ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ಅಂಗನವಾಡಿ ಕೇಂದ್ರಕ್ಕೆ ಬಿಲ್ಲವ ಸಂಘ ಪುತ್ತೂರು ಮತ್ತು ಯುವವಾಹಿನಿ ಪುತ್ತೂರು ಘಟಕ ಇದರ ವತಿಯಿಂದ ನೂತನ ಧ್ವಜ ಸ್ತಂಭವನ್ನು ಕೊಡುಗೆ ನೀಡಿದ್ದು, ಇದರ ಉದ್ಘಾಟನೆಯನ್ನು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕಡೆಂಜಿ ನೆರವೇರಿಸಿದರು.
ಧ್ವಜರೋಹಣವನ್ನು ಯುವ ವಾಹಿನಿ ಅಧ್ಯಕ್ಷ ಉಮೇಶ್ ಬಲ್ನಾಡು ನಡೆಸಿಕೊಟ್ಟರು. ಬಾಬು ಪೂಜಾರಿ ಇದ್ಪಾಡಿ ಸಮಾಜ ಸೇವಾ ನಿರ್ದೇಶಕರು ಯುವವಾಹಿನಿ ಹಾಗೂ ಚಂದ್ರಶೇಖರ ಸನಿಲ್ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಸುಜಾತ ಎಸ್ ರೈ ಕುಂಬ್ರ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಒಳಮೊಗ್ರು ಗ್ರಾ.ಪಂ ಸದಸ್ಯ ವಿನೋದ್ ಶೆಟ್ಟಿ ಮುಡಾಲರವರು ದೀಪ ಬೆಳಗಿಸಿದರು. ಕೊಡುಗೆ ನೀಡಿದ ಸತೀಶ್ ಕಡೆಂಜಿ ಮತ್ತು ಉಮೇಶ್ ಬಲ್ನಾಡು ಹಾಗೂ ಬಾಬು ಪೂಜಾರಿ ಇದ್ಪಾಡಿ ಇವರಿಗೆ ಶಾಲು ಹಾಕಿ ಹೂ ಗುಚ್ಛ ನೀಡಿ ಗೌರವಿಸಲಾಯಿತು. ಅಂಗನವಾಡಿ ಕೇಂದ್ರಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಅವರು ನೀಡಿದ ಶುದ್ದ ನೀರಿನ ಘಟಕಕ್ಕೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಮಾಡಿಸಿಕೊಟ್ಟ ಸಂತೋಷ್ ರೈ ಕುಂಬ್ರ ರವರಿಗೆ ಶಾಲು ಹಾಕಿ ಹೂಗುಚ್ಛ ನೀಡಿ ಗೌರವಿಸಲಾಯಿತು. ರಾಜೀವಿ ಎಸ್ ರೈ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಕಾರ್ಯ ನಿರ್ವಹಣಾಧಿಕಾರಿಯವರು ಮಕ್ಕಳಿಗೆ ಬಹುಮಾನಗಳ ಪ್ರಾಯೋಜಕತ್ವ ನೀಡಿ ಸಹಕರಿಸಿದರು. ಬಾಲವಿಕಾಸ ಸಮಿತಿ ಸದಸ್ಯರಾದ ಎಸ್ ಮಾಧವ ರೈ ಕುಂಬ್ರ, ಶಶಿಕಲಾ ಬಡಕೋಡಿ, ರೋಹಿಣಿ ಬಡಕೋಡಿ, ಅನಿತಾ ನಿತೀಶ್ ಶಾಂತಿವನ, ಮಲ್ಲಿಕಾ ಎಸ್ ಕುಂಬ್ರ , ದೀಪಿಕಾ ಮುಡಾಲ , ಮೀನಾಕ್ಷಿ ರೈ ರವರು ಹೂಗುಚ್ಛ ನೀಡಿ ಅತಿಥಿಗಳನ್ನು ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಆಶಾಲತಾ ರೈ ಕಾರ್ಯಕ್ರಮ ನಿರೂಪಿಸಿದರು. ರಾಜೀವಿ ಕೆ ವಂದಿಸಿದರು. ಮಕ್ಕಳಿಗೆ ಸಿಹಿ ತಿಂಡಿ ವ್ಯವಸ್ಥೆಯನ್ನು ವರ್ತಕರ ಸಂಘ ಕುಂಬ್ರ, ಸುರೇಶ್ ಸುಶಾ ಡ್ರೆಸ್ಸಸ್ ಕುಂಬ್ರ, ಜಗದೀಶ್ ರೈ ಅಲಂಗೂರು ಶ್ರೀ ಮಹಾಕಾಳಿ ಹೋಂ ಪ್ರಾಡಕ್ಟ್ ಕುಂಬ್ರ ರವರು ನೀಡಿ ಸಹಕರಿಸಿದರು. ಈ ಸಂದರ್ಭದಲ್ಲಿ ವರ್ತಕರ ಸಂಘದ ಸದಸ್ಯರು, ಶಾಲಾ ಶಿಕ್ಷಕರು, ಸ್ತ್ರೀ ಶಕ್ತಿ ಸದಸ್ಯರಾದ ಶಶಿಕಲಾ ಮುಡಾಳ, ಭಾರತಿ ಎಸ್ ರೈ, ಶೃತಿ ಬಡಕೋಡಿ, ಅನಿತಾ ರೈ, ಲೀಲಾವತಿ, ಜಯಶ್ರೀ, ಪುಷ್ಪಲತಾ, ಮೈಮುನ, ಪುಷ್ಪ, ಅಶ್ವಿತ, ಸೀತಾ, ಯಶೋದಾ, ಲಲಿತಾ, ಶಿವಪ್ರಸಾದ್, ಹಾಗೂ ಮಕ್ಕಳ ತಾಯಂದಿರು ಹಾಗೂ ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.