ಪುತ್ತೂರು: ಕೆಎಂಜೆ, ಎಸ್ವೈಎಸ್, ಎಸ್ಸೆಸ್ಸೆಫ್ ನರಿಮೊಗರು ಶಾಖೆ ವತಿಯಿಂದ ನರಿಮೊಗರು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಶಾಲಾ ಆವರಣದಲ್ಲಿ ಬೆಳೆದಿದ್ದ ಹುಲ್ಲನ್ನು ಮೆಷಿನ್ ಮೂಲಕ ತೆಗೆದು ಸ್ವಚ್ಛಗೊಳಿಸಲಾಯಿತು.
ಶಾಲಾ ಕಟ್ಟಡಕ್ಕೆ ವಾಲಿಕೊಂಡಿದ್ದ ಮರದ ಕೊಂಬೆಗಳನ್ನು ಕಡಿದು ತೆರವುಗೊಳಿಸಲಾಯಿತು. ಶಾಲಾ ಪರಿಸರದಲ್ಲಿರುವ ಅಡಿಕೆ ತೋಟದಲ್ಲಿ ಕೆಲಸ ನಿರ್ವಹಿಸಿದರು.
ಶಾಲಾ ಎಸ್ಡಿಎಂಸಿ ಸದಸ್ಯ ಸಲೀಂ ಮಾಯಾಂಗಳ ಹಾಗೂ ಮಾಜಿ ಅಧ್ಯಕ್ಷ ಉಸ್ಮಾನ್ ನೆಕ್ಕಿಲ್ ಶ್ರಮದಾನದಲ್ಲಿ ಸಹಕರಿಸಿದರು. ಶಾಲಾ ಎಸ್ಡಿಎಂಸಿ ಅಧ್ಯಕ್ಷ ಕೃಷ್ಣರಾಜ್ ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಲತಾರವರು ಕೆಎಂಜೆ, ಎಸ್ವೈಎಸ್, ಎಸ್ಸೆಸ್ಸೆಫ್ ಕಾರ್ಯಕರ್ತರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಸ್ಡಿಎಂಸಿ ಸದಸ್ಯ ಮಮ್ಮುಞಿ, ಕೆಎಂಜೆ ನರಿಮೊಗರು ಶಾಖೆಯ ಕೋಶಾಧಿಕಾರಿ ಮುಹಮ್ಮದ್ ದರ್ಖಾಸ್, ಎಸ್ವೈಎಸ್ ನರಿಮೊಗರು ಶಾಖೆಯ ಅಧ್ಯಕ್ಷ ಅಬೂಬಕರ್, ಪ್ರಧಾನ ಕಾರ್ಯದರ್ಶಿ ಉಮ್ಮರ್ ಕೆ.ಪಿ, ಅಬ್ದುಲ್ ರಹಮಾನ್ ಕೆ. ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಅಧ್ಯಕ್ಷ ಹಾರಿಸ್ ಸಖಾಫಿ, ಎಸ್ಸೆಸ್ಸೆಫ್ ನರಿಮೊಗರು ಶಾಖೆಯ ಪ್ರಧಾನ ಕಾರ್ಯದರ್ಶಿ ಅಹ್ಮದ್ ಇರ್ಷಾದ್, ನಾಸಿರ್ ನೆಕ್ಕಿಲ್, ಇರ್ಫಾನ್ ಸಿ.ಕೆ, ಇದ್ರೀಸ್ ಮದೀನಿ, ಮುಸ್ತಾಕ್ ಹಿಶಾಮಿ ಪಾಲ್ಗೊಂಡಿದ್ದರು. ಎಸ್ವೈಎಸ್ ನರಿಮೊಗರು ಶಾಖೆಯ ಪ್ರಧಾನ ಕಾರ್ಯದರ್ಶಿ ಉಮ್ಮರ್ ಕೆ.ಪಿ ಅವರು ಕೃತಜ್ಞತೆ ಸಲ್ಲಿಸಿದರು.