ಪುತ್ತೂರು: ಕೆಯ್ಯೂರು ಗ್ರಾಮದ ಕಟ್ಟತ್ತಾರು ಸರಕಾರಿ ಹಿ.ಪ್ರಾ.ಶಾಲೆಯಿಂದ ವರ್ಗಾವಣೆಗೊಂಡು ಬೇರೆ ಶಾಲೆಗೆ ತೆರಳಿದ ನಾಲ್ವರು ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ಕೆಯ್ಯೂರು ಗ್ರಾಪಂ ಸದಸ್ಯ ಬಟ್ಯಪ್ಪ ರೈಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ವರ್ಗಾವಣೆಗೊಂಡ ಶಾಲಾ ಶಿಕ್ಷಕರ ಬಗ್ಗೆ ಶಾಲಾ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಗೌರವ ಶಿಕ್ಷಕಿ ನಳಿನಿ ಡಿ.ಯವರು ತಮ್ಮ ಮತ್ತು ಶಿಕ್ಷಕರ ಬಾಂಧವ್ಯದ ಬಗ್ಗೆ ಅನಿಸಿಕೆ ಹೇಳಿದರು. ಗ್ರಾಪಂ ಸದಸ್ಯರು, ಎಸ್‌ಡಿಎಂಸಿಯವರು, ಶಾಲಾ ಶಿಕ್ಷಕ ವೃಂದದವರು, ಪೋಷಕರು, ಮಕ್ಕಳು ಸೇರಿ ಶಿಕ್ಷಕರನ್ನು ಶಾಲು ಹೊದಿಸಿ, ಹಾರ ಹಾಕಿ, ಫಲಪುಷ್ಪ, ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಸನ್ಮಾನ ಸ್ವೀಕರಿಸಿದ ಶಿಕ್ಷಕರಾದ ವಸಂತಿ ಕೆ, ಗಂಗಾಧರ ನಾಯ್ಕ ಬಿ, ಶೈಲಜಾ ಎಸ್ ಮತ್ತು ಸಂಧ್ಯಾ ಜಿ.ಕೆ ಮಾತನಾಡಿ, ತಮ್ಮ ಮತ್ತು ಶಾಲೆಯ ಶಿಕ್ಷಕರು, ಮಕ್ಕಳೊಂದಿಗಿನ ಒಡನಾಟದ ಬಗ್ಗೆ ಪ್ರೀತಿ ವಿಶ್ವಾಸದ ಬಗ್ಗೆ ಹಾಗೂ ತಾವು ಇಲ್ಲಿ ಪಡೆದ ಅನುಭವದ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಲೆಗೆ ಒಂದು ಗೋದ್ರೆಜ್ ಕಪಾಟು ಅನ್ನು ಕೊಡುಗೆಯಾಗಿ ನೀಡಿದರು.
ವೇದಿಕೆಯಲ್ಲಿ ಗ್ರಾಪಂ ಸದಸ್ಯರಾದ ಮಮತಾ ರೈ, ನೆಬಿಸಾ, ಶೇಷಪ್ಪ ದೇರ್ಲ, ಎಸ್‌ಡಿಎಂಸಿ ಅಧ್ಯಕ್ಷ ಪ್ರಭಾಕರ ಮೇರ್ಲ, ಮಾಜಿ ಅಧ್ಯಕ್ಷ ನವೀದ್ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ತಾರಾ ಎಸ್.ಸ್ವಾಗತಿಸಿ, ಅತಿಥಿ ಶಿಕ್ಷಕಿ ಕೆ.ಮಾಣಿಕ್ಯ ವಂದಿಸಿದರು. ಸಹ ಶಿಕ್ಷಕಿ ಇಂದಿರಾ ಕೆ ಕಾರ್ಯಕ್ರಮ ನಿರೂಪಿಸಿದರು.