ನೆಲ್ಯಾಡಿ: ಎನ್.ಸಿ.ವಿ.ಟಿ. ನವದೆಹಲಿ ಆಯೋಜಿಸಿದ 2022-23ನೇ ಸಾಲಿನ ಅಖಿಲ ಭಾರತ ಅಂತಿಮ ವೃತ್ತಿ ಪರೀಕ್ಷೆಯಲ್ಲಿ ನೆಲ್ಯಾಡಿ ಬೆಥನಿ ಐಟಿಐ (ಕೈಗಾರಿಕಾ ತರಬೇತಿ ಸಂಸ್ಥೆ)ಗೆ ಶೇ.95 ಫಲಿತಾಂಶ ಲಭಿಸಿದೆ.
ಎಲೆಕ್ಟ್ರೀಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್ಸ್ ಹಾಗೂ ವೆಲ್ಡರ್ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.100 ಫಲಿತಾಂಶ ಲಭಿಸಿದೆ. ಕಂಪ್ಯೂಟರ್ ಅಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ ವಿಭಾಗದಲ್ಲಿ ಶೇ.93, ಫಿಟ್ಟರ್ ಶೇ.93, ಮೆಕ್ಯಾನಿಕ್ ಮೋಟಾರ್ ವೆಹಿಕಲ್ ವಿಭಾಗದಲ್ಲಿ ಶೇ. 94.75 ಫಲಿತಾಂಶ ಬಂದಿದೆ ಎಂದು ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.