ಹಿರೆಬಂಡಾಡಿ: ಸರಕಾರಿ ಪ್ರೌಢಶಾಲೆ ಹಿರೇಬಂಡಾಡಿ ಇಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಹಾಗೂ ಔಚಿತ್ಯಪೂರ್ಣವಾಗಿ ಆಚರಿಸಲಾಯಿತು.
ಧ್ವಜಾರೋಹಣ ಕಾರ್ಯಕ್ರಮವನ್ನು ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಸತೀಶ್ ಶೆಟ್ಟಿ ಹೆನ್ನಾಳ ನೆರವೇರಿಸಿದರು.
ಎಸ್.ಡಿ.ಎಂ.ಸಿ ಕಾರ್ಯಾಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಾವತಿ ನೆಹರು ತೋಟ, ಉಪಾಧ್ಯಕ್ಷೆ ಭವಾನಿ, ನಿಕಟಪೂರ್ವ ಕಾರ್ಯಧ್ಯಕ್ಷರಾದ ಶ್ರೀಧರ ಮಠಂದೂರು, ಗ್ರಾಮಪಂಚಾಯತಿ ಸದಸ್ಯರುಗಳಾದ ಹಮ್ಮಬ್ಬ ಶೌಕತ್ ಅಲಿ, ಲಕ್ಷ್ಮೀಶ ನಿಡ್ಡೆಂಕಿ, ಶ್ರೀಮತಿ ಶಾಂಭವಿ, ಗೀತಾ ದಾಸರಮೂಲೆ, ಉಷಾ, ಸದಾನಂದ ಶೆಟ್ಟಿ ಹಾಗೂ ಎಸ್.ಡಿ.ಎಂ.ಸಿ ಸದಸ್ಯರಾದ ದಯಾನಂದ ಸರೋಳಿ, ಹಮೀದ್, ಜಾನಕಿ ಲಾವತ್ತಡಿ, ರವೀಂದ್ರ ಪಟಾರ್ತಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕರಾದ ಹರಿಕಿರಣ್ ಕೆ ರವರು ಸ್ವಾತಂತ್ರ್ಯ ಹೋರಾಟಗಾರರ ಆದರ್ಶ ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಸಮಾಜ ವಿಜ್ಞಾನ ಶಿಕ್ಷಕಿ ಶ್ರೀಮತಿ ಲಲಿತ ಕೆ ರವರು ತಮ್ಮ ದಿಕ್ಸೂಚಿ ಭಾ?ಣದಲ್ಲಿ ಸ್ವಾತಂತ್ರ್ಯ ಹೋರಾಟದ ವೀರಗಾಥೆಯನ್ನು ಹಂತ ಹಂತವಾಗಿ ತಿಳಿಸಿಕೊಟ್ಟರು. ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಸಮೂಹ ಗಾಯನ, ಭಾಷಣ, ಛದ್ಮವೇಷ ಸ್ಪರ್ಧೆಗಳು ನಡೆದು ಬಳಿಕ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಪ್ರೇರಣ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಟಾರ್ ವಿತರಣೆ ನಡೆಸಲಾಯಿತು. ಶಾಲಾ ನಾಯಕ ದೀಕ್ಷಣ್ ಸ್ವಾಗತಿಸಿ ಪ್ರತಿಪಕ್ಷದ ನಾಯಕಿ ಗ್ರೇಷ್ಮಾ ವಂದಿಸಿದರು. ಬಿ. ಸಮೀಳಾ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಸೀತಾರಾಮ ಗೌಡ ಬಿ, ಮಲ್ಲಿಕಾ ಐ, ವಸಂತ ಕುಮಾರ್ ಪಿ, ಮನೋಹರ ಎಂ, ಆರತಿ ವೈ ಸಹಕರಿಸಿದರು.