ಪುತ್ತೂರು: ಸರಕಾರದ ಸೂಚನೆಯಂತೆ ಈ ವರ್ಷವೂ ದೇಶದ ಸ್ವಾತಂತ್ರ್ಯೋತ್ವವನ್ನು ಪ್ರತಿ ಮನೆ ಮನೆಯಲ್ಲಿಯೂ ತ್ರಿವರ್ಣ ಧ್ವಜ ಹಾರಿಸುವ ಹರ್ ಘರ್ ತಿರಂಗಾ 2.0 ಹಮ್ಮಿಕೊಂಡಿದ್ದು ಇದಕ್ಕಾಗಿ ರಾಷ್ಟ್ರ ಧ್ವಜ ಪುತ್ತೂರು ನಗರ ಸಭೆಯಲ್ಲಿ ಲಭ್ಯವಿದೆ.
ಅಭಿಯಾನದಲ್ಲಿ ಪಾಲ್ಗೊಂಡು ಪ್ರತಿ ಮನೆಯಲ್ಲಿಯೂ ರಾಷ್ಟ್ರ ಧ್ವಜ ಹಾರಿಸಲು ಅವಶ್ಯವಿರುವ ರಾಷ್ಟ್ರ ಧ್ವಜ ಸರಕಾರ ನಿಗದಿ ಪಡಿಸಿದ ಶುಲ್ಕ ರೂ.22.50 ಪಾವತಿಸಿ ನಗರ ಸಭಾ ಕಚೇರಿಯಿಂದ ಪಡೆದುಕೊಂಡು ಅಭಿಯಾನದಲ್ಲಿ ಭಾಗವಹಿಸುವಂತೆ ನಗರ ಸಭಾ ಪೌರಾಯುಕ್ತ ಮಧು ಎಸ್ ಮನೋಹರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.