ಮುಂಡೂರು ಗ್ರಾಮ ಪಂಚಾಯತ್‌ನಲ್ಲಿ ಗ್ರಂಥ ಪಾಲಕರ ದಿನಾಚರಣೆ

0

ಪುತ್ತೂರು: ಡಾ.ಹೆಚ್ ಆರ್ ರಂಗನಾಥ್ ಅವರ ಜನ್ಮದಿನ ಪ್ರಯುಕ್ತ ಆ.12ರಂದು ಮುಂಡೂರು ಗ್ರಾಮ ಪಂಚಾಯತ್‌ನಲ್ಲಿ ಗ್ರಂಥ ಪಾಲಕರ ದಿನಾಚರಣೆ ಆಚರಿಸಲಾಯಿತು. ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್ ದೀಪ ಬೆಳಗಿಸಿ ಚಾಲನೆ ನೀಡಿದರು.


ವೇದಿಕೆಯಲ್ಲಿ ಮುಂಡೂರು ಶಾಲಾ ಮುಖ್ಯಗುರು ವಿಜಯ, ಮುಂಡೂರು ಗ್ರಾ.ಪಂ ಕಾರ್ಯದರ್ಶಿ ಸೂರಪ್ಪ ಕೆ, ಶಾಲಾ ಶಿಕ್ಷಕಿ ರೂಪ, ಗ್ರಂಥಾಲಯ ಮೇಲ್ವಿಚಾರಕಿ ಕವಿತಾ ಎಂ.ಎಸ್ ಉಪಸ್ಥಿತರಿದ್ದರು. ಗ್ರಾ.ಪಂ ಡಾಟಾ ಎಂಟ್ರಿ ಆಪರೇಟರ್ ಶಶಿಧರ್ ಕೆ ಮಾವಿನಕಟ್ಟೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

LEAVE A REPLY

Please enter your comment!
Please enter your name here