ಫಿಲೋಮಿನಾದಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ

0

ಪುತ್ತೂರು:ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜು ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಆಯೋಜನೆಯಲ್ಲಿ ” ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ’ಯನ್ನು ಕಾಲೇಜಿನ ಸ್ಪಂದನ ಸಭಾಂಗಣದಲ್ಲಿ ಆ.12 ರಂದು ಆಚರಿಸಲಾಯಿತು.


ಮುಖ್ಯ ಅತಿಥಿ, ಫಿಲೋಮಿನಾ ಕಾಲೇಜಿನ ಉಪ ಪ್ರಾಂಶುಪಾಲರು ಹಾಗೂ ಆಂತರಿಕ ಗುಣಮಟ್ಟದ ಭರವಸೆ ಕೋಶ(ಐ.ಕ್ಯು.ಎ.ಎಸ್) ನಿರ್ದೇಶಕರಾದ ಡಾ|ಎ.ಪಿ. ರಾಧಾಕೃಷ್ಣರವರು ಮಾತನಾಡಿ, ಗ್ರಂಥಾಲಯವು ಶಿಕ್ಷಣ ವ್ಯವಸ್ಥೆಯ ಮುಖ್ಯ ಅಂಗವಾಗಿದ್ದು ಅಲ್ಲಿ ಮಹನೀಯರು ಬರೆದ ಪುಸ್ತಕಗಳ ಭಂಡಾರವಿದೆ. ಡಾ.ಎಸ್.ಆರ್. ರಂಗನಾಥ್‌ರವರು ಭಾರತದಲ್ಲಿ ಗ್ರಂಥಾಲಯ ವಿಜ್ಞಾನದ ಬೆಳವಣಿಗೆಯಲ್ಲಿ ಯಾರೂ ಮರೆಯಲಾರದ ಕೊಡುಗೆಯನ್ನು ನೀಡಿದ್ದು, ಅವರನ್ನು ಸ್ಮರಿಸುವುದು ಗ್ರಂಥಪಾಲಕರ ದಿನದ ಆಚರಣೆಯ ಪ್ರಮುಖ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಓದುವ ಅಭ್ಯಾಸವನ್ನು ರೂಡಿಸಿಕೊಂಡರೆ ಜ್ಞಾನಾರ್ಜನೆಯನ್ನು ಪಡೆಯುವುದರೊಂದಿಗೆ ಸಮಾಜದ ಏಳಿಗೆಯಲ್ಲಿ ಅತ್ಯುತ್ತಮ ಪಾತ್ರ ನಿರ್ವಹಿಸಬಹುದು ಎಂದು ಹೇಳಿದರು.


ಅಧ್ಯಕ್ಷತೆಯನ್ನು ವಹಿಸಿದ ಕಾಲೇಜು ಪ್ರಾಂಶುಪಾಲರಾದ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ಮಾತನಾಡಿ, ಸ್ಮಾರ್ಟ್ ಪೋನ್ ಹಾಗೂ ಅಂತರ್ಜಾಲವು ಪುಸ್ತಕಕ್ಕೆ ಯಾವುದೇ ಪರ್ಯಾಯವಲ್ಲ. ಒಬ್ಬ ವ್ಯಕ್ತಿಯು ಪುಸ್ತಕವನ್ನು ಓದುವಾಗ ಯಾವುದೇ ರೀತಿಯ ಮಾನಸಿಕ ವ್ಯಾಕುಲತೆಯನ್ನು ಅನುಭವಿಸುವ ಪ್ರಮೇಯವೇ ಉದ್ಭವಿಸುವುದಿಲ್ಲ. ಪುಸ್ತಕವು ಮಸ್ತಕವನ್ನು ಪಳಗಿಸುವ ಮೂಲ ಸಾಧನವಾಗಿದೆ ಎಂದು ಹೇಳಿದರು.


ಲಲಿತಕಲಾ ಸಂಘದ ಅನುಶ್ರೀ ಅಭಿಜ್ನಾರವರು ನಿರ್ದೇಶಕರಾದ ಪ್ರಶಾಂತ್ ರೈಯವರ ಮಾರ್ಗದರ್ಶನದಲ್ಲಿ ಪ್ರಾರ್ಥಿಸಿದರು. ಕಾಲೇಜಿನ ಆಯ್ಕೆ ಶ್ರೇಣಿ ಗ್ರಂಥಪಾಲಕರಾದ ಅಬ್ದುಲ್ ರಹ್ಮಾನ್ ಸ್ವಾಗತಿಸಿ, ಸ್ನಾತಕೋತ್ತರ ವಿಭಾಗದ ಗ್ರಂಥಪಾಲಕರಾದ ಮನೋಹರ್ ಎಸ್.ಜಿ. ವಂದಿಸಿದರು. ಕಾಲೇಜು ವಿದ್ಯಾರ್ಥಿನಿ ದ್ವಿತೀಯ ಬಿಬಿಎಯ ನಿರೀಕ್ಷಾರವರು ಕಾರ್ಯಕ್ರಮ ನಿರ್ವಹಿಸಿದರು. ಸಿಬಂದಿಗಳಾದ ಶ್ರೀಮತಿ ಝೀಟ ನೊರೊನ್ಹಾ, ರೋಬರ್ಟ್ ಮೊಂತೇರೊ, ಅನಿಲ್ ಲಸ್ರಾದೊ, ಪೀಟರ್ ಡಿ’ಸೋಜ ಹಾಗೂ ಶ್ರೀಮತಿ ಕ್ಯಾಥರಿನ್ ಕ್ರಾಸ್ತಾ ಸಹಕರಿಸಿದರು. ಕಾಲೇಜು ಲಲಿತಕಲಾ ಸಂಘ, ಎನ್.ಎಸ್.ಎಸ್. ಮತ್ತು ಹಿರಿಯ ವಿದ್ಯಾರ್ಥಿಗಳು ಸೇರಿ 120 ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here