ಮುಳಿಯ ಜ್ಯುವೆಲ್ಸ್‌ನಿಂದ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ

0

ಪುತ್ತೂರು: ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಪ್ರಸಿದ್ಧ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್ 3ರಿಂದ 12 ವರ್ಷದೊಳಗಿನ ಮಕ್ಕಳಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಛದ್ಮವೇಷ ಸ್ಪರ್ಧೆಯನ್ನು ಆಯೋಜಿಸಿದೆ. ಆ. 12 ಮತ್ತು 13ರಂದು ಈ ಸ್ಪರ್ಧೆ ನಡೆಯಲಿದ್ದು, ಸ್ಪರ್ಧಿಗಳು ಈ ಕೆಳಗಿನ ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷಣವನ್ನು ಹಾಕಬಹುದು. ಸರ್ದಾರ್ ವಲ್ಲಭಭಾಯ್ ಪಟೇಲ್, ಸುಭಾಷ್ ಚಂದ್ರ ಬೋಸ್, ಬಾಲಗಂಗಾಧರ ತಿಲಕ್, ಒನಕೆ ಓಬವ್ವ, ಭಗತ್ ಸಿಂಗ್, ಜವಾಹರ್ ಲಾಲ್ ನೆಹರು, ಮಹಾತ್ಮಾ ಗಾಂಧಿ, ಸರೋಜಿನಿ ನಾಯ್ಡು, ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ.


ಸ್ಪರ್ಧೆಯನ್ನು 3ರಿಂದ 7 ವರ್ಷ ಮತ್ತು 8ರಿಂದ 12 ವರ್ಷ- ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಫಲಿತಾಂಶವನ್ನು ಕಾರ್ಯಕ್ರಮದ ಕೊನೆಯಲ್ಲಿ ತಿಳಿಸಲಾಗುವುದು. ಎರಡೂ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಮತ್ತು ಪ್ರಶಸ್ತಿಗಳಿರುತ್ತವೆ. 3ರಿಂದ 7 ವರ್ಷದೊಳಗಿನ ವಿಭಾಗದ ಮಕ್ಕಳಿಗೆ ಆ. 12ರಂದು ಮಧ್ಯಾಹ್ನ 2:30ರಿಂದ ಹಾಗೂ 8ರಿಂದ 12 ವರ್ಷದೊಳಗಿನ ಮಕ್ಕಳಿಗೆ ಆ. 13ರಂದು ಬೆಳಗ್ಗೆ 10ರಿಂದ ಸ್ಪರ್ಧೆಗಳು ನಡೆಯುತ್ತವೆ.


ಸ್ಪರ್ಧಿಗಳಿಗೆ ನಿಬಂಧನೆಗಳನ್ನು ತಿಳಿಸಲು ಮತ್ತು ಕಾರ್ಯಕ್ರಮ ಸರಾಗವಾಗಿ ನಡೆಯಲು ತಾತ್ಕಾಲಿಕವಾಗಿ ವಾಟ್ಸಪ್ ಗ್ರೂಪ್‌ಗಳನ್ನು ರಚಿಸಲಾಗುವುದು. ಝೂಮ್ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಒಂದು ದಿನ ಮುಂಚಿತವಾಗಿ ತಿಳಿಸಲಾಗುವುದು. ಸಮಯಕ್ಕೆ ಸರಿಯಾಗಿ ಮಗುವಿಗೆ ವೇಷಭೂಷಣ ಹಾಕಿ ಸಿದ್ಧಪಡಿಸಬೇಕು. ಝೂಮ್ ಲಿಂಕ್ ಮಾಹಿತಿಯನ್ನು ವಾಟ್ಸಪ್ ಗ್ರೂಪ್ ಮೂಲಕ ತಿಳಸಲಾಗುವುದು. ಸ್ಪರ್ಧಿಗಳಿಗೆ 2 ನಿಮಿಷ ಕಾಲಾವಕಾಶವಿರುತ್ತದೆ. ನೃತ್ಯ, ಡೈಲಾಗ್ ಹಾಗೂ ಹಿನ್ನೆಲೆ ಸಂಗೀತವನ್ನು ಬಳಸಬಹುದು. ಸ್ಪರ್ಧೆಯಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು.


ನೋಂದಾವಣೆ ಮತ್ತು ಮಾಹಿತಿಗಾಗಿ 9353030916 ಸಂಖ್ಯೆಯನ್ನು ಸಂಪರ್ಕಿಸಬಹುದು. ಭಾಗವಹಿಸುವವರು ಆ.9ರ ಒಳಗಾಗಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಮುಳಿಯ ಜ್ಯವೆಲ್ಸ್ ಪ್ರಕಟಣೆ ತಿಳಿಸಿದೆ. ಕಾರ್ಯಕ್ರಮ ಮುಳಿಯ ಜ್ಯುವೆಲ್ಸ್‌ನ ಫೇಸ್‌ಬುಕ್ ಪುಟದಲ್ಲಿ ಲೈವ್ ಆಗಿ ಪ್ರಸಾರವಾಗಲಿದೆ.

LEAVE A REPLY

Please enter your comment!
Please enter your name here