ಆ.25:ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರ, ಬಿಲ್ಲವ ಮಹಿಳಾ ವೇದಿಕೆಯಿಂದ ವರಮಹಾಲಕ್ಷ್ಮೀ ಪೂಜೆ

0

ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರ ಪುತ್ತೂರು ಮತ್ತು ಬಿಲ್ಲವ ಮಹಿಳಾ ವೇದಿಕೆ ಪುತ್ತೂರು ಇದರ ವತಿಯಿಂದ ಆ.25 ರ ಶ್ರಾವಣ ಶುಕ್ರವಾರದಂದು ಪುತ್ತೂರು ಬಿಲ್ಲವ ಸಂಘದಲ್ಲಿ ವರಮಹಾಲಕ್ಷ್ಮೀ ವೃತಾಚರಣೆಯು ಬೆಳಿಗ್ಗೆಯಿಂದ ಪ್ರಾರಂಭವಾಗಲಿದೆ. ವೃತಾಚರಣೆ ಮಾಡಿದ ಎಲ್ಲರಿಗೂ ಸೀರೆ, ಹಸಿರು ಬಳೆ, ಕುಂಕುಮ, ದಾರವನ್ನು ಭಕ್ತಿ ಪೂರ್ವಕವಾಗಿ ವಿತರಿಸಲಾಗುವುದು. ಪೂಜೆ ಮಾಡಿಸುವವರು ತಾವು ರಶೀದಿಯನ್ನು ಅದೇ ದಿನ ಬಿಲ್ಲವ ಸಂಘ ಪುತ್ತೂರು ಇಲ್ಲಿ ಪಡೆದುಕೊಳ್ಳಬಹುದು. ಬಳಿಕ ಅಪರಾಹ್ನ ಸಭಾ ಕಾರ್ಯಕ್ರಮವು ಜರಗಲಿದ್ದು, ಕಾರ್ಯಕ್ರಮದ ಅಧ್ಯಕ್ಷರಾಗಿ ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ವಿಮಲಾ ಸುರೇಶ್ ರವರು ವಹಿಸಿಕೊಳ್ಳಲಿದ್ದಾರೆ. ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕಡೆಂಜೆಯವರು ಉದ್ಘಾಟನೆಯನ್ನು ನೆರವೇರಿಸಲಿರುವರು. ಕಾರ್ಯಕ್ರಮದ ಅತಿಥಿಗಳಾಗಿ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಶಿಕ್ಷಣ ಇಲಾಖೆಯ ಬಿ.ಆರ್.ಸಿ ಶ್ರೀಮತಿ ತನುಜಾ, ಉಪ್ಪಿನಂಗಡಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ನಿವೇದಿತಾ ದಡ್ದು, ಡಾ| ಕೆ. ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆ ಪುತ್ತೂರು ಸಹಶಿಕ್ಷಕಿ ಡಾ|ಚಾಂದಿನಿರವರು ಭಾಗಹಿಸಲಿದ್ದಾರೆ. ಅದೇ ರೀತಿ ಮದ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.

ಶ್ರಾವಣ ಸಂಭ್ರಮ ಕಾರ್ಯಕ್ರಮ..
ಬಳಿಕ ಮಧ್ಯಾಹ್ನ ಶ್ರಾವಣ ಸಂಭ್ರಮ ಕಾರ್ಯಕ್ರಮ ಜರಗಲಿದ್ದು ಸಂಭ್ರಮದ ಪ್ರಯುಕ್ತ ವಿವಿಧ ಭಜನಾ ತಂಡಗಳಿಂದ ವೈವಿಧ್ಯಮಯ ಕುಣಿತ(ನೃತ್ಯ) ಭಜನಾ ಸ್ಪರ್ಧೆ ನಡೆಯಲಿರುವುದು. ಕುಣಿತಾ ಭಜನೆಗೆ ಹೆಸರನ್ನು ನೋಂದಾಯಿಸುವವರು ಆ.22 ರೊಳಗೆ ಹೆಸರನ್ನು ನೋಂದಾಯಿಸಿಕೊಳ್ಳುವುದು. ಜಾತಿ, ಭೇದ, ಮತ ಭಾವನೆಗಳ ಯಾವುದೇ ವ್ಯಾಪ್ತಿ ಇಲ್ಲದೇ ಎಲ್ಲರೂ ತಂಡದಲ್ಲಿ ಭಾಗಿಗಳಾಗಬಹುದು. ತಂಡದ ಸದಸ್ಯರ ಮಿತಿ ಇರುವುದಿಲ್ಲ, 10 ನಿಮಿಷಗಳ ಕಾಲಾವಕಾಶ ಇದ್ದು ಭಜನಾ ಪರಿಕರಗಳಾದ ತಬಲಾ, ತಾಳ, ಕ್ಯಾಸೆಟ್ಗಳನ್ನೂ ಬಳಸಬಹುದು. ಯಾವುದೇ ಪರಿಕರಗಳನ್ನು ಬಳಸಿದರೂ ತಮ್ಮ ನೃತ್ಯ( ಕುಣಿತ) ಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು. ತಮ್ಮ ಹೆಸರನ್ನು ಬಿಲ್ಲವ ಸಂಘ ಪುತ್ತೂರು ಇಲ್ಲಿ ನೀಡಬಹುದು. ಹೆಚ್ಚಿನ ಮಾಹಿತಿಗೆ ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷರಾದ ವಿಮಲಾ ಸುರೇಶ್(9740941519) ಹಾಗೂ ಸಂಚಾಲಕರಾದ ಉಷಾ ಅಂಚನ್(91418 57566) ರವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here