ಕಲ್ಲೇಗ: ಕಸಬಾ ಒಕ್ಕೂಟದ ಶ್ರದ್ದಾ ಕೇಂದ್ರ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ಸ್ವಚ್ಚತಾ ಕಾರ್ಯಕ್ರಮ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಇದರ ವತಿಯಿಂದ ಆ.13ರಂದು ಕಸಬಾ ಒಕ್ಕೂಟದ ಶ್ರದ್ದಾ ಕೇಂದ್ರ ಕಲ್ಕುಡ ಕಲ್ಲುರ್ಟಿ ದೈವಸ್ಥಾನ ಕಲ್ಲೇಗ ಆವರಣದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಕಲ್ಕುಡ ಕಲ್ಲುರ್ಟಿ ದೈವಸ್ದಾನದ ಆಡಳಿತ ಮುಕ್ತೇಸರಾದ ಅಜಿತ್ ಕುಮಾರ್ ಜೈನ್, ಬಲ್ನಾಡ್ ವಲಯದ ಮಾಜಿ ವಲಯಾಧ್ಯಕ್ಷ ಚಂದ್ರಶೇಖರ ಗೌಡ ಕಲೇಗ, ಒಕ್ಕೂಟದ ಉಪಾಧ್ಯಕ್ಷೆ ಗಾಯತ್ರಿ, ಕಾರ್ಯದರ್ಶಿ ಯೋಗಿಶ್ವರಿ, ಕೋಶಾಧಿಕಾರಿ ಜಯಂತಿ, ಒಕ್ಕೂಟದ ಮಾಜಿ‌ ಅಧ್ಯಕ್ಷರಾದ ರಮಾ, ಲತಾ , ವಲಯದ ಮೇಲ್ವಿಚಾರಕಿ ಶೃತಿ ಉಮೇಶ್, ಸೇವಾ ಪ್ರತಿನಿಧಿ ಪೂಜಾ ವಸಂತ್, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here