ಶೀಘ್ರಗತಿಯಲ್ಲಿ ಬೆಳೆಯುವ 3ನೇ ದೊಡ್ಡ ಕಾನೂನು ಬಾಹಿರ ಚಟುವಟಿಕೆ – ಸೀಮಾ ನಾಗರಾಜ್
ಪುತ್ತೂರು: ಮಾನವ ಕಳ್ಳ ಸಾಗಾಣಿಕೆಯು ಅತಿ ಶೀಘ್ರಗತಿಯಲ್ಲಿ ಬೆಳೆಯುವ ಮೂರನೆ ದೊಡ್ಡ ಕಾನೂನು ಬಾಹಿರ ಚಟುವಟಿಕೆಯಾಗಿದೆ. ಇಂತಹ ಶೋಷಣೆಗೆ ಅತಿ ಹೆಚ್ಚು ಬಲಿಯಾಗುವವರು ಹೆಣ್ಣು ಮಕ್ಕಳು. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಜಾಗೃತಿ ಅರಿವು ಮೂಡಬೇಕು ಎಂದು ಪುತ್ತೂರು ವಕೀಲರ ಸಂಘದ ಜೊತೆ ಕಾರ್ಯದರ್ಶಿ ಸೀಮಾನಾಗಾರಾಜ್ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ, ಪುತ್ತೂರು,ವಕೀಲರ ಸಂಘ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆ ಪುತ್ತೂರು, ಅನಿಕೇತನ ಎಜುಕೇಶನಲ್ ಟ್ರಸ್ಟ್ ಪುತ್ತೂರು ಮತ್ತು ಮಾನವ ಕಳ್ಳ ಸಾಗಾಣಿಕೆ ತಡೆಘಟಕ, ಸಂತ ಫಿಲೊಮಿನಾ ಕಾಲೇಜು ಇವರ ಸಹಯೋಗದೊಂದಿಗೆ “ಮಾನವ ಕಳ್ಳ ಸಾಗಾಣಿಕೆತಡೆ ದಿನಾಚರಣೆ -2023” ಅಂಗವಾಗಿ ಆ.1ರಂದು ನೆಲ್ಲಿಕಟ್ಟೆ ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆಯಲ್ಲಿ 2ನೇ ಸರಣಿ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಅನಕ್ಷರಸ್ಥತೆ, ಬಡತನ, ನಿರುದ್ಯೋಗ ಸಹಿತ ಇನ್ನೂ ಹಲವು ಕಾರಣಗಳು ಮಾನವಕಳ್ಳ ಸಾಗಾಣಿಕೆ ಪ್ರಕರಣ ಹೆಚ್ಚಾಗಳು ಕಾರಣ. ಇದರಲ್ಲಿ ಶೇ.95ರಷ್ಟು ದುರ್ಬಲ ವರ್ಗದವರು ಬಲಿಯಾಗುತಿದ್ದಾರೆ. ಮಾನವ ಕಳ್ಳ ಸಾಗಾಣಿಕೆ ಜಾಮೀನು ನೀಡದ ಪ್ರಕರಣವಾಗಿದೆ. ಈ ಕುರಿತು ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸಬೇಕು. ಆನ್ ಲೈನ್ನಲ್ಲಿ ಅಪರಿಚತರೊಂದಿಗೆ ವೈಯುಕ್ತಿಕ ವಿಚಾರ ಹಂಚಿಕೊಳ್ಳಬೇಡಿ. ಆಸೆ ಮತ್ತು ಆಕಾಂಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಆಮೀಷಕ್ಕೆ ಬಲಿಯಾಗದಿರಿ. ಇಂತಹ ಅನಿಷ್ಠ ಪಿಡುಗು ತಡೆಗಟ್ಟುವಲ್ಲಿ ಎಲ್ಲರು ಕೈ ಜೋಡಿಸುವ ಎಂದರು.
ಮಕ್ಕಳಿಗೆ ಕಾನೂನು ಮಾಹಿತಿ ನೀಡಲು ಇಲಾಖೆ ಬದ್ಧ:
ಅನಿಕೇತನ ಎಜುಕೇಶನಲ್ ಟ್ರಸ್ಟ್ ನ ಆಡಳಿತ ಟ್ರಸ್ಟಿ ಹಾಗೂ ವಕೀಲ ಕೃಷ್ಣಪ್ರಸಾದ್ ನಡ್ಸಾರ್ ಅವರು ಮಾತನಾಡಿ ಗಾದೆ ಮಾತಿನಲ್ಲಿ ಅಡಿಕೆ ಕದ್ದರೂ ಕಳ್ಳ ಆನೆ ಕದ್ದರೂ ಕಳ್ಳನೇ ಆಗುತ್ತಾರೆ. ಆದರೆ ಇಲ್ಲಿ ಅಡಿಕೆ ಮತ್ತು ಆನೆ ಕದಿಯುವುದಕ್ಕಿಂತಲು ದೊಡ್ಡ ಅಪರಾಧ ಮಾನವ ಕಳ್ಳಸಾಗಾಣಿಕೆ ಆಗಿದೆ. ಇಂತಹ ಅಪರಾಧದ ಆಗುತ್ತದೆ ಎಂದಾಕ್ಷಣ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಬೇಕು. ಮಕ್ಕಳಿಗೆ ಕಾನೂನು ಸಮಸ್ಯೆಗಳಿಗೆ ಮಾಹಿತಿ ಕೊಡಲು ಇಲಾಖೆ ಬದ್ದವಾಗಿರುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರು ಜಲಜಾಕ್ಷಿ ಕೆ.ಎನ್ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ದಿನೇಶ್ ಕಾಮತ್, ಸಂತ ಫಿಲೊಮಿನಾ ಕಾಲೇಜಿನ ಪ್ರಾಧ್ಯಾಪಿಕೆ ಭಾರತಿ ಎಸ್ ರೈ ಹಾಗೂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್, ಪ್ಯಾನೆಲ್ ವಕೀಲೆ ಪ್ರಿಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ಯಾನೆಲ್ ವಕೀಲರಾದ ಅಕ್ಷತಾ ಪ್ರತಿಜ್ಞಾ ವಿಧಿ ಬೋಧಿಸಿದರು. ಶಾಲಾ ಶಿಕ್ಷಕಿ ನಳಿನಿ ಸ್ವಾಗತಿಸಿದರು. ಶಿಕ್ಷಕಿ ಅನ್ನಮ್ಮ ವಂದಿಸಿದರು. ಶಿಕ್ಷಕ ನಾರಾಯಣ ನಾಯ್ಕ ಪುಣಚ ಕಾರ್ಯಕ್ರಮ ನಿರೂಪಿಸಿದರು.