ಟೀಕೆಗಳಿಗೆ ಮಾತಿನಿಂದಲ್ಲ ಕೃತಿಯಿಂದ ಉತ್ತರ ನೀಡಿದ್ದೇವೆ – ದಿನೇಶ್ ಗೂಂಡೂರಾವ್
ಪುತ್ತೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಜ್ಯೋತಿ ಯೋಜನೆಗೆ ಆ.11ರಂದು ಪುತ್ತೂರಿನ ಪುರಭವನದಲ್ಲಿ ಚಾಲನೆ ನೀಡಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ, ದ.ಕ.ಜಿಲ್ಲಾ ಉಸ್ತುವಾರಿ ಸಚಿವರೂ ಆದ ದಿನೇಶ್ ಗುಂಡೂರಾವ್‌ರವರು ಯೋಜನೆಗೆ ಚಾಲನೆ ನೀಡಿ ಮಾತನಾಡಿ ಗ್ಯಾರೆಂಟಿ ಯೋಜನೆಯ ಮೂಲಕ ಬಡತನ ಪರಿಸ್ಥಿತಿಯನ್ನು ನಿರ್ಮೂಲನ ಮಾಡುವ ಕೆಲಸ ಸಿದ್ದರಾಮಯ್ಯ ನೇತ್ವತ್ವದಿಂದ ಆಗಿದೆ. ಅದೇ ರೀತಿ ಗ್ಯಾರೆಂಟಿ ಯೋಜನೆಗೆ ಹಲವು ಟೀಕೆಗಳು ಬಂದಿತ್ತು. ಅದಕ್ಕೆ ಮಾತಿನಿಂದಲ್ಲ ಕೃತಿಯಿಂದ ಮಾಡಿ ತೋರಿಸಿದ್ದೇವೆ ಎಂದರು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು. ದ ಕ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಡಾ.ಆನಂದ ಕೆ , ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಆನಂದ್ ಕೆ, ಸಹಾಯಕ ಕಮೀಷನರ್ ಗಿರೀಶ್ ನಂದನ್, ಮೆಸ್ಕಾಂ ಮಂಗಳೂರು ವಲಯದ ಮುಖ್ಯ ಇಂಜಿನಿಯರ್ ಪುಷ್ಪ ಎಸ್ ಎ, ಮಂಗಳೂರು ವೃತ್ತ ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿಯ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು.ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಡಿ ಪದ್ಮಾವತಿ, ತಾಂತ್ರಿಕ ನಿರ್ದೇಶಕ ಹೆಚ್.ಟಿ.ರಮೇಶ್ ಸ್ವಾಗತಿಸಿದರು.