ಕರೋಪಾಡಿ ಗ್ರಾಮ ಪಂಚಾಯತ್-ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಸೂರ್ಯಕಾಂತಿ, ಉಪಾಧ್ಯಕ್ಷರಾಗಿ ಅನ್ವರ್ ಕರೋಪಾಡಿ ಅವಿರೋಧವಾಗಿ ಆಯ್ಕೆ

0

ವಿಟ್ಲ: ಕರೋಪಾಡಿ ಗ್ರಾಮ ಪಂಚಾಯತ್ ನ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದಿದೆ.


ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಸೂರ್ಯಕಾಂತಿ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಅನ್ವರ್ ಕರೋಪಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಂಟ್ವಾಳ ತಾಲೂಕು ಕ್ರೀಡಾ ಅಧಿಕಾರಿ ವಿಷ್ಣು ನಾರಾಯಣ ಹೆಬ್ಬಾರ್ ಆಯ್ಕೆ ಪ್ರಕ್ರೀಯೆ ನಡೆಸಿಕೊಟ್ಟರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿರವರು ಸಹಕರಿಸಿದರು.


ಕರೋಪಾಡಿ ಗ್ರಾಮ ಪಂಚಾಯತ್ ನಲ್ಲಿ ಹತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯರು ಹಾಗೂ ಆರು ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ಸದಸ್ಯರಾದ ಎಗ್ನೆಶ್ ಡಿಸೋಜ, ಮಮತಾ, ಎಸ್. ಹಮೀದ್, ಚೆನ್ನಪ್ಪ, ಜೂಲಿಯಾನ ಮೋಂತೆರೊ, ವೀರವಿರೋನಿಕಾ ಡಿಸೋಜ, ಮೈಮುನಾ, ಗೀತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here