ಉಪ್ಪಿನಂಗಡಿ: ಅರಫಾ ವಿದ್ಯಾಕೇಂದ್ರ, ಉಪ್ಪಿನಂಗಡಿ ಇಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ನ್ಯಾಯವಾದಿ ನೌಶದ್ ಕೆ.ಎಂ.ರವರು ಧ್ವಜಾರೋಹಣ ನೆರವೇರಿಸಿದರು.
ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ನೌಶಾದ್ ಕೆ.ಎಂ.ಅವರು, ಸ್ವಾತಂತ್ರ್ಯ ಪೂರ್ವದ ಪರಿಸ್ಥಿತಿ ಮತ್ತು ನಂತರದ ಬೆಳವಣಿಗೆಯ ಬಗ್ಗೆ ಬೆಳಕು ಚೆಲ್ಲಿದರು. ಶಾಲೆಯ ಶಿಕ್ಷಕರಾದ ಶ್ರೀಮತಿ ಕವಿತ, ನವೀನ್ ಕುಲಾಲ್‌ರವರು ಪ್ರಾಸ್ತವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಶಾಲೆಯ ಅಧ್ಯಕ್ಷ ಕೆ.ಪಿ.ಎ ಸಿದ್ದಿಕ್, ಸಿಮ್ರಾನ್‌ರವರು ಉಪಸ್ಥಿತರಿದ್ದರು. ನಝೀರ್ ಮಠ ಶುಭ ಹಾರೈಸಿದರು. ಶಿಕ್ಷಕರಾದ ಲೋಕೇಶ್ ಎಚ್., ಅದ್ನಾನ್ ಅನ್ಸಾರಿಯವರು ಸ್ವಾತಂತ್ರ್ಯ ಹೋರಾಟಗಾರರ ಸವಿ ನೆನಪುಗಳನ್ನು ಮೆಲುಕು ಹಾಕಿದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಭಾಷಣ, ಹಾಡು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಶಿಕ್ಷಕರು, ಸಿಬ್ಬಂದಿ ವರ್ಗದವರು, ಪೋಷಕವೃಂದ ಉಪಸ್ಥಿತರಿದ್ದರು. 9ನೇ ತರಗತಿಯ ವಿದ್ಯಾರ್ಥಿನಿ ನಿಶಾನ ನಿರೂಪಿಸಿದರು. 10ನೇ ತರಗತಿಯ ಅಫೀಫಾ ಸ್ವಾಗತಿಸಿದರು. 8ನೇ ತರಗತಿಯ ಆಯಿಷಾ ಸಮನ್ ವಂದಿಸಿದರು.