ಗಾಂಜಾ ಪ್ರಕರಣ ಮಾತ್ರವಿದ್ದ ಪುತ್ತೂರಿನಲ್ಲಿ ಇದೀಗ ಎಮ್ ಡಿ ಎಮ್ ಎ ಯೂ ಪ್ರಕರಣ ದಾಖಲು -ಮುರ ಬಸ್ ತಂಗುದಾಣಲ್ಲಿ ಎಮ್ ಡಿ ಎಮ್ ಎ ಇಟ್ಟು ಕೊಂಡಿದ್ದ ವ್ಯಕ್ತಿಯ ಬಂಧನ

0

ಪುತ್ತೂರು: ಗಾಂಜಾ ಪ್ರಕರಣ ಮಾತ್ರವಿದ್ದ ಪುತ್ತೂರಿನಲ್ಲಿಗ ಎಮ್ ಡಿ ಎಮ್ ಎ ಎಂಬ ಹೈಪೈ ಮಾದಕ ವಸ್ತು ಕಾಲಿಟ್ಟಿದೆ. ಆ.18 ರಂದು ಪುತ್ತೂರು ಪೊಲೀಸರು ಕಾರ್ಯಾಚರಣೆ ನಡೆಸಿ ಮುರ ಬಸ್ ಪ್ರಯಾಣಿಕರ ತಂಗುದಾಣದಲ್ಲಿ ಎಮ್ ಡಿ ಎಮ್ ಎ ಇರಿಸಿಕೊಂಡಿದ್ದ ಬೆಳ್ತಂಗಡಿಯ ವ್ಯಕ್ತಿಯನ್ನು ಬಂಧಿಸಿದ್ದಾರೆ.


ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಅಂಝದ್ ಯಂ ಯಂ (27ವ) ಬಂಧಿತ ಆರೋಪಿ. ಆತನ ಬಳಿಯಿದ್ದ ಅಂದಾಜು ರೂ 15,000/- ಬೆಲೆಯ 2.86 ಗ್ರಾಂ M.D.M.A, ಮತ್ತು ನಗದು ರೂ.920 ಹಾಗೂ ಅಂದಾಜು ರೂ 3,000/- ಬೆಲೆಯ ಮೊಬೈಲ್ ನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ 8C, 22(b) N.D.P.S Act 1985 ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

.

LEAVE A REPLY

Please enter your comment!
Please enter your name here