ಅಧ್ಯಕ್ಷ: ರಕ್ಷಿತ್ ರೈ ಮುಗೇರು, ಉಪಾಧ್ಯಕ್ಷ: ವಸಂತ ಶೆಟ್ಟಿ ಕಲ್ಲಡ್ಕ
ಪುತ್ತೂರು: ಒಳಮೊಗ್ರು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ರಕ್ಷಿತ್ ರೈ ಮುಗೇರು, ಉಪಾಧ್ಯಕ್ಷರಾಗಿ ವಸಂತ ಶೆಟ್ಟಿ ಕಲ್ಲಡ್ಕರವರು ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ಕರುಣಾಕರ ಶೇನವ, ದಿನೇಶ್ ರೈ ಕೆ, ಮೋಹನದಾಸ ರೈ ಕೆ, ಅದ್ದು ಯಾನೆ ಅದ್ರಾಮ, ಸುಧಾಕರ ಶೆಟ್ಟಿ, ಚಂದ್ರಕಾಂತ ಎಂ.ಎನ್, ಅಶೋಕ್ ಪೂಜಾರಿ, ಚಿತ್ರಾ ಎನ್.ಟಿ, ವಾರಿಜಾಕ್ಷಿ ಶೆಟ್ಟಿ, ಆನಂದ ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಪ್ರಕ್ರಿಯೆಯನ್ನು ರಿಟರ್ನಿಂಗ್ ಅಧಿಕಾರಿ ಶೋಭಾ ಎನ್.ಎಸ್‌ರವರು ನಡೆಸಿದ್ದರು. ಸಂಘದ ಕಾರ್ಯದರ್ಶಿ ಕೆ.ಶೇಖರ ರೈಯವರು ಸಹಕರಿಸಿದ್ದರು.