ವೀರಮಂಗಲ ಶಾಲೆಯಲ್ಲಿ ಸ್ವಾತಂತ್ರೋತ್ಸವ

0

ಪುತ್ತೂರು : ವೀರಮಂಗಲ ಶಾಲೆಯಲ್ಲಿ 77 ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಎಸ್ ಡಿ ಎಂ ಸಿ ಅಧ್ಯಕ್ಷೆ ಅನುಪಮ ಧ್ವಜಾರೋಹಣ ಗೈದರು ಶಾಲಾ ಎಸ್ ಡಿ ಎಂ ಸಿ ಸರ್ವ ಸದಸ್ಯರು , ಪೋಷಕರು ಊರವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಕ್ಕಳಿಂದ ವೈಭವದ ಮೆರವಣಿಗೆ ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ಗ್ರಾ ಪಂ ಸದಸ್ಯರಾದ ವಸಂತಿ,ಚಿತ್ರಾ, ಪದ್ಮಾವತಿ , ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಾಬಲ ಶೆಟ್ಟಿ, ಭಾಗವಹಿಸಿದರು. ಎಲ್ ಕೆ ಜಿ ವಿದ್ಯಾರ್ಥಿಗಳಿಂದ ವೈವಿದ್ಯಮಯ ನೃತ್ಯ ರೂಪಕ, ಶಾಲಾ ವಿದ್ಯಾರ್ಥಿಗಳಿಂದ ಹಾಡು ನೃತ್ಯ ಕಾರ್ಯಕ್ರಮಗಳು ನಡೆಯಿತು. ಶಾಲಾ ಮುಖ್ಯಗುರು ತಾರಾನಾಥ ಸವಣೂರು ಸ್ವಾಗತಿಸಿದರು ಶಾಲಾ ಶಿಕ್ಷಕರಾದ ಹರಿಣಾಕ್ಷಿ ಎಂ, ಶೋಭಾ, ಶ್ರೀಲತಾ,ಹೇಮಾವತಿ, ಕವಿತಾ, ಶರಣ್ಯ,ನಳಿನಿ,ಚಂದ್ರಾವತಿ ಸಹಕರಿಸಿದರು.‌

LEAVE A REPLY

Please enter your comment!
Please enter your name here