ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಗೌರವಿಸಿ ಮುನ್ನಡೆಯಬೇಕು: ಶಾಸಕ ರೈ
ಪುತ್ತೂರು: ಪ್ರತೀಯೊಂದು ಮಗುವಿನಲ್ಲೂ ಪ್ರತಿಭೆ ಇದ್ದೇ ಇದೆ ಅಟದನ್ನು ಹುಡುಕುವ ಕೆಲಸ ಶಿಕ್ಷಕರು ಮತ್ತು ಪೋಷಕರಿಂದ ಆಗಬೇಕು, ತನ್ನಲ್ಲಿರುವ ಪ್ರತಿಭೆ ಅರಿವಾದ ಬಳಿಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಗೌರವಿಸಿ ಮುನ್ನಡೆಯುವ ಮೂಲಕ ಏನಾದರೂ ಸಾಧನೆಯನ್ನು ಮಾಡಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಪಾಪೆಮಜಲು ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮತನಾಡಿದರು.
ಗ್ರಾಮೀಣ ವಿದ್ಯಾರ್ಥಿಗಳು ಇಂದು ಶಿಕ್ಷಣದಲ್ಲಿ ಕ್ರಾಂತಿಯನ್ನೇ ಮಾಡುತ್ತಿದ್ದಾರೆ, ತಮ್ಮಲ್ಲಿರುವ ಅಲಸ್ಯ ಭಾವವನ್ನು ಬಿಟ್ಟು ನಾನು ಸಾಧನೆ ಮಾಡಬಲ್ಲೆ ಎಂಬ ವಿಶ್ವಾಸ ಪ್ರತೀಯೊಬ್ಬರಲ್ಲೂ ಇರಬೇಕು. ದುಡ್ಡಿದ್ದವ ಮಾತ್ರ ಮೇಲೆ ಬರುತ್ತಾರೆ, ಹಣ ಕೊಟ್ಟರೆ ಮಾತ್ರ ಕೆಲಸ ಸಿಗುತ್ತದೆ ಎಂಬ ಭಾವನೆಯನ್ನು ಬಿಟ್ಟುಬಿಡಿ ನಿಮ್ಮಲ್ಲಿ ಪ್ರತಿಭೆ ಇದ್ದರೆ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ತಂದೆ, ತಾಯಿ, ಗುರುಗಳು, ಕಲಿತ ಶಾಲೆ ಇವುಗಳನ್ನು ಎಂದೂ ಮರೆಯಬಾರದು. ಸಮಾಜದಲ್ಲಿ ಸಭ್ಯತೆ ಉಳ್ಳ, ಪ್ರಾಮಾಣಿಕ ವ್ಯಕ್ತಿಗಳಾಗಿ ಬಾಳಿ ಬದುಕಬೇಕು ಎಂದು ಹೇಳಿದರು.
ತಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಮಾತನಾಡಿ ಕಷ್ಟದಲ್ಲೇ ಮೇಲೆ ಬಂದಿರುವ ಅಶೋಕ್ ರೈಯವರು ಇಂದು ಶಾಸಕರೆಂಬ ಉನ್ನತ ಸ್ಥಾನದಲ್ಲಿದ್ದಾರೆ. ನನ್ನಿಂದ ಏನೂ ಸಾಧ್ಯವಿಲ್ಲ ಎಂದು ಅವರು ಸುಮ್ಮನೇ ಇರುತ್ತಿದ್ದರೆ ಇಂದು ಆ ಪದವಿಗೆ ಬರುತ್ತಿರಲಿಲ್ಲ ಅದೇ ವಿದ್ಯಾರ್ಥಿಗಳು ಕೂಡಾ ಉತ್ತಮ ಕಲಿಕೆಯ ಜೊತೆಗೆ ಸಾಧಿಸಬೇಕು ಎಂಬ ಛಪಲ ಇರಬೇಕು ಆಗ ನಾವು ಜೀವನದಲ್ಲಿ ಯಶಸ್ಸು ಕಾಣುತ್ತೇವೆ ಎಂದು ಹೇಳಿದರು. ಪಾಪೆಮಜಲು ಪ್ರೌಢ ಶಾಲೆಯಲ್ಲಿ ಪಿ ಯು ತರಗತಿಯನ್ನು ಪ್ರಾರಂಭ ಮಾಡುವ ಮೂಲಕ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವಂತೆ ಶಾಸಕರಿಗೆ ಮನವಿ ಮಾಡಿದರು.
ವೇದಿಕೆಯಲ್ಲಿ ಶಾಲೆಯ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್, ಶಿಕ್ಷಣ ತಜ್ಞ ದಶರಥ ರೈ, ಮುಖ್ಯ ಗುರು ಮೋನಪ್ಪ ಬಿ ಪೂಜಾರಿ, ಎಲ್ ಡಿ ಬ್ಯಾಂಕ್ ನಿರ್ದೇಶಕ ಸೋಮಪ್ಪ ನಾಯ್ಕ, ಗ್ರಾ.ಪಂ ಸದಸ್ಯರುಗಳಾದ ದಿವ್ಯನಾಥ ಶೆಟ್ಟಿ, ಅಬ್ದುಲ್‌ರಹಿಮಾನ್ ಉಪಸ್ತಿತರಿದ್ದರು.
ಪ್ರತಿಭಾ ಪುರಸ್ಕಾರ:
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರಿಕ್ಷೆಯಲ್ಲಿ ಉನ್ನತ ಸ್ಥಾನದಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳಾದ ಆಕಾಶ್ ಪಿ ಜೆ, ಶ್ರೀನಿಕಾ , ರಕ್ಷಕ್, ಕೃಷ್ಣಾಪ್ರಜ್ಞಾ, ಪ್ರಜ್ಞಾ, ಶ್ರಾವ್ಯ ರವರನ್ನು ಶಾಲು ಹೊದಿಸಿ ಸ್ಮರನಿಕೆ ನೀಡಿ ಗೌರವಿಸಲಾಯಿತು.
ಮುಖ್ಯಗುರುಗಳಾದ ಮೋನಪ್ಪ ಬಿ ಪೂಜಾರಿ ಸ್ವಾಗತಿಸಿದರು. ಶಿಕ್ಷಕಿ ಪ್ರವೀಣಾ ಬಿ ರೈ ವಂದಿಸಿದರು. ಶಿಕ್ಷಕಿ ಸವಿತಾ ಪಿ ಕಾರ್ಯಕ್ರಮ ನಿರೂಪಿಸಿದರು.