ಪುತ್ತೂರು: ಪರ್ಲಡ್ಕ ಶಿವರಾಮ ಕಾರಂತ ಬಾಲವನದಲ್ಲಿ ದೇಶದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಹಾಯಕ ಆಯುಕ್ತ ಗಿರೀಶ್ ನಂದನ್ ಧ್ವಜಾರೋಹಣ ನಡೆಸುವ ಮೂಲಕ ಆಚರಿಸಿದರು.
ಆ.15 ವಿಶ್ವ ಸಿಪಿಆರ್ ದಿನವಾಗಿದ್ದು ಇದರ ಅಂಗವಾಗಿ ಬಾಲವನ ಈಜುಕೊಳದಲ್ಲಿ ಈಜು ತರಬೇತಿ ಪಡೆಯುತ್ತಿರುವ ಈಜುಗಾರರಿಗೆ ಮತ್ತು ನೆರೆದ ಎಲ್ಲ ಈಜು ಪೋಷಕರಿಗೆ ಸಹಾಯಕ ಆಯುಕ್ತರ ಸಮ್ಮುಖದಲ್ಲಿ ಖ್ಯಾತ ಈಜು ತರಬೇತಿದಾರರಾದ ಪಾರ್ಥ ವಾರಣಾಸಿಯವರು ಸಿಪಿಆರ್ ಪ್ರಥಮ ಚಿಕಿತ್ಸೆ ನೀಡುವ ವಿಧಾನವನ್ನು ಪ್ರಾತ್ಯಕ್ಷಿತೆ ನೀಡಿದರು. ಪುತ್ತೂರು ಅಕ್ವಾಟಿಕ್ ಕ್ಲಬ್ ನ ಅಧ್ಯಕ್ಷ ರಾಮಚಂದ್ರ ಎ, ಉಪಾಧ್ಯಕ್ಷ ಸಂಪತ್ ಕುಮಾರ್ ಕಾರ್ಯದರ್ಶಿ ನರಸಿಂಹ ಶೆಣೈ, ಸಹಕಾರ್ಯದರ್ಶಿ ಪ್ರತಿಮಾ ಹೆಗ್ಡೆ ಖಜಾಂಚಿ ಕೇಶವಕುಮಾರ್, ಈಜು ತರಬೇತುದಾರ ದೀಕ್ಷಿತ್, ಜೀವರಕ್ಷಕ ಈಜು ತರಬೇತುದಾರರಾದ ರೋಹಿತ್, ಸೀತಾರಾಮ್ ಮತ್ತು ಈಜು ಪೋಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಯುವಜನ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ ಧ್ವಜವಂದನೆ ನಿರ್ವಹಿಸಿದರು.