ಪುತ್ತೂರು: ಕೆಎಂಜೆ, ಎಸ್‌ವೈಎಸ್ ಹಾಗೂ ಎಸ್ಸೆಸ್ಸೆಫ್ ನರಿಮೊಗರು ಶಾಖೆ ವತಿಯಿಂದ ನರಿಮೊಗರು ಸಾರ್ವಜನಿಕ ಬಸ್ ತಂಗುದಾಣ ಹಾಗೂ ಅದರ ಸುತ್ತಮುತ್ತ ಸ್ವಚ್ಛಗೊಳಿಸಲಾಯಿತು. ಬಸ್‌ಸ್ಟ್ಯಾಂಡ್ ಸುತ್ತಮುತ್ತ ಬೆಳೆದಿದ್ದ ಹುಲ್ಲು ಗಿಡಗಂಟಿಗಳನ್ನು ತೆರವುಗೊಳಿಸಿ ಬಸ್‌ಸ್ಟ್ಯಾಂಡ್‌ನ ಒಳಭಾಗಕ್ಕೆ ನೀರು ಹಾಕಿ ತೊಳೆದು ಸ್ವಚ್ಛಗೊಳಿಸಲಾಯಿತು. ನಂತರ ನರಿಮೊಗರು ಜಂಕ್ಷನ್ ಸಮೀಪ ರಸ್ತೆಯ ಇಕ್ಕೆಲಗಳಲ್ಲಿ ಹುಲ್ಲು ಬೆಳೆದು ಶಾಲಾ ಮಕ್ಕಳಿಗೆ, ಪಾದಾಚಾರಿಗಳಿಗೆ ತೊಂದರೆ ಆಗುತ್ತಿರುವುದನ್ನು ಮನಗಂಡು ಶ್ರಮದಾನದ ಮೂಲಕ ಅದನ್ನು ತೆರವುಗೊಳಿಸಲಾಯಿತು.
ನರಿಮೊಗರು ಗ್ರಾ.ಪಂ ಮಾಜಿ ಅಧ್ಯಕ್ಷ ಸುಭಾಷ್‌ಚಂದ್ರ ಶೆಣೈ, ಜಯರಾಮ ಪೂಜಾರಿ, ಉಸ್ಮಾನ್ ನೆಕ್ಕಿಲು, ನರಿಮೊಗರು ಶಾಲಾ ಎಸ್‌ಡಿಎಂಸಿ ಸದಸ್ಯ ಸಲೀಂ ಪುರುಷರಕಟ್ಟೆ ಶುಭ ಹಾರೈಸಿದರು. ಸ್ವಚ್ಛತಾ ಶ್ರಮದಾನದಲ್ಲಿ ನಾಸಿರ್ ನೆಕ್ಕಿಲ್, ಎಸ್‌ವೈಎಸ್ ಅಧ್ಯಕ್ಷ ಅಬೂಬಕರ್, ಪ್ರಧಾನ ಕಾರ್ಯದರ್ಶಿ ಉಮ್ಮರ್ ಕೆ ಪಿ, ಎಸ್ಸೆಸ್ಸೆಫ್ ಪ್ರ.ಕಾರ್ಯದರ್ಶಿ ಇರ್ಷಾದ್, ಕಾರ್ಯಕರ್ತರಾದ ಇರ್ಫಾನ್, ಇದ್ರೀಸ್ ಮದೀನಿ, ಮುಸ್ತಾಕ್ ಹಿಶಾಮಿ ಭಾಗವಹಿಸಿದ್ದರು.