ಸದಸ್ಯರಿಗೆ ಶೇ.18 ಡಿವಿಡೆಂಡು ಘೋಷಣೆ ವಿದ್ಯಾರ್ಥಿ ವೇತನ ವಿತರಣೆ
ಎಸ್.ಕೆ.ಜಿ.ಐ.-ಪಾಲ್ಕೆ ಪ್ರಶಸ್ತಿ ಪ್ರದಾನ, ಸಾಧಕರಿಗೆ ಗೌರವ ಸನ್ಮಾನ
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಮಂಗಳೂರು: ಪುತ್ತೂರುನಲ್ಲಿಯೂ ಶಾಖೆಯನ್ನು ಹೊಂದಿರುವ ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ 2022-2023 ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.6ರಂದು ಪಿ. ಉಪೇಂದ್ರ ಆಚಾರ್ಯರವರ ಅಧ್ಯಕ್ಷತೆಯಲ್ಲಿ ಉರ್ವ ಚರ್ಚ್ ಸೆಂಟಿನರಿ ಹಾಲ್, ಲೇಡಿಹಿಲ್ ಮಂಗಳೂರು ಇದರ ಸಭಾಭವನದಲ್ಲಿ ಜರಗಿತು.
2022-2023ರ ಸಾಲಿನ ವಾರ್ಷಿಕ ವರದಿ, ಲೆಕ್ಕಪರಿಶೋಧಿತ ಆರ್ಥಿಕ ತ:ಖ್ತೆಗಳು, ಅನುಪಾಲನಾ ವರದಿ, ಲಾಭಾಂಶದ ವಿಂಗಡಣೆ, ಬಜೆಟಿಗಿಂತ ಹೆಚ್ಚಾಗಿ ಖರ್ಚಾಗಿರುವುದನ್ನು, 2023-2024ನೇ ಸಾಲಿನ ಆಯ-ವ್ಯಯ ಪಟ್ಟಿಯನ್ನು ಹಾಗೂ 2023-2024ರ ಸಾಲಿನ ಕಾರ್ಯಚಟುವಟಿಕೆ, ಇತ್ಯಾದಿಗಳನ್ನು ಸಭೆಯಲ್ಲಿ ಮಂಡಿಸಿ, ಸದಸ್ಯರ ಸರ್ವಾನುಮತದಿಂದ ಅನುಮೋದನೆ ಪಡೆದುಕೊಳ್ಳಲಾಯಿತು.
2022-2023ರ ಸಾಲಿಗೆ ಸದಸ್ಯರಿಗೆ ಶೇ.18ರಷ್ಟು ಡಿವಿಡೆಂಡು ಪಾವತಿಗೆ ಮಂಜೂರಾತಿ ಪಡೆಯಲಾಯಿತು. ‘ಎ’ ಮತ್ತು ‘ಸಿ’ವರ್ಗದ ಸದಸ್ಯರ ಮಕ್ಕಳಿಗೆ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ.75ಕ್ಕಿಂತ ಹೆಚ್ಚು ಅಂಕಗಳಿಸಿದ 213 ಮಂದಿ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ರೂ.6,87,500/- ವಿದ್ಯಾರ್ಥಿವೇತನವನ್ನು ಅವರವರ ಸಂಚಯ ಖಾತೆಗಳಿಗೆ ಜಮಾ ಮಾಡಲಾಯಿತು. ದಿ|| ಬಂಟ್ವಾಳ ಗಣಪತಿ ಆಚಾರ್ಯ ರವರ ಸ್ಮರಣಾರ್ಥ ಶ್ರೀಮತಿ ಸಕ್ಕುಬಾಯಿ ಹಾಗೂ ದಿ|| ಕೃಷ್ಣಗೋಪಾಲ ರವರ ಸ್ಮರಣಾರ್ಥ ರಜನಿ ಎಸ್. ಪೈ ಇವರು ಹೂಡಿರುವ ಠೇವಣಿಯ ಬಡ್ಡಿಯಿಂದ 2022-2023ರ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ.ಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.
