ಅಂಬೇಡ್ಕರ್ ವಸತಿ ಶಾಲೆಯಲ್ಲಿ ಉಚಿತ ಯಕ್ಷಗಾನ ತರಬೇತಿ ಉದ್ಘಾಟನೆ

0

ಏಕಾಗ್ರತೆಗೆ ಯಕ್ಷಗಾನ ಕಲಿಕೆ ಸಹಕಾರಿ – ಸೀತಾರಾಮ ರೈ

ಪುತ್ತೂರು : ಭಾಷಾ ಪ್ರೌಢಿಮೆ ಬೆಳೆಯುವಲ್ಲಿ  ಹಾಗೂ ಮನಸ್ಸಿನ ಏಕಾಗ್ರತೆಗೆ  ಯಕ್ಷಗಾನ ಕಲಿಕೆ ತುಂಬಾ ಸಹಕಾರಿ ಎಂದು ಹಿರಿಯ ಸಹಕಾರಿ ಧುರೀಣ,  ವಿದ್ಯಾರಶ್ಮಿ ವಿದ್ಯಾಲಯದ ಸ್ಥಾಪಕ  ಸೀತಾರಾಮ ರೈ ಸವಣೂರು ಹೇಳಿದರು. ಅವರು ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆ ಉಪ್ಪಿನಂಗಡಿ ಪಡ್ಡಯೂರ್ ನೆಹರು ನಗರ ಪುತ್ತೂರು ಇಲ್ಲಿ ಯಕ್ಷ ಧ್ರುವ ಪಟ್ಲ ಪೌಂಡೇಷನ್ ಟ್ರಸ್ಟ್ ಮಂಗಳೂರು ವತಿಯಿಂದ  ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಚಿತ ಯಕ್ಷಗಾನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ವಾಕ್ ಚಾತುರ್ಯ ಬೆಳೆಯುವಲ್ಲಿ ಯಕ್ಷಗಾನ ಕಲಿಕೆಯಿಂದ ತುಂಬಾ ಸಹಕಾರಿ ಎಂದು ತಿಳಿಸುತ್ತಾ  ಅನೇಕ ಜನ ಕಲಾ ಪ್ರೇಮಿಗಳು  ಶಿಕ್ಷಣ ವಂಚಿತರಾದರು ಯಕ್ಷಗಾನದಿಂದ ಬದುಕು ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಯಕ್ಷಧ್ರುವ  ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಸ್ಥಾಪಕಾಧ್ಯಕ್ಷ  ಪಟ್ಲ ಸತೀಶ್  ಶೆಟ್ಟಿ ಮಾತನಾಡಿ ‘ಶಿಕ್ಷಣ ಜೊತೆಗೆ ಯಕ್ಷಗಾನ ಕಲಿಕೆ ಪೂರಕವಾಗಿ ನಮ್ಮ  ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಸತಿ ಶಾಲೆಗಳ ವಿದ್ಯಾರ್ಥಿಗಳು  ಯಕ್ಷಗಾನ ಕಲಿತು ಒಂದೇ  ವೇದಿಕೆಯಲ್ಲಿ ತರುವ ಒಂದು ದೊಡ್ಡ ಮಟ್ಟಿನ  ಪ್ರಯತ್ನವಾಗಿದೆ. ವಿದ್ಯಾರ್ಥಿಗಳು ಯಕ್ಷಗಾನ ಕಲಿತು ನಮ್ಮ ಕಲೆ ಸಂಸ್ಕೃತಿಯನ್ನು  ದೇಶ ವಿದೇಶದಲ್ಲಿ ಪಸರಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಅಂಬೇಡ್ಕರ್ ವಸತಿ ಶಾಲೆ ಉಪ್ಪಿನಂಗಡಿ ಪುತ್ತೂರು ಇದರ ಪ್ರಾಂಶುಪಾಲ ಸತೀಶ ತುಂಬ್ಯ  ವಹಿಸಿದ್ದರು. ಸಮಾರಂಭದಲ್ಲಿ ಯಕ್ಷಧ್ರುವ   ಶಿಕ್ಷಣದ ಪ್ರಧಾನ ಸಂಚಾಲಕ ವಾಸುದೇವ ಐತಾಳ್, ಉಪ್ಪಿನಂಗಡಿ ಘಟಕದ ಸಂಚಾಲಕ ಶ್ಯಾಮಸುಂದರ್ ಶರ್ಮಾ, ಪುತ್ತೂರು ಘಟಕದ ಜಯರಾಜ್ ಭಂಡಾರಿ , ಯಕ್ಷಗಾನ ಗುರು ಗಣೇಶ್ ಪಾಳೆಚ್ಚರ್,  ದಿನಿತ್ ಪೇರಾಡಿ , ಅನ್ನಪೂರ್ಣ, ಗಂಗಾಧರ್ ರೈ, ಫ್ರೋ.ದತ್ತಾತ್ರೇಯ ರಾವ್, ಭಾಗವತರಾದ ಲಕ್ಷ್ಮಿನಾರಾಯಣ ಭಟ್ ಉಪಸ್ಥಿತರಿದ್ದರು.

ಶಿಕ್ಷಕಿ ವಿನುತ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ವಾಣಿ ಸ್ವಾಗತಿಸಿ, ಬಾಲಕೃಷ್ಣ ವಂದಿಸಿದರು. ಜಯಪ್ರಕಾಶ್,  ಕೃಷ್ಣ ಕುಮಾರ್, ಉಷಾ, ವಿಜಯಾ, ಸಂಜಯ್,  ರಕ್ಷಿತ್, ರೇಷ್ಮಾ ಹಾಗೂ ಸಿಬ್ಬಂದಿಗಳು ಸಹಕರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಾಂಕೇತಿಕವಾಗಿ ಯಕ್ಷಗಾನ ಕಲಿಕೆ ತರಬೇತಿಯನ್ನು ನಡೆಸಿಕೊಡಲಾಯಿತು.

LEAVE A REPLY

Please enter your comment!
Please enter your name here