ಪಾಣಾಜೆ ಗ್ರಾಪಂ- ಅಧ್ಯಕ್ಷರಾಗಿ ಮೈಮೂನತುಲ್ ಮೆಹ್ರಾ, ಉಪಾಧ್ಯಕ್ಷೆಯಾಗಿ ಜಯಶ್ರೀ ಆಯ್ಕೆ

0

ಪುತ್ತೂರು: ಪಾಣಾಜೆ ಗ್ರಾ.ಪಂ ನ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಪಕ್ಷೇತರ ಸದಸ್ಯೆ ಮೈಮೂನತುಲ್‌ ಮೆಹ್ರಾ ಅಧ್ಯಕ್ಷೆಯಾಗಿ ಮತ್ತು ಬಿಜೆಪಿ ಬೆಂಬಲಿತ ಸದಸ್ಯೆ ಜಯಶ್ರೀ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಉಪಾಧ್ಯಕ್ಷ ಅಬೂಬಕ್ಕರ್‌ ಪಕ್ಷೇತರರಾಗಿ , ಬಿಜೆಪಿ ಬೆಂಬಲಿತ ಸದಸ್ಯ ಸುಭಾಸ್‌ ಮತ್ತು ಕಾಂಗ್ರೆಸ್‌ ಬೆಂಬಲಿತ ಪಕ್ಷೇತರ ಸದಸ್ಯೆ ಮೈಮೂನತುಲ್‌ ಮೆಹ್ರಾ ನಾಮಪತ್ರ ಸಲ್ಲಿಸಿದ್ದರು. ಕೊನೆ ಕ್ಷಣದಲ್ಲಿ ಪಕ್ಷೇತರ ಅಭ್ಯರ್ಥಿ ಅಬೂಬಕ್ಕರ್‌ ನಾಮಪತ್ರ ಹಿಂಪಡೆದುಕೊಂಡರು. ಬಳಿಕ ನಡೆದ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ತಲಾ 5 ಮತಗಳನ್ನು ಪಡೆದಿದ್ದರು. ಚೀಟಿ ಹಾಕುವ ಮೂಲಕ ವಿಜಯಲಕ್ಷ್ಮಿ ಕಾಂಗ್ರೆಸ್‌ ಬೆಂಬಲಿತ ಪಕ್ಷೇತರ ಸದಸ್ಯೆ ಮೈಮೂನತುಲ್‌ ಮೆಹ್ರಾ ಗೆ ಒಲಿದಿದ್ದಾಳೆ. ಸಾಮಾನ್ಯ ಮಹಿಳೆ ವರ್ಗದ ಉಪಾಧ್ಯಕ್ಷೆ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಜಯಶ್ರೀ ಮತ್ತು ಕಾಂಗ್ರೆಸ್‌ ಬೆಂಬಲಿತ ವಿಮಲ ನಾಮಪತ್ರ ಸಲ್ಲಿಸಿದ್ದು, 6 ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಬೆಂಬಲಿತ ಸದಸ್ಯೆ ಜಯಶ್ರೀ ಉಪಾಧ್ಯಕ್ಷೆಯಾಗಿದ್ದಾರೆ. ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ವಿಮಲ 4 ಮತಗಳನ್ನು ಪಡೆದು ಕೊಂಡಿದ್ದಾರೆ. ಒಟ್ಟು 10 ಸದಸ್ಯಬಲದ ಪಾಣಾಜೆ ಗ್ರಾ.ಪಂ ನಲ್ಲಿ ಬಿಜೆಪಿ ಬೆಂಬಲಿತ 5 ಸದಸ್ಯರು, ಕಾಂಗ್ರೆಸ್‌ ಬೆಂಬಲಿತ 3 ಸದಸ್ಯರು ಹಾಗೂ 2 ಪಕ್ಷೇತರ ಸದಸ್ಯರಿದ್ದಾರೆ.

LEAVE A REPLY

Please enter your comment!
Please enter your name here