ಪುತ್ತೂರು ಕುಶಲ ಹಾಸ್ಯಪ್ರಿಯರ ಸಂಘದಿಂದ ಹಾಸ್ಯ ಸಂಜೆ ಕಾರ್ಯಕ್ರಮ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ನಡೆಯುತ್ತಿರುವ ಪುಸ್ತಕ ಹಬ್ಬ- ಸಾಹಿತ್ಯ ವೈಭವದಲ್ಲಿ ಕುಶಲ ಹಾಸ್ಯ ಪ್ರಿಯರ ಸಂಘದ ಸದಸ್ಯರಿಂದ  ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಿತು. 
ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ  ನಡೆದ ಈ ಕಾರ್ಯಕ್ರಮದಲ್ಲಿ, ಧೀಶಕ್ತಿ ಮಹಿಳಾ ಯಕ್ಷಬಳಗ ತೆಂಕಿಲ ಪುತ್ತೂರು ಹಾಗೂ ಕುಶಲ ಹಾಸ್ಯ ಸಂಘದ ಸದಸ್ಯೆಯರಿಂದ ಕಾವ್ಯಾರ್ಥ ಹಾಸ್ಯ ಸಂವಾದ ಎನ್ನುವ ವಿನೂತನ ಕಾರ್ಯಕ್ರಮ   ಪದ್ಮಾ ಕೆ ಆರ್ ಆಚಾರ್ಯರವರ ನಿರ್ದೇಶನದಲ್ಲಿ  ನಡೆಯಿತು.

ದಕ್ಷ ಯಜ್ಞ  ಯಕ್ಷಗಾನ ಪ್ರಸಂಗದಿಂದ ಹಾಸ್ಯ ಸನ್ನಿವೇಶವನ್ನು ಆಯ್ದುಕೊಂಡು ಗಮಕ ಗಾಯನಕ್ಕೆ ಅರ್ಥವಿವರಣೆ ನೀಡುವ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದರು. ಹಿಮ್ಮೇಳದಲ್ಲಿ ಗಾಯನವನ್ನು ಹಾಡಿ ಪ್ರೇಮಾ ನೂರಿತ್ತಾಯ ಸಹಕರಿಸಿದರೆ, ಮುಮ್ಮೇಳದಲ್ಲಿ  ಪದ್ಮಾ ಕೆ ಆರ್ ಆಚಾರ್ಯ(ಬ್ರಾಹ್ಮಣ), ಜಯಲಕ್ಷ್ಮಿ ವಿ ಭಟ್(ದಾಕ್ಷಾಯಿಣಿ), ಶಂಕರಿ ಶರ್ಮಾ (ಬ್ರಾಹ್ಮಣ ಪತ್ನಿ), ಹೀರಾ ಉದಯ್ (ಮಾಣಿ) -ಅರ್ಥ ವಿವರಣೆಯನ್ನು ನೀಡಿದರು. 

ಕುಶಲ ಹಾಸ್ಯ ಸಂಘದ ಅಧ್ಯಕ್ಷೆ ಹೀರಾ ಉದಯ್ ಪ್ರಸ್ತಾವಿಕ ನುಡಿಗಳೊಂದಿಗೆ  ಸ್ವಾಗತಿಸಿದರು. ಶಂಕರಿ ಶರ್ಮಾ ಕಾರ್ಯಕ್ರಮ ಸಂಯೋಜಿಸಿದ್ದರು.

LEAVE A REPLY

Please enter your comment!
Please enter your name here