ಕಾಣಿಯೂರು: ಆಧುನಿಕ ಜೀವನ ಶೈಲಿಯ ಭರಾಟೆಯಲ್ಲಿ ಈಗಿನ ತಲೆಮಾರಿನವರಿಗೆ ಪ್ರಕೃತಿದತ್ತವಾಗಿರುವ ಆರೋಗ್ಯಕರವಾದ ಆಹಾರ ಪದ್ಧತಿಯ ಬಗ್ಗೆ ಅರಿವಿರುವುದಿಲ್ಲ. ವಿದ್ಯಾ ಸಂಸ್ಥೆಗಳಲ್ಲಿ ಆಟಿಕೂಟದಂತಹ ಪ್ರತಿಯೊಂದು ಹಬ್ಬಗಳನ್ನು ಆಚರಿಸಿ ಅದರ ವಿಶೇಷತೆಗಳನ್ನು ಮಕ್ಕಳಿಗೆ ತಿಳಿಸಿದರೆ ಸ್ವಲ್ಪ ಮಟ್ಟಿಗಾದರು ಅದರ ಬಗ್ಗೆ ಅರಿವು ಉಂಟಾಗುತ್ತದೆ. ಪ್ರಗತಿ ವಿದ್ಯಾ ಸಂಸ್ಥೆ ಇಂತಹ ಎಲ್ಲಾ ಹಬ್ಬಗಳನ್ನು ಆಚರಿಸುವ ಮೂಲಕ ನಮ್ಮ ನಾಡಿನ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ ಹಿರಿಯರಾದ ಶ್ರೀಧರ ರೈ ಮಾದೋಡಿ ಹೇಳಿದರು. ಅವರು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನಡೆದ
ಆಟಿ ಕೂಟೋ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ತೆಂಗಿನ ಹಿಂಗಾರವನ್ನು ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಗನ್ನಾಥ ರೈ ನುಳಿಯಾಲು ಮಾತನಾಡಿ, ಆಡಳಿತ ಮಂಡಳಿ , ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ ಮತ್ತು ಪೋಷಕ ಬಂಧುಗಳು ಒಟ್ಟಾಗಿ ಸೇರಿ ಹಬ್ಬಗಳನ್ನು ಆಚರಿಸಿದರೆ ಶಾಲೆಯಲ್ಲಿ ಕೌಟುಂಬಿಕ ವಾತಾವರಣ ನಿರ್ಮಾಣವಾಗುತ್ತದೆ ಎಂದರು.
ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮದ ಶಿಕ್ಷಕಿ ಸರಿತಾ ಜನಾರ್ಧನ ಮಾತನಾಡಿ, ಆಟಿ ತಿಂಗಳು ಮತ್ತು ಆಟಿ ತಿಂಗಳ ಆಹಾರ ಪದ್ಧತಿಯ ಮಹತ್ವದ ಬಗ್ಗೆ ಸವಿಸ್ತಾರವಾಗಿ ಮಕ್ಕಳಿಗೆ ತಿಳಿಸಿದರು. ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿಯವರು ಮಾತನಾಡಿ, “ಗ್ರಾಮೀಣ ಪ್ರದೇಶದ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಇಂತಹ ಅನೇಕ ಕಾರ್ಯಕ್ರಮಗಳನ್ನು ನಮ್ಮ ಸಂಸ್ಥೆಯಲ್ಲಿ ಹುಟ್ಟು ಹಾಕಲಾಗುತ್ತಿದ್ದು, ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ವೇದಿಕೆಯಲ್ಲಿ ಸಂಚಾಲಕ ಜಯಸೂರ್ಯ ರೈ ಮಾದೋಡಿಯವರ ಮಾತೃಶ್ರೀ ಲಕ್ಷ್ಮಿ ಕರಿಯಪ್ಪ ರೈ, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಚಂದ್ರಹಾಸ ರೈ , ನಾಗೇಶ್ ರೈ ಮಾಳ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ಉಮೇಶ್ ಕೆ ಎಂ ಬಿ, ಉಪಾಧ್ಯಕ್ಷೆ ಜ್ಞಾನೇಶ್ವರಿ, ಶಾಲಾ ಟ್ರಸ್ಟಿ ಶ್ರೀಮತಿ ವೃಂದಾ ಜೆ ರೈ, ದೇವಿಕಿರಣ್ ರೈ ಮಾದೋಡಿ ,
ಹರಿಚರಣ್ ರೈ ಮಾದೋಡಿ, ಚಂದ್ರಶೇಖರ ರೈ ಅಗಲ್ಪಾಡಿ, ನಿಕ್ಷೇಪ್ ರೈ ಅಗಲ್ಪಾಡಿ, ಶಿಕ್ಷಕಿಯರಾದ ಹೇಮಾ ನಾಗೇಶ್ ರೈ, ಅನಿತಾ ಜೆ ರೈ ಉಪಸ್ಥಿತರಿದ್ದರು. ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಶಾಲಾ ಮುಖ್ಯ ಗುರು ಸರಸ್ವತಿ ಎಂ ವಂದಿಸಿದರು. ರಾಶಿ ಕೆ. ಸಿ ಪ್ರಾರ್ಥಿಸಿದರು. ವಿನಯ ವಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ವಿಶೇಷ ಆಕರ್ಷಣೆ: ಕಾರ್ಯಕ್ರಮದಲ್ಲಿ ಜನಪದೀಯ ವಸ್ತುಗಳ ಪ್ರದರ್ಶನಕ್ಕೆ ಇಡಲಾಗಿತ್ತು.
ಸಾಧಕ ಹಿರಿಯ ವಿದ್ಯಾರ್ಥಿ ಉತ್ತಮ ಜಿ ಮತ್ತು ಅವರ ಪೋಷಕರು ಅನೇಕ ಜನಪದಿಯ ವಸ್ತುಗಳನ್ನು ಸಂಸ್ಥೆಗೆ ಕೊಡುಗೆಯಾಗಿ ನೀಡಿದರು .ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಬೆಲ್ಲದ ತುಂಡು ಮತ್ತು ನೀರನ್ನು ಎಲ್ಲರಿಗೂ ವಿತರಿಸಲಾಯಿತು. ಎಲ್ಲಾ ಶಿಕ್ಷಕ ವೃಂದದವರು ವಿಶೇಷ ಆಟಿ ಖಾದ್ಯಗಳನ್ನು ಮಾಡಿ ತಂದಿದ್ದರು.