ಕೆದಂಬಾಡಿ ವಲಯದ ದೇರ್ಲ ಮತ್ತು ದೇವಿನಗರ ಆಟಿದ ಕೂಟ ಕಾರ್ಯಕ್ರಮ

0

ಕೆಯ್ಯೂರು: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ)ಪುತ್ತೂರು ಇದರ ವತಿಯಿಂದ ಶ್ರೀ ಕ್ಷೇ. ಧ.ಗ್ರಾ.ಯೋಜನೆಯ ಕಾರ್ಯಕ್ಷೇತ್ರ ಕೆದಂಬಾಡಿ ವಲಯದ ದೇರ್ಲ ಮತ್ತು ದೇವಿನಗರ ಆಟಿದ ಕೂಟ ಕಾರ್ಯಕ್ರಮವು ಜಯ ಕರ್ನಾಟಕ ಸಭಾಭವನ ಕೆಯ್ಯೂರು ಸಭಾಂಗಣದಲ್ಲಿ ಆ.13ರಂದು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ ದೀಪ ಪ್ರಜ್ವಲಿಸುವ ಮೂಲಕ ಉಧ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೆಯ್ಯೂರು ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಬು ಪಾಟಾಳಿ ದೇರ್ಲ, ವಿಶ್ವನಾಥ ಶೆಟ್ಟಿ ಸಾಗು, ಈಶ್ವರಿ ಜೆ.ರೈ ಸಂತೋಷ್ ನಗರ, ಮಮತಾ ರೈ ಕೆಯ್ಯೂರು, ಕೆದಂಬಾಡಿ ವಲಯ ಶ್ರೀ ಕ್ಷೇತ್ರ ದ.ಗ್ರಾ.ಯೋಜನೆ ಕೆದಂಬಾಡಿ ವಲಯ ಮೇಲ್ವಿಚಾರಕಿ ಶುಭಾವತಿ , ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ದೇರ್ಲ ಬಿ ಒಕ್ಕೂಟ ಅಧ್ಯಕ್ಷ ಬೇಬಿ ಪೂಜಾರಿ ದೇರ್ಲ, ದೇವಿನಗರ ಬಿ ಒಕ್ಕೂಟ ಅದ್ಯಕ್ಷ ರವಿಕುಮಾರ್ ಕೈತ್ತಡ್ಕ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಕ್ಕಳಿಗೆ , ಮಹಿಳೆಯರಿಗೆ, ಪುರುಷರಿಗೆ ಆಟೋಟ ಸ್ವರ್ದೇ ನಡೆದು ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ದೇರ್ಲ ಒಕ್ಕೂಟ ಮತ್ತು ದೇವಿನಗರ ಒಕ್ಕೂಟದ ಸದಸ್ಯರು ತಯಾರಿಸಿದ ಆಟಿ ತಿಂಗಳ ವಿಶಿಷ್ಟ ತಿಂಡಿ ತಿನಸುಗಳನ್ನು ಒಳಗೊಂಡ ಸುವ್ಯವ್ಯಸ್ಥಿತ ಬೋಜನ ವ್ಯವಸ್ಥೆ ನಡೆಯಿತು. ಸಂಘದ ಸದಸ್ಯ ಹರೀಶ ಬಳಗದವರಿಂದ ಆಟಿ ತಿಂಗಳ ಆಟಿ ಕಳೆಂಜ ನಾಟ್ಯಗಾರಿಕೆ ನಡೆಯಿತು. ಶಿವಶ್ರೀ ತಂಡದ ಸದಸ್ಯ ಹರಿನಾಥ ದೆರ್ಲ ತನ್ನ ಜೀವನಕ್ಕೆ  ಸಂಘದಿಂದ ಆದ ಅನುಭವ , ಪ್ರಯೋಜನವನ್ನು ಅನಿಸಿಕೆಯ ಮೂಲಕ ತಿಳಿಸಿದರು.   ಈ ಸಂದರ್ಭದಲ್ಲಿ   ಶ್ರೀ ಕ್ಷೇತ್ರ ದ.ಗ್ರಾ.ಯೋ.ಕೆದಂಬಾಡಿ ವಲಯದ ದೇವಿನಗರ ಅದ್ಯಕ್ಷ ರವಿಕುಮಾರ್ ಕೈತ್ತಡ್ಕ ಸ್ವಾಗತಿಸಿ, ವಂದಿಸಿದರು.   ಯೋಜನೆಯ ಪದಾಧಿಕಾರಿಗಳು ಸಂಘದ ಸದಸ್ಯರು  ಉಪಸ್ಥಿತರಿದ್ದರು.

              ಸಮರೋಪ ಸಮಾರಂಭ

 ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ)ಪುತ್ತೂರು ಇದರ ವತಿಯಿಂದ ಶ್ರೀ ಕ್ಷೇ. ಧ.ಗ್ರಾ.ಯೋಜನೆಯ ಕಾರ್ಯಕ್ಷೇತ್ರ ಕೆದಂಬಾಡಿ ವಲಯದ ದೇರ್ಲ ಮತ್ತು ದೇವಿನಗರ ಆಟಿದ ಕೂಟ ಕಾರ್ಯಕ್ರಮದ ಸಮಾರೋಪ ಸಮಾರಂಭದ ಆದ್ಯಕ್ಷತೆಯನ್ನು ದೇರ್ಲ ಒಕ್ಕೂಟದ ಅಧ್ಯಕ್ಷ ಬೇಬಿ ಪೂಜಾರಿ ದೇರ್ಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ, ಶ್ರೀ ಕ್ಷೇತ್ರ ಕೆಯ್ಯೂರು  ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಪದ್ಮನಾಭ ಪಿ.ಎಸ್ ಪಲ್ಲತ್ತಡ್ಕ,  ದೇರ್ಲ ಒಕ್ಕೂಟ ಅಧ್ಯಕ್ಷ ಬೇಬಿ ಪೂಜಾರಿ ದೇರ್ಲ,  ದೇವಿನಗರ ಒಕ್ಕೂಟ ಅದ್ಯಕ್ಷ ರವಿಕುಮಾರ್ ಕೈತ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದೇರ್ಲ, ದೇವಿನಗರ ಒಕ್ಕೂಟದ ಪಧಾದಿಕಾರಿಗಳು, ಸದಸ್ಯರು, ಸ್ವಾತಿ ಜ್ಞಾನ ವಿಕಾಶ ಕೇಂದ್ರದ ಸದಸ್ಯರು, ದೇರ್ಲ ಬಿ ಒಕ್ಕೂಟ ಮಾಜಿ ಅಧ್ಯಕ್ಷ ಚಂದ್ರಶೇಖರ ರೈ , ದೇವಿನಗರ ಒಕ್ಕೂಟ ಸೇವಾಪ್ರತಿನಿಧಿ ಶ್ರೀಮತಿ, ಕೆದಂಬಾಡಿ ವಲಯ ಮೇಲ್ವಿಚಾರಕಿ ಶುಭವಾತಿ ಕಾರ್ಯಕ್ರಮ ನಿರೂಪಿಸಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ ಸ್ವಾಗತಿಸಿ,ದೇರ್ಲ ಒಕ್ಕೂಟ ಸೇವಾಪ್ರತಿನಿಧಿ ಲತಾ ಕೈತ್ತಡ್ಕ ವಂದಿಸಿದರು.

LEAVE A REPLY

Please enter your comment!
Please enter your name here