ಐದು ಮಂದಿ ಶಿಲ್ಪಿಗಳಾದ ಸ್ವರ್ಣಶಿಲ್ಪ- ಮೋಹನ ಆಚಾರ್ಯ – ಮಂಗಳೂರು, ಕಾಷ್ಠಶಿಲ್ಪ- ಶಿಲ್ಪಿ ಪ್ರಭಾಕರ ಆಚಾರ್ಯ- ಗೋಪಾಡಿ, ಎರಕ ಶಿಲ್ಪ- ಶ್ರೀಧರ ಆಚಾರ್ಯ- ಮೂಡುಶೆಡ್ಡೆ, ಅಯಸ್ ಶಿಲ್ಪ- ಎಂ.ಆನಂದ ಆಚಾರ್ಯ- ಮಾಪಲಾಡಿ, ಶಿಲಾ ಶಿಲ್ಪ- ಶಿಲ್ಪಿ ಪ್ರಕಾಶ್ ಆಚಾರ್ಯ- ಕುಕ್ಕುಂದೂರು ಇವರಿಗೆ 2022-2023ರ ಸಾಲಿನ ಎಸ್.ಕೆ.ಜಿ.ಐ.ಪಾಲ್ಕೆ – ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಶಶಿಧರ ಪುರೋಹಿತ್ (ಸಾಮಾಜಿಕ ಕ್ಷೇತ್ರ), ಟಿ. ಪ್ರಶಾಂತ್ ಆಚಾರ್ಯ (ಚಿತ್ರಕಲೆ ಕ್ಷೇತ್ರ), ಸತೀಶ ಆಚಾರ್ಯ ಪೆರ್ಡೂರು (ರಂಗ ಕಲಾವಿದರು), ಸುಕನ್ಯಾ ಆಚಾರ್ಯ (ಕ್ರೀಡಾಕ್ಷೇತ್ರ), ಶಿವಪುರ ಜಗದೀಶ್ ಆಚಾರ್ಯ (ಸಂಗೀತ ಕ್ಷೇತ್ರ) ಇವರಿಗೆ ಸನ್ಮಾನ ನೀಡಿ ಅಭಿನಂದಿಸಲಾಯಿತು.
ಎಸ್.ಎಸ್.ಎಲ್.ಸಿ.ಯಲ್ಲಿ ಪ್ರಥಮ ಸ್ಥಾನ ಗಳಿಸಿದ, ಸಮಿಕ್ಷಾ (ಶೇ.99.36) ಮತ್ತು ದ್ವಿತೀಯ ಸಿಂಚನಾ (ಶೇ.98.72) ಮತ್ತು ತೃತೀಯ ಅಪೂರ್ವಲಕ್ಷ್ಮಿಎಸ್.ಎಮ್. (ಶೇ.98.56) ಹಾಗೂ ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಪ್ರಥಮ ಸ್ಥಾನ ಗಳಿಸಿದ, ಸುಶ್ಮಿತ ಸಿ.ಆಚಾರ್ಯ (ಶೇ.98.50), ದ್ವಿತೀಯ ಸ್ಥಾನಿ ವಿಷಿತಾ (ಶೇ.98.00) ಹಾಗೂ ತೃತೀಯ ತೇಜಸ್ವಿ (ಶೇ.97.83) ಯವರನ್ನು ಸೊಸೈಟಿಯ ವತಿಯಿಂದ ಹಾರ, ಫಲಪುಷ್ಪ ಸ್ಮರಣಿಕೆಯೊಂದಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಸನ್ಮಾನಿತರಾದ ಮಕ್ಕಳಿಗೆ ನಿರ್ದೇಶಕರಾದ ವಿ.ಜಯ ಆಚಾರ್ ಮತ್ತು ಅಂಬರೀಷ್ ಅಭಿಮಾನಿ ಬಿ.ಬಿ.ಸುದರ್ಶನ್ ಆಚಾರ್ಯ ಪಡುಬಿದ್ರಿ ಇವರು ಸ್ವಇಚ್ಛೆಯಿಂದ ಧನಸಹಾಯ ನೀಡಿದರು.
