ನೆಲ್ಯಾಡಿ: ಗ್ರಾಮ ವಿಕಾಸ ಸಂಘ ಪಡ್ಪು ಮುದ್ಯ, ಬಜತ್ತೂರು ಇದರ ದಶ ಸಂಭ್ರಮದ ಪ್ರಯುಕ್ತ ವನಮಹೋತ್ಸವ ನಡೆಯಿತು.

ಪಡ್ಪು ದೈವಸ್ಥಾನ, ಕಾಂಚನ ಮಂಜಿಪಲ್ಲದಲ್ಲಿ ರಸ್ತೆ ಬದಿಯಲ್ಲಿ ಗಿಡ ನೆಡಲಾಯಿತು. 10ನೇ ವರ್ಷದ ವನಮಹೋತ್ಸವವನ್ನು ಪಡ್ಪು ದೈವಸ್ಥಾನದ ವ್ಯವಸ್ಥಾಪಕ ದಾಮೋದರ ಗೌಡ ಶೇಡಿಗುತ್ತು ಮತ್ತು ಸಂತೋಷ್ ಕುಮಾರ್ ಬಾರಿಕೆ ಮನೆ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ದಯಾನಂದ ಗೌಡ ಅರಾಲುತೋಟ ಅಧ್ಯಕ್ಷತೆ ವಹಿಸಿದ್ದರು. ಬಜತ್ತೂರು ಗ್ರಾ.ಪಂ.ಸದಸ್ಯರಾದ ಮಾಧವ ಒರುಂಬೋಡಿ, ಉಮೇಶ್ ಓಡ್ರಪಾಲು, ಮುದ್ಯ ಭಜನಾ ಮಂಡಳಿಯ ಅಧ್ಯಕ್ಷ ನಾರಾಯಣ ನೀರಕಟ್ಟೆ, ಮುದ್ಯ ಗಣೇಶೋತ್ಸವ ಸಮಿತಿ ಅಧ್ಯಕ್ಷ ಗೋಪಾಲ ವಳಾಲುದಡ್ಡು, ಧರ್ಮಸ್ಥಳ ಶೌರ್ಯ ಸಂಘದ ಅಧ್ಯಕ್ಷ ಸದಾನಂದ ಶಿಬಾರ್ಲ, ವಳಾಲು ಒಕ್ಕೂಟದ ಅಧ್ಯಕ್ಷ ಮಹೇಂದ್ರ ವರ್ಮ, ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಗೀತಾ ಮುದ್ಯ, ಮುದ್ಯ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಸೋಮಸುಂದರ ಕೊಡಿಪಾನ, ಕಾರ್ಯದರ್ಶಿ ಶಶಿಧರ ಮುದ್ಯ, ಧನಂಜಯ ಬಾರಿಕೆ, ಸೀತಾರಾಮ ಶೇಡಿ, ಸಂಘದ ಕೋಶಾಧಿಕಾರಿ ಮೋಹನ ಪಡ್ಪು, ಗೌರವಾಧ್ಯಕ್ಷ ಸುರೇಶ್ ನಂಜಳಿ, ಪವನ್ ಮುದ್ಯ, ಪೂವಪ್ಪ ನಂಜಳಿ, ರಾಜೇಶ್ ಅರಾಲುತೋಟ, ವಾಸುದಡ್ಡು, ಜನಾರ್ದನ ಶೇಡಿ, ರಾಧಾಕೃಷ್ಣ ನಡುವಡ್ಕ, ಶ್ರೀಧರ ನಡುವಡ್ಕ, ಗ್ರಾಮ ವಿಕಾಸ ಸಂಘದ ಮಾಜಿ ಅಧ್ಯಕ್ಷ ಸಂಜೀವ ನಡುವಡ್ಕ, ಪೂವಪ್ಪ ಕೊಡಿಪಾನ, ಅವಿನಾಶ್ ಉಪಾತಿಪಾಲು, ಅವಿನಾಶ್ ಶೇಡಿ, ತಿಲಕ್ ದಡ್ಡು, ರತ್ನಾಕರ ದಡ್ಡು, ವಸಂತ ಕಾಂಚನ, ಹರೀಶ್ ಪಿಜಕ್ಕಳ, ಶೇಖರ ಮುದ್ಯ, ಉಮೇಶ್ ಪಲ್ಲಕೋಡಿ ಮುದ್ಯ, ಶ್ರೀಧರ ಮಂಜಿಪಲ್ಲ, ರವಿ ಒರುಂಬೋಡಿ, ಸಹಕರಿಸಿದರು. ದಯಾನಂದ ಅರಾಲುತೋಟ ಸ್ವಾಗತಿಸಿ, ಕಾರ್ಯದರ್ಶಿ ಮನೋಜ್ ನೀರಕಟ್ಟೆ ವಂದಿಸಿದರು. ಜಗದೀಶ್ ಬಾರಿಕೆ ನಿರೂಪಣೆ ಮಾಡಿದರು.
