ಪುತ್ತೂರು:ಈಶ್ವರಮಂಗಲ ಗಜಾನನ ವಿದ್ಯಾಸಂಸ್ಥೆಯಲ್ಲಿ ಪ್ರಿಯದರ್ಶಿನಿ ವರ್ತುಲದ ಮೊದಲನೇ ಶೈಕ್ಷಣಿಕ ಕಾರ್ಯಗಾರವು ಆ.5ರಂದು ನಡೆಯಿತು. ಕಾರ್ಯಗಾರವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಶಿವಪ್ರಸಾದ್. ಇ .ಉದ್ಘಾಟಿಸಿ ಶಿಕ್ಷಕರಲ್ಲಿ ಸೌಹಾರ್ದತೆ ಇದ್ದಲ್ಲಿ ವಿದ್ಯಾಸಂಸ್ಥೆಯ ಪ್ರಗತಿ ಸಾಧ್ಯ ಎಂದರು.
ಗಜಾನನ ವಿದ್ಯಾಸಂಸ್ಥೆಯ ಅಧ್ಯಕ್ಷ ನನ್ಯ ಅಚ್ಯುತ ಮೂಡಿತ್ತಾಯ, ಪ್ರಾಂಶುಪಾಲ ಶಾಮಣ್ಣ, ಮುಖ್ಯ ಗುರು ಅಮರನಾಥ, ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಗುರು ನರೇಂದ್ರ ಭಟ್ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಮುಖ್ಯ ಗುರು ರಾಜೇಶ್. ಎನ್ ಮತ್ತು ವರ್ತುಲ ಸಂಯೋಜಕಿ ಸಂಧ್ಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿ ವಂದನಾ ರೈ ಕಾರ್ಕಳ ಚಟುವಟಿಕೆ ಆಧಾರಿತ ಕಲಿಕೆ ಎಂಬ ವಿಷಯದ ಕುರಿತು ಹಲವು ಚಟುವಟಿಕೆಯೊಂದಿಗಿನ ಕಾರ್ಯಾಗಾರವು ನಡೆಯಿತು. ನಾರಾಯಣ. ಭಟ್ .ರಾಮ ಕುಂಜ ಶಿಕ್ಷಕನ ನೆಲೆ ಮತ್ತು ಬೆಲೆ ಎಂಬ ವಿಷಯದ ಕುರಿತು ಸಂದರ್ಭೋಚಿತ ಮಾತನಾಡಿದರು.
ಗಜಾನನ ವಿದ್ಯಾಸಂಸ್ಥೆಯ ಶಿಕ್ಷಕಿಯರು ಪ್ರಾರ್ಥಿಸಿದರು. ಸಂಸ್ಥೆಯ ಮುಖ್ಯ ಗುರು ಅಮರನಾಥ್ ಸ್ವಾಗತಿಸಿ,ಸಹಶಿಕ್ಷಕಿ ಸೌಮ್ಯ ವಂದಿಸಿದರು.