2022-2023ನೇ ಸಾಲಿನಲ್ಲಿ ರೂ.3,54,89,499.20/- ನಿವ್ವಳ ಲಾಭಗಳಿಸಿದ್ದು, ರೂ.19619.35 ಲಕ್ಷ ಠೇವಣಿ ಇದ್ದು, ರೂ.14,998.41 ಲಕ್ಷ ಸದಸ್ಯರ ಸಾಲ ಹೊರಬಾಕಿ ಇದ್ದು, ಒಟ್ಟು ವ್ಯವಹಾರವು ರೂ.828.61ಕೋಟಿ ನಡೆಸಿದ್ದು, ಸೊಸೈಟಿಯ ದುಡಿಯುವ ಬಂಡವಾಳ ರೂ.22368.89 ಲಕ್ಷ ಇರುತ್ತದೆ. ಸೊಸೈಟಿಯ ಆಪದ್ಧನ ನಿಧಿ ರೂ.943.36 ಲಕ್ಷ, ಕಟ್ಟಡ ನಿಧಿ ರೂ.232.40 ಲಕ್ಷ ಇರುತ್ತದೆ. ದ.ಕನ್ನಡ, ಉಡುಪಿ ಜಿಲ್ಲೆಯಾದ್ಯಂತ 16 ಬ್ಯಾಂಕಿAಗ್ ಹಾಗೂ 1 ಕೈಗಾರಿಕಾ ಶಾಖೆ, ಆಡಳಿತ ಕಛೇರಿ, ಹಾಗೂ ಉಳಿದ 5 ಶಾಖೆಗಳು ಸ್ವಂತಕಟ್ಟಡದಲ್ಲಿ ಕಾರ್ಯ ನಿರ್ವಹಿಸಿ, ಸದಸ್ಯರ ಬೇಡಿಕೆಗೆ ಸ್ಪಂದಿಸಿ ವ್ಯವಹಾರ ನಡೆಸುತ್ತಿದೆ. ಠೇವಣಿದಾರರಿಗೆ ಆಕರ್ಷಕ ಬಡ್ಡಿದರ ನೀಡುತ್ತಾ, ಸದಸ್ಯರಿಗೆ ಶೇ.18% ರಷ್ಟು ಡಿವಿಡೆಂಡು ಘೋಷಣೆ ಮಾಡಲಾಗಿದೆ. ವರ್ಷದಿಂದ ವರ್ಷಕ್ಕೆ ಉತ್ತಮ ಸಾಧನೆಗೈಯುತ್ತಾ ಸದಸ್ಯರಿಗೆ ಕಳೆದ 33 ವರ್ಷ ದಿಂದ ಡಿವಿಡೆಂಡು ನೀಡುತ್ತಾ, ಸದಸ್ಯರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಹೇಳಿ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯರವರು ಸೊಸೈಟಿಯ ಬೆಳವಣಿಗೆಗಾಗಿ ಸಹಕರಿಸಿ-ಪ್ರೋತ್ಸಾಹಿಸಿದ ಎಲ್ಲಾ ನಿರ್ದೇಶಕರನ್ನು, ಸದಸ್ಯರನ್ನು, ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದರು.
