ಆಲಂಕಾರು ಗ್ರಾ.ಪಂ ನಲ್ಲಿ ಗ್ರಂಥಪಾಲಕರ ದಿನಾಚರಣೆ

0

ಆಲಂಕಾರು: ಆಲಂಕಾರು ಗ್ರಾ.ಪಂ ನ ಗ್ರಂಥಾಲಯದಲ್ಲಿ ಡಾ.ಎಸ್ ಆರ್ ರಂಗನಾಥನ್ ರವರ ಜನ್ಮ ದಿನವನ್ನು ಗ್ರಂಥಪಾಲಕರ ದಿನಾಚರಣೆಯನ್ನಾಗಿ ಆಚರಿಸಲಾಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ಸದಾನಂದ ಆಚಾರ್ಯ ದೀಪಬೆಳಗಿಸಿ ಉದ್ಘಾಟಿಸಿದರು,ಗ್ರಾ.ಪಂ ಸದಸ್ಯರಾದ ಶಾರದ ಗ್ರಂಥ ಪಾಲಕರ ದಿನಾಚರಣೆಯ ಮಹತ್ವ ತಿಳಿಸಿದರು. ಗ್ರಂಥ ಪಾಲಕರ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಚಿತ್ರ ಕಲೆ ಮತ್ತು ದೇಶ ಭಕ್ತಿ ಗೀತೆ ಸ್ಪರ್ಧೆ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಆಲಂಕಾರು ಶಾಲಾ ಶಿಕ್ಷಕರು ,ಗ್ರಾ.ಪಂ ಮಾಜಿ ಅಧ್ಯಕ್ಷ ವಾರಿಜಾ, 108 ಆರೋಗ್ಯ ಕವಚ ಸಿಬ್ಬಂದಿಗಳು , ಯಕ್ಷಗಾನ ಗುರುಗಳಾದ ಮೋಹನ ಪಂಚಾಯತ್ ಸಿಬ್ಬಂದಿ ಗಿರಿಯಪ್ಪ , ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಂಥ ಪಾಲಕರಾದ ಕಮಲ ಎ ಇವರು ಸ್ವಾಗತಿಸಿ ,ವಂದಿಸಿ, ಶರಣ್ಯ ಸಹಕರಿಸಿದರು.

LEAVE A REPLY

Please enter your comment!
Please enter your name here