ಪುತ್ತೂರು: ಜರ್ಮನಿಯ ಡ್ಯೂಸ್‌ಬರ್ಗ್ ನಲ್ಲಿ ನಡೆದ ಐರನ್‌ಮೆನ್ ಸ್ಪರ್ಧೆಯನ್ನು ಪುತ್ತೂರು ಮೂಲದ ಆದಿತ್ಯ ರಾವ್ ಮೈರ್ಪಾಡಿ ಪೂರೈಸಿದ್ದಾರೆ. ಸ್ಪರ್ಧೆಯಲ್ಲಿ 1.9 ಕಿಲೋ ಮೀಟರ್ ದೂರವನ್ನು ಈಜಿ, 90.1 ಕಿಲೋ ಮೀಟರ್ ದೂರವನ್ನು ಬೈಕ್ ರೈಡಿಂಗ್‌ನಲ್ಲಿ, 21.1 ಕಿಲೋ ಮೀಟರ್ ದೂರವನ್ನು ಓಡಿ ಒಟ್ಟು 114 ಕಿ.ಮೀ ದೂರವನ್ನು ನಿಗದಿಯಾಗಿದ್ದ 8 ಗಂಟೆಯೊಳಗೆ ಕ್ರಮಿಸಬೇಕಿದ್ದ ದಾರಿಯನ್ನು ಕೇವಲ 7 ಗಂಟೆ 3 ನಿಮಿಷದಲ್ಲಿ ಕ್ರಮಿಸಿ ಆದಿತ್ಯರಾವ್ ಮೈರ್‍ಪಾಡಿ ವಿಜೇತರಾಗಿದ್ದಾರೆ.
ಪುತ್ತೂರಿನ ಹಿರಿಯ ವಕೀಲರಾಗಿರುವ ರಾಮ್‌ಮೋಹನ್ ರಾವ್‌ರವರ ಸಹೋದರ, ಬೆಂಗಳೂರಿನಲ್ಲಿ ವಾಸವಾಗಿರುವ ಡಾ. ವಸಂತ್ ರಾವ್ ಮತ್ತು ಸುಶೀಲಾ ವಿ.ರಾವ್ ದಂಪತಿಯ ಪುತ್ರರಾದ ಆದಿತ್ಯ ರಾವ್ ಅವರು ಬೆಂಗಳೂರಿನಲ್ಲಿ ಮೆಕ್ಯಾನಿಕಲ್ ಇಂಜೀನಿಯರಿಂಗ್ ಪದವಿ ಪೂರೈಸಿ ಉನ್ನತ ವ್ಯಾಸಂಗವನ್ನು ಜರ್ಮನಿಯಲ್ಲಿ ಮಾಡಿ ಜರ್ಮನಿಯ ಪ್ರಸಿದ್ಧ Solvenext Gmbh ಕಂಪೆನಿಯಲ್ಲಿ ಕನ್ಸಲ್ಟೆಂಟ್ ಇಂಜೀನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.