ಭಾರತದ ವಿಭಜನೆ ಸ್ವಾರ್ಥ ಸಾಧನೆಯ ಕೃತ್ಯ: ಪ್ರಸಾದ್ ಕುಮಾರ್

0

ಉಪ್ಪಿನಂಗಡಿ: ಅಖಂಡವಾಗಿದ್ದ ಭಾರತದ ವಿಭಜನೆ ಆಕಸ್ಮಿಕವಾದ ಘಟನೆಯಲ್ಲ. ಅದು ಸ್ವಾರ್ಥ ಸಾಧನೆಗಾಗಿ ವ್ಯವಸ್ಥಿತವಾಗಿ ಮತ್ತು ತರಾತುರಿಯಲ್ಲಿ ಮಾಡಿದ ಅಮಾನುಷ ಕೃತ್ಯವೆಂದು ವಿಶ್ವ ಹಿಂದೂ ಪರಿಷತ್ ಬಂಟ್ವಾಳದ ಘಟಕದ ಅಧ್ಯಕ್ಷ ಪ್ರಸಾದ್ ಕುಮಾರ್ ಪಿ. ತಿಳಿಸಿದರು.
ಅವರು ವಿಶ್ವ ಹಿಂದೂ ಪರಿಷತ್ ಬಜರಂಗ ದಳದ ಆಶ್ರಯದಲ್ಲಿ ಆ.13ರ ರಾತ್ರಿ ಉಪ್ಪಿನಂಗಡಿಯಲ್ಲಿ ನಡೆದ ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಪಂಜಿನ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.


ತುಷ್ಠೀಕರಣವನ್ನು ತನ್ನ ರಕ್ತಗತಗೊಳಿಸಿರುವ ಕಾಂಗ್ರೇಸ್ ವಂದೇ ಮಾತರಂ ವಿಭಜನೆಗೆ ಮುಂದಾಯಿತು. ಬಳಿಕ ಪದೇ ಪದೇ ಮತಾಂಧರ ಬೇಡಿಕೆಗೆ ಸ್ಪಂದಿಸುತ್ತಾ ಅಖಂಡ ಭಾರತವನ್ನು ತ್ರಿಖಂಡಗೊಳಿಸಿದ್ದಲ್ಲದೆ, ಇದೀಗ ಸ್ವತಂತ್ರ ಹಿಂದೂ ಸ್ಥಾನದಲ್ಲಿ ಜಾತ್ಯಾತೀತತೆಯ ಹೆಸರಿನಲ್ಲಿ ಮತಾಂಧ ಶಕ್ತಿಗಳು ಮೆರೆದಾಡುವಂತೆ ಮಾಡಲಾಗುತ್ತಿದೆ ಎಂದ ಅವರು, ದೇಶದ ವಿಭಜನೆಯ ಸಮಯದಲ್ಲಿ ಲಕ್ಷಾಂತರ ಮಂದಿ ಹಿಂದೂಗಳ ಮಾರಣ ಹೋಮ ನಡೆದಿರುವುದನ್ನು ನೆನಪಿಸಲು ಮತ್ತೆ ಅಖಂಡ ಭಾರತವನ್ನು ನಿರ್ಮಿಸಲು ಪ್ರತಿಯೋರ್ವ ಭಾರತೀಯನೂ ಸಂಕಲ್ಪ ಬದ್ಧನಾಗಬೇಕೆಂಬ ಆಶಯದೊಂದಿಗೆ ಪ್ರತಿ ವರ್ಷವೂ ಅಖಂಡ ಭಾರತ ಸಂಕಲ್ಪ ದಿನಾಚರಣೆಯನ್ನು ನಡೆಸಲಾಗುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ಪ್ರಮುಖ್ ಮೂಲಚಂದ್ರ ಕಾಂಚನ ಮಾತನಾಡಿ, ನಮ್ಮ ದೃಢ ಸಂಕಲ್ಪ 450 ವರ್ಷಗಳ ಹಿಂದಿನ ತಪ್ಪಿಗೆ ನ್ಯಾಯ ದೊರಕಿಸಿಕೊಂಡು ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಸಾಧ್ಯವಾಗುತ್ತಿದೆ ಎಂದಾದರೆ, ನಮ್ಮ ಸಂಕಲ್ಪ 77 ವರ್ಷದ ಹಿಂದಿನ ತಪ್ಪಿಗೂ ನ್ಯಾಯ ದೊರಕಿಸಿಕೊಂಡು ಅಖಂಡ ಭಾರತವನ್ನು ಕಾಣಲು ಸಾಧ್ಯವಾಗುವುದು ನಿಶ್ಚಿತವೆಂದರು.
ನಿವೃತ್ತ ಸೇನಾಧಿಕಾರಿ ಚಂದ್ರಶೇಖರ್ ಗೌಡ ಗುಂಡೋಳೆ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸುದರ್ಶನ್ , ಬಜರಂಗ ದಳದ ಸಂಚಾಲಕ ಸಂತೋಷ್ ಪೆರಿಯಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜೀವ ಮಟಂದೂರು, ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯ ಹರಿರಾಮಚಂದ್ರ, ಪ್ರಮುಖರಾದ ಪ್ರಸಾದ್ ಪಚ್ಚಾಡಿ, ತಿಮ್ಮಪ್ಪ ಇಳಂತಿಲ, ಕಿಶನ್ ಕಾಂಚನ, ಜಯರಾಮ ಕಾಂಚನ, ಜಯರಾಮ ಇಳಂತಿಲ, ಸಚಿನ್, ಮುಕುಂದ ಗೌಡ ಬಜತ್ತೂರು, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಗುಣಕರ ಅಗ್ನಾಡಿ, ಪ್ರಶಾಂತ್ ನೆಕ್ಕಿಲಾಡಿ , ಮಹೇಶ್ ಬಜತ್ತೂರು, ಸಂತೋಷ್ ಅಡೆಕ್ಕಲ್, ಕಿಶೋರ್ ನೀರಕಟ್ಟೆ, ಪ್ರಚೇತ್ ಪಿಲಿಗೂಡು, ಪವಿತ್ ಪಿಲಿಗೂಡು, ಶಶಿಧರ ಶೆಟ್ಟಿ, ಮಂಜುನಾಥ್, ದೇವರಾಜ್, ಮತ್ತಿತರರು ಭಾಗವಹಿಸಿದ್ದರು.
ರಾಜಶೇಖರ್ ರೈ ಸ್ವಾಗತಿಸಿದರು. ಸುಧಾಕರ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here