ನಿವೃತ್ತಿ ಹೊಂದಿದ ಸಾರೆಪುಣಿ ಅಂಗನವಾಡಿ ಸಹಾಯಕಿ ಕುಸುಮ ರೈಯವರಿಗೆ ಶಂಸುಲ್ ಉಲಮಾ ಯಂಗ್‌ಮೆನ್ಸ್ ನಿಂದ ಬೀಳ್ಕೊಡುಗೆ, ಸನ್ಮಾನ

0

ಪುತ್ತೂರು: ಕೆದಂಬಾಡಿ ಗ್ರಾಮದ ಸಾರೆಪುಣಿ ಅಂಗನವಾಡಿಯಲ್ಲಿ ಸುದೀರ್ಘ 27 ವರ್ಷ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಕುಸುಮ ರೈ ಅವರನ್ನು ಶಂಸುಲ್ ಉಲಮಾ ಯಂಗ್ಮೆನ್ಸ್ ಸಾರೆಪುಣಿ ಇದರ ವತಿಯಿಂದ ಅಂಗನವಾಡಿ ಕೇಂದ್ರದಲ್ಲಿ ಸನ್ಮಾನಿಸಯಿತು.


ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿ ಕಮಲಾಕ್ಷಿ, ಐ.ಸಿ ಕೈಲಾಸ್, ಚಂದ್ರಶೇಖರ್, ಕೆದಂಬಾಡಿ ಗ್ರಾ.ಪಂ ಸದಸ್ಯರಾದ ಕೆ ಅಸ್ನಾ, ಕೆ ಸುಜಾತ, ಯಂಗ್ಮೆನ್ಸ್ ಗೌರವಾಧ್ಯಕ್ಷ ಇಸ್ಮಾಯಿಲ್ ಗಟ್ಟಮನೆ, ಸಲಹೆಗಾರ ಎಸ್.ಎನ್ ಅಬ್ದುಲ್ಲಾ, ಅಧ್ಯಕ್ಷ ಉಸ್ಮಾನ್, ಪದಾಧಿಕಾರಿಗಳಾದ ಎಚ್ ಇಬ್ರಾಹಿಂ, ಎಚ್.ಎ ಇಕ್ಬಾಲ್, ತಾಜುದ್ದಿನ್, ಆಸೀಫ್, ಅಶ್ರಫ್, ಕಲಂದರ್ ಶೆರೀಫ್, ಶರ್ಫುದ್ದಿನ್, ಮುಝಮ್ಮಿಲ್, ಫಾಯಿಜ್ ಮತ್ತಿತರು ಉಪಸ್ಥಿತರಿದ್ದರು. ಕಾರ್ಯದರ್ಶಿ ಡಿ.ಎ ಬಶೀರ್ ಸನ್ಮಾನ ಪತ್ರ ವಾಚಿಸಿದರು. ಕುಸುಮ ರೈ ಅವರು ಸುಧೀರ್ಘ ಸಮಯ ಸಾರೆಪುಣಿ ಅಂಗನವಾಡಿಯಲ್ಲಿ ಸೇವೆ ಸಲ್ಲಿಸಿದ್ದು, ಊರವರ ಪ್ರೀತಿ ಮತ್ತು ವಿಶ್ವಾಸವನ್ನು ಅವರು ಗಳಿಸಿದ್ದರು. ಮಕ್ಕಳ ಮೇಲೆ ಅಪಾರ ಕಾಳಜಿ ವಹಿಸುತ್ತಿದ್ದ ಅವರು ಮಕ್ಕಳನ್ನು ತನ್ನ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು ಎಂದು ಯಂಗ್‌ಮೆನ್ಸ್ನ ಮುಖಂಡ ಅಶ್ರಫ್ ಸಾರೆಪುಣಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here