ಕೊಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ: ಪುಷ್ಪಾ ಸುಭಾಶ್, ಉಪಾಧ್ಯಕ್ಷ: ಯತೀಶ್ ಕುಮಾರ್

0

ರಾಮಕುಂಜ: ಕೊಯಿಲ ಗ್ರಾಮ ಪಂಚಾಯತ್‌ನ 2ನೇ ಅವಧಿಗೆ ಅಧ್ಯಕ್ಷರಾಗಿ ಪುಷ್ಪಾ ಸುಭಾಶ್ ಅರುವಾರ ಹಾಗೂ ಉಪಾಧ್ಯಕ್ಷರಾಗಿ ಯತೀಶ್ ಕುಮಾರ್ ಸಿ.ಹೆಚ್. ಸೀಗೆತ್ತಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಬ್ಬರೂ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದಾರೆ.
15 ಸದಸ್ಯ ಬಲದ ಕೊಯಿಲ ಗ್ರಾಮ ಪಂಚಾಯತ್‌ನಲ್ಲಿ ಬಿಜೆಪಿ ಬೆಂಬಲಿತ 10, ಕಾಂಗ್ರೆಸ್ ಬೆಂಬಲಿತ 3 ಹಾಗೂ ಎಸ್‌ಡಿಪಿಐ ಬೆಂಬಲಿತ ಇಬ್ಬರು ಸದಸ್ಯರಿದ್ದಾರೆ. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕೊಲ 3ನೇ ವಾರ್ಡ್‌ನಿಂದ ಬಿಜೆಪಿ ಬೆಂಬಲಿತ ಸದಸ್ಯೆಯಾಗಿ ಚುನಾಯಿತರಾಗಿದ್ದ ಅರುವಾರ ನಿವಾಸಿ ಪುಷ್ಪಾ ಸುಭಾಶ್ ಹಾಗೂ ಹಿಂದುಳಿದ ವರ್ಗ ಎ ಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕೊಯಿಲ 5ನೇ ವಾರ್ಡ್‌ನಿಂದ ಬಿಜೆಪಿ ಬೆಂಬಲಿತ ಸದಸ್ಯರಾಗಿ ಚುನಾಯಿತರಾಗಿದ್ದ ಸಬಳೂರು ಸೀಗೆತ್ತಡಿ ನಿವಾಸಿ ಯತೀಶ್ ಕುಮಾರ್ ಎಸ್.ಎಚ್.ಅವರು ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವರ ಅವಿರೋಧ ಆಯ್ಕೆ ನಡೆದಿದೆ. ಸದಸ್ಯರಾದ ಹರ್ಷಿತ್‌ಕುಮಾರ್, ಕಮಲಾಕ್ಷಿ ಪಾಜಳಿಕೆ, ಲತಾನವೀನ್, ಚಂದ್ರಶೇಖರ ಮಾಳ, ಸೀತಾರಾಮ ಬಲ್ತಕುಮೇರು, ಭಾರತಿ, ಶಶಿಕಲಾ ಎಂ., ಚಿದಾನಂದ ಪಾನ್ಯಾಲ್ ಉಪಸ್ಥಿತರಿದ್ದರು.

ಕಾಂಗ್ರೆಸ್/ಎಸ್‌ಡಿಪಿಐ ಸದಸ್ಯರ ಗೈರು:
ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ನೀತಾ ಎನ್., ಜೊಹರಾ ಇಕ್ಬಾಲ್, ನಝೀರ್ ಪೂರಿಂಗ್, ಎಸ್‌ಡಿಪಿಐ ಬೆಂಬಲಿತ ಸದಸ್ಯರಾದ ಹಸನ್ ಸಜ್ಜದ್, ಸಫಿಯಾ ಗೈರು ಹಾಜರಿಯಾಗಿದ್ದರು. ಕಡಬ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ದೇವಿಪ್ರಸಾದ್ ಎ.,ಚುನಾವಣಾಧಿಕಾರಿಯಾಗಿದ್ದರು. ಪಿಡಿಒ ಸಂದೇಶ್ ಹೆಚ್.ಎನ್., ಕಾರ್ಯದರ್ಶಿ ಪಮ್ಮು ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಮೀನಾಕ್ಷಿ, ರುಕ್ಮಯ, ರಾಜೇಂದ್ರ, ಗಂಗಾಧರ ಸಹಕರಿಸಿದರು.
ಬಿಜೆಪಿ ಮುಖಂಡರಿಂದ ಅಭಿನಂದನೆ:
ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಪುಷ್ಪಾ ಸುಭಾಶ್ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಯತೀಶ್‌ಕುಮಾರ್ ಅವರನ್ನು ಬಿಜೆಪಿ ಮುಖಂಡರು ಬಿಜೆಪಿ ಶಾಲು, ಹಾರಾರ್ಪಣೆ ಮಾಡಿ ಅಭಿನಂದನೆ ಸಲ್ಲಿಸಿದರು. ಬಿಜೆಪಿ ಕೊಲ ಮಹಾಶಕ್ತಿಕೇಂದ್ರದ ಅಧ್ಯಕ್ಷ ಪ್ರದೀಪ್ ರೈ ಮನವಳಿಕೆ, ಕಾರ್ಯದರ್ಶಿ ಸುರೇಶ್ ಗೌಡ ದೇಂತಾರು, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಲಕ್ಷ್ಮೀನಾರಾಯಣ ರಾವ್ ಆತೂರು, ಸುಳ್ಯ ಮಂಡಲ ಪ್ರಬುದ್ಧ ಪ್ರಕೋಷ್ಠದ ಸಂಚಾಲಕ ಧರ್ಮಪಾಲ ರಾವ್ ಕಜೆ, ಸುಳ್ಯ ಮಂಡಲ ಬಿಜೆಪಿ ವೃತ್ತಿಪರ ಪ್ರಕೋಷ್ಠದ ಸಂಚಾಲಕ ಸದಾಶಿವ ಶೆಟ್ಟಿ ಮಾರಂಗ, ಆತೂರು ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಕೊಯಿಲ ಶಕ್ತಿಕೇಂದ್ರದ ಪ್ರಮುಖ್ ರಾಮಚಂದ್ರ ಏಣಿತ್ತಡ್ಕ, ಸಹಪ್ರಮುಖ್ ಮಮತಾಯದುಶ್ರೀ, ತಾ.ಪಂ.ಮಾಜಿ ಉಪಾಧ್ಯಕ್ಷೆ ಜಯಂತಿ ಆರ್.ಗೌಡ, ಮಾಜಿ ಸದಸ್ಯ ದಯಾನಂದ ಗೌಡ ಆಲಡ್ಕ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಬೇಂಗದಪಡ್ಪು, ಹೇಮಾಮೋಹನ್‌ದಾಸ್ ಶೆಟ್ಟಿ, ಮಾಜಿ ಸದಸ್ಯರಾದ ಸುಧೀಶ್ ಪಲ್ಲಡ್ಕ, ಉಮೇಶ್ ಸಂಕೇಶ, ಸುಭಾಸ್ ಆರುವಾರ, ಪೂರ್ಣಿಮಾ ಸಂಕೇಶ್ ಮತ್ತಿತರರು ಅಭಿನಂದನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here