ಪುತ್ತೂರು: ಶಿವಧ್ವಜ್ ಶೆಟ್ಟಿ ಚಿತ್ರ ಕಥೆ,ಸಂಭಾಷಣೆ ಬರೆದು ನಿರ್ದೇಶಿಸಿದ “ಇಂಬು” ಸದಾಭಿರುಚಿಯ ಕಲಾತ್ಮಕ ತುಳು ಚಲನ ಚಿತ್ರ 2025 ನೇ ಸಾಲಿನ ಇಂಡಿಯನ್ ಪನೋರಮ ಫಿಲ್ಮ್ ಫೆಸ್ಟಿವಲ್, ಕೊಲ್ಕತ್ತಾ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್,ಬೆಂಗಳೂರು ಫಿಲ್ಮ್ ಫೆಸ್ಟಿವಲ್ಗೆ ಆಯ್ಕೆಯಾಗಿದೆ.
ಸದಾಭೀರುಚಿಯ ಕಲಾತ್ಮಕ ಚಿತ್ರಗಳನ್ನು ತುಳು ಚಿತ್ರರಂಗಕ್ಕೆ ನೀಡುತ್ತಿರುವ ಶಿವಧ್ವಜ್ ಶೆಟ್ಟಿ ಇಂಬು ವಿನಂತಹ ಉತ್ತಮ ಗುಣಮಟ್ಟದ ಚಲನ ಚಿತ್ರವನ್ನು ತುಳು ಚಿತ್ರರಂಗಕ್ಕೆ ನೀಡಿದ್ದು ಚಿತ್ರಕ್ಕೆ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಚಿತ್ರವನ್ನು ಪ್ರಶಾಂತ್ ರೈ ನಿರ್ಮಿಸಿದ್ದು, ಸಿನೊಯ್ ವಿ. ಜೋಸೆಫ್ ಸಂಗೀತ ನೀಡಿದ್ದು, ಕ್ಯಾಮರದಲ್ಲಿ ಸುರೇಶ್ ಬೈರಸಂಧ್ರ, ಎಡಿಟಿಂಗ್ ನಲ್ಲಿ ಗಣೇಶ್ ನೀರ್ಚಾಲ್ ಕಾರ್ಯನಿರ್ವಹಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ನವೀನ್ ಡಿ. ಪಡೀಲ್ ನಟಿಸಿದ್ದು ಉಳಿದ ತಾರಾಗಣದಲ್ಲಿ ಕಾಂತಾರದ ನಟಿ ಚಂದ್ರಕಲಾ,ಕಾಸರಗೋಡ್ ಚಿನ್ನ, ತಮ್ಮಲಕ್ಷ್ಮಣ್,ಹರ್ಷ ವಾಸು ಶೆಟ್ಟಿ,ಪ್ರಶಂಶ ನಟಿಸಿದ್ದಾರೆ.
ಈ ಆಯ್ಕೆ ನನ್ನಲ್ಲಿ ಹೆಚ್ಚಿನ ಭರವಸೆಯನ್ನು ಹುಟ್ಟಿಸಿದೆ.ಇನ್ನಷ್ಟು ಚಲನ ಚಿತ್ರವನ್ನು ನಿರ್ದೇಶಿಸಲು ಪ್ರೇರೇಪಿಸಿದೆ ಮತ್ತು ನಮ್ಮ ಸಂಸ್ಕ್ರತಿ, ಭಾಷೆ, ಅಭಿರುಚಿ, ಜೀವನ ಶೈಲಿಯ ಕಂಪನ್ನು ಅಂತರಾಷ್ಟ್ರೀಯ ಮಟ್ಟದಲ್ಲು ಪಸರಿಸಬಹುದು ಎಂಬ ನನ್ನ ಆಶಯಕ್ಕೆ ಇದು ಜೀವ ನೀಡಿದೆ. ಈ ಯಶಸ್ಸಿಗೆ ನಮ್ಮ ಚಿತ್ರ ತಂಡದ ಅವಿರತ ಶ್ರಮವೇ ಕಾರಣ
ಶಿವಧ್ವಜ್ ಶೆಟ್ಟಿ ನಿರ್ದೇಶಕ
