ಅಧ್ಯಕ್ಷರಾಗಿ ನೆಫೀಸ – ಉಪಾಧ್ಯಕ್ಷರಾಗಿ ಲಲಿತಾ ಆಚಾರ್ಯ ಆಯ್ಕೆ
ವಿಟ್ಲ: ಪೆರುವಾಯಿ ಗ್ರಾಮ ಪಂಚಾಯತ್ ನ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಆ.11ರಂದು ನಡೆಯಿತು. ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ನೆಫೀಸ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯೆ ಲಲಿತಾ ಆಚಾರ್ಯ ರವರು ಆಯ್ಕೆಯಾಗಿದ್ದಾರೆ.
ಪೆರುವಾಯಿ ಗ್ರಾಮ ಪಂಚಾಯತ್ ನಲ್ಲಿ 8 ಮಂದಿ ಸದಸ್ಯರಿದ್ದು ಅದರಲ್ಲಿ 5 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಹಾಗೂ 3 ಬಿಜೆಪಿ ಬಂಬಲಿತ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯೆ ನೆಫೀಸ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ನಾಮಪತ್ರ ಸಲ್ಲಿಸಿದ್ದರು.ಈ ವೇಳೆ ನಡೆದ ಮತದಾನದಲ್ಲಿ ಎರಡೂ ಅಭ್ಯರ್ಥಿಗಳು ಸಮಭಲ ಸಾಧಿಸಿದ್ದರು. ಬಳಿಕ ಚೀಟಿ ಎತ್ತುವ ಮೂಲಕ ಅಧ್ಯಕ್ಷರ ಆಯ್ಕೆ ನಡೆದ ವೇಳೆ ನೆಪೀಸ ಅಧ್ಯಕ್ಷರಾಗಿ ಆಯ್ಕೆಯಾದರು.
ಬಳಿಕ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ರಶ್ಮಿ ಎಂ. ಹಾಗೂ ಬಿಜೆಪಿ ಬೆಂಬಲಿತ ಸದಸ್ಯೆ ಲಲಿತಾ ಆಚಾರ್ಯ ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ನಡೆದ ಮತದಾನದಲ್ಲಿ ಎರಡೂ ಅಭ್ಯರ್ಥಿಗಳು ಸಮಬಲ ಸಾಧಿಸಿದ್ದರು. ಬಳಿಕ ಚೀಟಿ ಎತ್ತುವ ಮೂಲಕ ಉಪಾಧ್ಯಕ್ಷರ ಆಯ್ಕೆ ನಡೆದ ವೇಳೆ ಲಲಿತಾ ಆಚಾರ್ಯ ಆಯ್ಕೆಯಾದರು.
ವಿಟ್ಲ ಸಿ.ಡಿ.ಪಿ.ಒ., ಉಷಾ ಚುನಾವಣಾ ಪ್ರಕ್ರೀಯೆ ನಡೆಸಿಕೊಟ್ಟರು, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಅಶೋಕ್ ಸಹಕರಿಸಿದರು.
ಗ್ರಾ.ಪಂ ಮಾಜಿ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಸದಸ್ಯರಾದ ರಾಜೇಂದ್ರ ರೈ, ವರುಣ್ ರೈ, ನಾರಾಯಣ ನಾಯ್ಕ್ , ರಶ್ಮಿ ಎಂ., ಮಾಲತಿ ಉಪಸ್ಥಿತರಿದ್ದರು.
ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಕೆ.ಪಿ.ಸಿ.ಸಿ. ಸದಸ್ಯ ಎಂ.ಎಸ್. ಮಹಮ್ಮದ್, ಡಿಸಿಸಿ ಕಾರ್ಯದರ್ಶಿಗಳಾದ ಪ್ರವೀಣ್ ಚಂದ್ರ ಆಳ್ವ, ಮುರಳೀಧರ ರೈ ಮಠಂತಬೆಟ್ಟು, ವಿಟ್ಲ – ಉಪ್ಪಿನಂಗಡಿ ವಕ್ತಾರ ರಮಾನಾಥ ವಿಟ್ಲ, ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಉಮಾನಾಥ ಶೆಟ್ಟಿ ಪೆರ್ನೆ, ಪೆರುವಾಯಿ ಗ್ರಾ.ಪಂ. ಮಾಜಿ ಅಧ್ಯಕ್ಷ ರಾಲ್ಫಿ ಡಿಸೋಜ, ಪ್ರಮುಖರಾದ ಸುಶಾಂತ್, ಸುಮಿತ್, ರಂಜಿತ್ ಮಾರ್ಲ್, ಗೋಪಾಲಕೃಷ್ಣ ನಾಯ್ಕ್ ಮೊದಲಾದವರು ಆಗಮಿಸಿ ಅಧ್ಯಕ್ಷರಿಗೆ ಶುಭಹಾರೈಸಿದರು.
ಮಾಣಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಪ್ರಮುಖರಾದ ಜಯರಾಮ ಮಣಿಯಾಣಿ ಕಿನ್ಯರಪಾಲು, ಮನೋರಾಜ್ ರೈ, ಬಾಲಕೃಷ್ಣ ರೈ, ವಿಶ್ವನಾಥ ಪೂಜಾರಿ, ಹರೀಶ್ ಮುಚ್ಚುರೆಬೆಟ್ಟು, ಜಯರಾಮ ರೈ ಪೇರಡ್ಕ, ಮುರಳೀಧರ ಆಚಾರ್ಯ ಅಶ್ವತ್ ನಗರ, ಗೋಪಾಲ ಎ., ಅತೀಶ್, ಪ್ರಕಾಶ್ಚಂದ್ರ ಶೆಟ್ಟಿ, ಪ್ರಭಾಕರ ಶೆಟ್ಟಿ, ಯೋಗೀಶ್ ಆಳ್ವ, ಶ್ರೀನಿವಾಸ ಪೂಜಾರಿ ಕಲ್ಲಡ್ಕ, ರಾಜೇಶ್ ಮಣಿಯಾಣಿ, ಶಿವರಾಮ ಮಣಿಯಾಣಿ ತಚ್ಚಮೆ ಮೊದಲಾದವರು ಉಪಾಧ್ಯಕ್ಷರಾದ ಲಲಿತಾ ಆಚಾರ್ಯ ರವರಿಗೆ ಶುಭಹಾರೈಸಿದರು.