ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ತಾಂತ್ರಿಕ ಶಿಕ್ಷಣವು ಒಬ್ಬ ವ್ಯಕ್ತಿಯನ್ನು ಸ್ವಾವಲಂಭಿಯಾಗಿ , ಸ್ವ ಉದ್ಯೋಗಿಯಾಗಿ ರೂಪಿಸುವಲ್ಲಿ ಪೂರಕವಾಗಿದೆ : ಸಲಿನ್ ಕೆ.ಪಿ
ನೆಲ್ಯಾಡಿ : ವರ್ತಮಾನ ಶಿಕ್ಷಣದಲ್ಲಿ ತಾಂತ್ರಿಕ ಶಿಕ್ಷಣವು ಒಬ್ಬ ವ್ಯಕ್ತಿಯನ್ನು ಸ್ವಾವಲಂಭಿಯಾಗಿ , ಸ್ವ ಉದ್ಯೋಗಿಯಾಗಿ ರೂಪಿಸುವಲ್ಲಿ ಪೂರಕವಾಗಿದೆ.ವಿದ್ಯಾಭ್ಯಾಸದ ಬಳಿಕ ವಿದ್ಯಾರ್ಥಿಗಳು ಸಂಸ್ಥೆಯ ರಾಯಭಾರಿಗಳಾಗಬೇಕು. ಅದೇ ರೀತಿ ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಷಯ ಎಂದು ಸರಕಾರಿ ಪಿ.ಯು.ಕಾಲೇಜು ಕಡಬ ಇಲ್ಲಿಯ ಉಪನ್ಯಾಸಕ ಸಲಿನ್ ಕೆ.ಪಿ. ಹೇಳಿದರು.
ಬೆಥನಿ ಐಟಿಐ ನೆಲ್ಯಾಡಿಯ 2023-24ನೇ ಸಾಲಿನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಫಾ.ತೋಮಸ್ ಬಿಜಿಲಿ ಒಐಸಿ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಪ್ರಾಚಾರ್ಯ ಸಜಿ ಕೆ ಥೋಮಸ್, ತರಬೇತಿ ಅಧಿಕಾರಿ ಜೋನ್ ಪಿ.ಎಸ್, ಕಿರಿಯ ತರಬೇತಿ ಅಧಿಕಾರಿ ವರ್ಗೀಸ್ ಎನ್. ಟಿ. ಉಪಸ್ಥಿತರಿದ್ದು ಶುಭ ಹಾರೈಸಿದರು., ತರಬೇತಿ ಅಧಿಕಾರಿ ಜೋನ್ ಪಿ.ಎಸ್. ಸ್ವಾಗತಿಸಿ, ಕಿರಿಯ ತರಬೇತಿ ಅಧಿಕಾರಿ ಸಂತೋಷ್ ಪಿಂಟೋ ವಂದಿಸಿದರು. ಕಿರಿಯ ತರಬೇತಿ ಅಧಿಕಾರಿ ಸುಬ್ರಾಯ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸವಿ ನೆನಪಿಗಾಗಿ ಸಂಸ್ಥೆಯ ಆವರಣದಲ್ಲಿ ಕಲ್ಪವೃಕ್ಷವನ್ನು ನೆಡಲಾಯಿತು.