ಪುತ್ತೂರು: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ (ರಿ) ಕೇಂದ್ರ ಸಮಿತಿ ಹುಬ್ಬಳ್ಳಿ ಜಿಲ್ಲಾ ಸಮಿತಿ ಉಡುಪಿ,ದ.ಕ .ಹಾಗೂ ಪರ್ಯಾಯ ಶ್ರೀ ಕೃಷ್ಣಾಪುರ ಮಠ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಪುಸ್ತಕ ದಾನ ಹಾಗೂ ಜಿಲ್ಲಾ ಸಮ್ಮೇಳನ ಸಂಭ್ರಮ ಉಡುಪಿ ರಾಜಾಂಗಣದಲ್ಲಿ ಆ.13ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಮೂಲತಃ ಬಾರಕೂರಿನವರಾದ ಪುತ್ತೂರು ಬೊಳುವಾರು ನಿವಾಸಿಯಾಗಿರುವ ಸರಕಾರಿ ಪ್ರೌಢಶಾಲೆ ಕಬಕದ ಶಿಕ್ಷಕಿ ಶಾಂತಾ ಪುತ್ತೂರುರವರ ಶಿಕ್ಷಣ ಹಾಗೂ ಸಾಹಿತ್ಯ ಸೇವೆಯನ್ನು ಗುರುತಿಸಿ ಪರ್ಯಾಯ ಶ್ರೀ ಕೃಷ್ಣಾಪುರ ಮಠ ಶ್ರೀಗಳ ದಿವ್ಯ ಸಾನಿಧ್ಯ ದಲ್ಲಿ ಗೌರವಿಸಲಾಯಿತು.
ಶ್ರೀ ಎನ್ ರಾಜು ಆಚಾರ್ಯ ಕ.ಚು.ಸಾ.ಪ.ಉಡುಪಿ,ಪ್ರೊ.ಜಿ.ಯು.ನಾಯಕ ಇವರನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ಸಮ್ಮೇಳನ ಸಭಾಧ್ಯಕ್ಷ ಪ್ರೋ.ಜಿ.ಯು.ನಾಯಕ,ಕ.ಚು.ಸಾ.ಪ ರಾಜ್ಯ ಸಂಚಾಲಕರಾದ ಕೃಷ್ಣ ಮೂರ್ತಿ ಕುಲಕರ್ಣಿ, ಎನ್ ರಾಜು ಆಚಾರ್ಯ ಕ.ಚು.ಸಾ.ಪ.ಉಡುಪಿ,ಕರಾವಳಿ ಕರ್ನಾಟಕ ವಿಭಾಗೀಯ ಘಟಕದ ಅಧ್ಯಕ್ಷ ರವೀಂದ್ರ ಶೆಟ್ಟಿ ಬಳಂಜ,ಕ.ಚು.ಸಾ.ಪ.ಅಧ್ಯಕ್ಷ ಶೇಖರಗೌಡ ಪಾಟೀಲ ರಟ್ಟೆಹಳ್ಳಿ ,ಕವಿ ಗೋಪಾಲಭಟ್ಟರು ,ಸಂಘಟಕ ಪತ್ರಕರ್ತ ಡಾ.ಶೇಖರ್ ಅಜೆಕಾರು, ಗೋಪಾಲಭಟ್ಟರು ಹಿರಿಯ ಕವಿಗಳು,ಹಿರಿಯ ಚಿಂತಕರು ಉಡುಪಿ ವಿಶ್ವನಾಥ ಶೆಣೈ ,ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಅಂಶುಮಾಲಿ , ಜಯಾನಂದ ಪೆರಾಜೆ ,ಕ.ಚು.ಸಾ.ಪ.ಜಿಲ್ಲಾಧ್ಯಕ್ಷ ಗುರುರಾಜ್ ಎಂ.ಆರ್.ಕಾಸರಗೋಡು,ಡಾ.ವಾಣಿಶ್ರೀ ಕಾಸರಗೋಡು ಉಪಸ್ಥಿತರಿದ್ದರು.