಣಿಕ ಕಾರ್ಯಗಳಿಂದ ಕ್ಷೇತ್ರದ ಪಾವಿತ್ರಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುತ್ತಿದ್ದಾರೆ. ಇದು ಇವರಿಗೆ ನುಂಗಲಾರದ ತುತ್ತಾಗಿದೆ ಎಂದರು.

ಜನತಾ ಬಜಾರ್ ನಿಂದ ದಿನಸಿ ಖರೀದಿ ಸರ್ಕಾರದ ಆದೇಶ. ದಿನಸಿ ಖರೀದಿಯಲ್ಲಿ ವ್ಯತ್ಯಾಸಗಳಿದ್ದಲ್ಲಿ ಕಾರ್ಯ ನಿರ್ವಹಣಾಧಿಕಾರಿ ಪ್ರತಿ ತಿಂಗಳು ಪರಿಶೀಲಿಸಿ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದರು.  ಈ ಹಿಂದಿನ ಕಾಂಗ್ರೆಸ್ ಆಡಳಿತ ಇದ್ದಾಗ ಯಾವ ವ್ಯಕ್ತಿಗಳಿಂದ ದೇವಸ್ಥಾನಕ್ಕೆ ಹಣ ಪಾವತಿ ಬಾಕಿ ಇತ್ತೋ ಅವರಿಗೆ ಮತ್ತೆ ಟೆಂಡರ್ ಅಥವಾ ಏಲಂ ಕೊಟ್ಟ ವ್ಯವಸ್ಥೆ ನಡೆದಿದ್ದು ದಂಧೆ ನಡೆಸಿದ್ದಾರೆ ಎಂದರು.

ಕಾಂಗ್ರೆಸ್ 70 ವರ್ಷ ಆಡಳಿತ ಮಾಡಿದಾಗ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ,ಬಿಜೆಪಿ ಆಡಳಿತ ವಿದ್ದಾಗ ಮತ್ತು ಕ್ಷೇತ್ರದ ಶಾಸಕರಾದ ಎಸ್ ಅಂಗಾರ ರವರ ವಿಶೇಷ ಕಾಳಜಿಯಿಂದ ಕ್ಷೇತ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಹೆಸರು ನೀಡಿ 180 ಕೋಟಿ ಮತ್ತು ಮುಂದುವರೆದ ಕಾಮಗಾರಿಯಿಂದ ಕ್ಷೇತ್ರ ಉತ್ತಮ ಪ್ರಗತಿ ಹೊಂದಿದ್ದು. ಮುಂದೆ ಇನ್ನಷ್ಟು ಪ್ರಗತಿ ಯಾಗಲಿದೆ. ಮಾತ್ರವಲ್ಲದೆ ಮುಂದಾಲೋಚನೆಯಿಂದ ಸಾವಿರಾರು ಗಿಡಗಳನ್ನು ನೆಡಿಸುವ ಮೂಲಕ ಮುಂದಿನ ನಾಲ್ಕೈದು ವರ್ಷದಲ್ಲಿ ಪರಿಸರ ಚೆನ್ನಾಗಿ ಮೂಡಿಬರಲಿದೆ. ಇದನ್ನು ಸಹಿಸದ ಕೆಲವರು ಈ ರೀತಿಯ ಹೇಳಿಕೆಗಳು ಸತ್ಯಕ್ಕೆ ದೂರವಾಗಿದೆ, ಈಗಿನ ಆಡಳಿತ ಮಂಡಳಿಗೆ ನಮ್ಮ ಬೆಂಬಲವಿದೆ ಎಂದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಸುಬ್ರಹ್ಮಣ್ಯ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ನಡುತೋಟ, ದಿನೇಶ್ ಸಂಪ್ಯಾಡಿ, ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯರಾದ ಶಿವರಾಮ ನೆಕ್ರಾಜೆ, ಚಿದಾನಂದ ಕಂದಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here