ಸನ್ಮಾನಿತ ಪ್ರಭಾಕರ ಆಚಾರ್ಯ ಗೋಪಾಡಿ, ಶ್ರೀಧರ ಆಚಾರ್ಯ ಮೂಡುಶೆಡ್ಡೆ, ಎಮ್ ಆನಂದ ಆಚಾರ್ಯ, ಶಶಿಧರ ಪುರೋಹಿತ್, ಸತೀಶ್ ಆಚಾರ್ಯ ಪೆರ್ಡೂರು, ಸುಕನ್ಯಾ ಆಚಾರ್ಯ, ಶಿವಪುರ ಜಗದೀಶ್ ಆಚಾರ್ಯ ಹಾಗೂ ಸದಸ್ಯರ ಅನಿಸಿಕೆಯಲ್ಲಿ ವಕೀಲ ಪುರುಷೋತ್ತಮ ಭಟ್, ಮ| ಯೋಗೀಶ್ ಆಚಾರ್ಯ, ಹರೀಶ್ವಂದ್ರ ಆಚಾರ್ಯ, ಎನ್. ಯೋಗೀಶ್ ಆಚಾರ್ಯ ಇವರು ಸಂಸ್ಥೆಯ ಅಭಿವೃದ್ಧಿ ಬಗ್ಗೆ ಹಿತನುಡಿಗಳನ್ನಾಡಿದರು. ಪುರೋಹಿತ್ ವೈ.ವಿ.ವಿಶ್ವಜ್ಞಮೂರ್ತಿ ಇವರು ಪ್ರಾರ್ಥನೆಗೈದು, ಉಪಾಧ್ಯಕ್ಷ ಎ. ಆನಂದ ಆಚಾರ್ಯರು ಸ್ವಾಗತಿಸಿದರು. ಉಷಾ ಮನೋಜ್ ಹಾಗೂ ಶ್ರೀಕಾಂತ ಕಾರ್ಯಕ್ರಮದ ನಿರೂಪಿಸಿದರು.
ನಿರ್ದೇಶಕರಾದ ವೈ.ವಿ.ವಿಶ್ವಜ್ಞಮೂರ್ತಿ, ಜಯ ವಿ.ಆಚಾರ್ಯ, ಶ್ರೀ ಕೆ. ಶಶಿಕಾಂತ್ ಆಚಾರ್ಯರು, ಗಿರೀಶ್ ಕುಮಾರ್ ಯು., ಮಲ್ಲಪ್ಪ ಎನ್ ಪತ್ತಾರ್, ಶ್ರೀಮತಿ ರೋಹಿಣಿ ಎಂ.ಪಿ., ಜ್ಯೋತಿ ಎಂ.ವಿ., ರಮೇಶ್ ರಾವ್ ಯು. ಪ್ರಕಾಶ್ ಆಚಾರ್ಯ ಕೆ. ಮತ್ತು ಮಂಜುನಾಥ ಆಚಾರ್ಯ ಉಪಸ್ಥಿತರಿದ್ದರು. ನಿರ್ದೇಶಕರಾದ ಕೆ.ಯಜ್ಞೇಶ್ವರ ಆಚಾರ್ಯರವರ ವಂದನಾರ್ಪಣೆಯೊಂದಿಗೆ ವಾರ್ಷಿಕ ಮಹಾಸಭೆಯು ಮುಕ್ತಾಯವಾಯಿತು.
ಪುತ್ತೂರು ಶಾಖೆಗೆ ಪ್ರಥಮ ಪ್ರಶಸ್ತಿ
2022-2023 ನೇ ಸಾಲಿನ ಸರ್ವತೋಮುಖ ಅಭಿವೃದ್ಧಿಗಾಗಿ ಶಾಖೆಗಳಿಗೆ ಪ್ರಶಸ್ತಿ ನೀಡಲಾಯಿತು. ಶಾಖೆಗಳನ್ನು ಎರಡು ವರ್ಗಗಳನ್ನಾಗಿ ಮಾಡಿ ಒಂದನೇ ವರ್ಗದಲ್ಲಿ ಪ್ರಥಮ ಸ್ಥಾನ ಪುತ್ತೂರು ಶಾಖೆ ಮತ್ತು ದ್ವಿತೀಯ ಸ್ಥಾನ ಕೋಟೇಶ್ವರ ಶಾಖೆಗೆ ನೀಡಲಾಯಿತು. ಎರಡನೇ ವರ್ಗದಲ್ಲಿ ಪ್ರಥಮ ಸ್ಥಾನ ಸಂತೆಕಟ್ಟೆ ಶಾಖೆಗೆ ಮತ್ತು ದ್ವಿತೀಯ ಸ್ಥಾನ ಪಡುಬಿದ್ರಿ ಶಾಖೆಗೆ ನೀಡಲಾಯಿತು.