ಉಪ್ಪಿನಂಗಡಿ: ಅರಫಾ ವಿದ್ಯಾಕೇಂದ್ರದಲ್ಲಿ ‘ಗ್ರೀನ್‌ಡೇ ‘ಆಚರಣೆ

0

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಉಪ್ಪಿನಂಗಡಿ ಅರಫಾ ವಿದ್ಯಾಕೇಂದ್ರದಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳಿಗೆ ಪ್ರಕೃತಿ ಮತ್ತು ಪರಿಸರದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಆ.5 ರಂದು “ಗ್ರೀನ್‌ಡೇ” ಆಚರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಕೆ.ಪಿ.ಎ. ಸಿದ್ದಿಕ್‌ರವರು ಉದ್ಘಾಟಿಸಿದರು. ಮಕ್ಕಳೆಲ್ಲರು ಹಸಿರು ಬಣ್ಣದ ಬಟ್ಟೆ ಧರಿಸಿ ಆಗಮಿಸಿದ್ದರು. ತರಗತಿಯನ್ನು ಹಸಿರು ಬಣ್ಣದ ಬಲೂನ್ ಹಾಗೂ ಶೃಂಗಾರ ವಸ್ತುಗಳಿಂದ ಅಲಂಕರಿಸಲಾಗಿತ್ತು. ಪುಟಾಣಿಗಳು ಹಸಿರು ಬಣ್ಣದ ಆಟಿಕೆಗಳನ್ನು ಜೋಡಿಸಿದ್ದರು. ಚಿಣ್ಣರೆಲ್ಲರೂ ಪಾಲ್ಗೊಂಡು ಸಂತೋಷಪಟ್ಟರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಕವಿತನವೀನ್ ಕುಲಾಲ್, ಸಹಶಿಕ್ಷಕಿ ಪವಿತ್ರ ವಿ.ಭಟ್ ಹಾಗೂ ಸಹಶಿಕ್ಷಕರು, ಆಡಳಿತಮಂಡಳಿ ಸದಸ್ಯರು, ಶಿಕ್ಷಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here