*ಪ್ರವೀಣ್ ಚೆನ್ನಾವರ
ಪುತ್ತೂರು : ಕೊಳ್ತಿಗೆ ಗ್ರಾಪಂ ಬಿಜೆಪಿ ಬೆಂಬಲಿತೆ ಸದಸ್ಯೆ ಅಕ್ಕಮ್ಮ ಅವರು ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಮೂಲಕ ಕೊಳ್ತಿಗೆ ಗ್ರಾ.ಪಂ.ಅಧ್ಯಕ್ಷರಾಗಿ ಅಕ್ಕಮ್ಮ ಅವರು ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.
ಕೊಳ್ತಿಗೆ ಗ್ರಾ.ಪಂ.ನ 2 ನೇ ಅವಧಿಯ ಅಧ್ಯಕ್ಷತೆ ಪ.ಜಾ.ಮಹಿಳೆ ಹಾಗೂ ಉಪಾಧ್ಯಕ್ಷತೆಗೆ ಹಿಂದುಳಿದ ವರ್ಗ ಎ ಗೆ ಮೀಸಲಾತಿ ನಿಗದಿಯಾಗಿದೆ.ಕೊಳ್ತಿಗೆ ಗ್ರಾ.ಪಂ.ನಲ್ಲಿ ಕಾಂಗ್ರೆಸ್11 ಹಾಗೂ ಬಿಜೆಪಿ 5 ಸ್ಥಾನ ಪಡೆದಿತ್ತು.ಈ ಪೈಕಿ ಅಧ್ಯಕ್ಷತೆಗೆ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದ ಅಕ್ಕಮ್ಮ ಮತ್ತು ಚಂದ್ರಾವತಿ ಕೆಮ್ಮತಕಾನ ಅವರು ಅರ್ಹತೆ ಹೊಂದಿದ್ದರು.ಕಾಂಗ್ರೆಸ್ಬಹುಮತವಿದ್ದರೂ ಬಿಜೆಪಿ ಬೆಂಬಲಿತರು ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇತ್ತು.
ಬಳಿಕ ನಡೆದ ಬೆಳವಣಿಗೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆ ಅಕ್ಕಮ್ಮ ಅವರು ಆ.20ರಂದು ಶಾಸಕ ಅಶೋಕ್ ಕುಮಾರ್ರೈ ಅವರ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾದರು. ಈ ಮೂಲಕ ಕೊಳ್ತಿಗೆ ಗ್ರಾ.ಪಂ.ನ ಅಧ್ಯಕ್ಷರಾಗಿ ಅಕ್ಕಮ್ಮ ಅವರು ಆಯ್ಕೆಯಾಗುವುದು ಖಚಿತವಾಗಿದೆ. ಈ ಮೂಲಕ ಕಾಂಗ್ರೆಸ್11 ರಿಂದ 12 ಸ್ಥಾನಕ್ಕೆ ಏರಿಕೆಯಾದರೆ,ಬಿಜೆಪಿ ಬೆಂಬಲಿತರ ಸಂಖ್ಯೆ 5 ರಿಂದ 4ಕ್ಕೆ ಕುಸಿದಿದೆ.
ಉಪಾಧ್ಯಕ್ಷತೆಗೆ ಹಿಂದುಳಿದ ವರ್ಗ ಎ ಗೆ ಮೀಸಲಾಗಿದ್ದು, ಸದಸ್ಯರಾದ ಕಾಂಗ್ರೆಸ್ ಬೆಂಬಲಿತರಾದ ಪ್ರೇಮಾ ಶ್ರೀಧರ ಪೂಜಾರಿ, ಯಶೋಧಾ ಕೋಡಂಬು,ಪ್ರಮೋದ್ ಕೆ.ಎಸ್ ಅವರಿಗೆ ಅವಕಾಶವಿದೆ.ಆದರೆ ಈ ಸ್ಥಾನಕ್ಕೆ ಗ್ರಾ.ಪಂ.ನ ಮಾಜಿ ಅಧ್ಯಕ್ಷ ,ಹಾಲಿ ಸದಸ್ಯ ಪ್ರಮೋದ್ಕೆ.ಎಸ್ ಅವರ ಹೆಸರು ಅಂತಿಮಗೊಳಿಸಲಾಗಿದ್ದು, ಪ್ರಮೋದ್ಕೆ.ಎಸ್.ಅವರು ಉಪಾಧ್ಯಕ್ಷರಾಗಲಿದ್ದಾರೆ ಎಂದು ತಿಳಿದುಬಂದಿದೆ.
ಮೊದಲ ಅವಧಿಯಲ್ಲಿ ಅಧ್ಯಕ್ಷತೆ ಸಾಮಾನ್ಯ ಮೀಸಲಾತಿಯಲ್ಲಿ ಕಾಂಗ್ರೆಸ್ ನ ಶ್ಯಾಮಸುಂದರ ರೈ ಅಧ್ಯಕ್ಷರಾಗಿ ,ಉಪಾಧ್ಯಕ್ಷತೆಗೆ ಪ.ಪಂ.ಮಹಿಳೆ ಮೀಸಲಾತಿಯಲ್ಲಿ ಬಿಜೆಪಿಯ ನಾಗವೇಣಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.ಕಾಂಗ್ರೆಸ್ ನಲ್ಲಿ ಪ.ಪಂ.ಮಹಿಳಾ ಸದಸ್ಯರಿಲ್ಲದಿದ್ದರಿಂದ ಉಪಾಧ್ಯಕ್ಷ ಹುದ್ದೆ ಬಿಜೆಪಿ ಪಾಲಾಗಿತ್ತು.
ಈ ನಿಟ್ಟಿನಲ್ಲಿ ಈ ಬಾರಿ ಅಧ್ಯಕ್ಷತೆ ಹುದ್ದೆಯೂ ಬಿಜೆಪಿ ಪಾಲಾಗುವುದನ್ನು ತಪ್ಪಿಸಲು ಅಧ್ಯಕ್ಷತೆ ಮೀಸಲಾತಿಯಿರುವ ಬಿಜೆಪಿ ಬೆಂಬಲಿತ ಪ.ಜಾ.ಮಹಿಳಾ ಸದಸ್ಯೆ ಅಕ್ಕಮ್ಮ ಅವರನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡುವಲ್ಲಿ ಮುಖಂಡರು ಯಶಸ್ವಿಯಾಗಿದ್ದಾರೆ.
ಬಿಜೆಪಿ ಬೆಂಬಲಿತ ಸದಸ್ಯೆ ಅಕ್ಕಮ್ಮ ಅವರು ಶಾಸಕರಾದ ಅಶೋಕ್ಕುಮಾರ್ರೈ ನೇತೃತ್ವದಲ್ಲಿ ಕಾಂಗ್ರೆಸ್ಸೇರ್ಪಡೆ ಸಂಧರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ, ಬ್ಲಾಕ್ ಪ್ರ. ಕಾರ್ಯದರ್ಶಿ ಅಮಲರಾಮಚಂದ್ರ, ಬ್ಲಾಕ್ ಕಾರ್ಯದರ್ಶಿ ಪವನ್ ದೊಡ್ಡಮನೆ, ಗ್ರಾಪಂ ಸದಸ್ಯರಾದ ಬಾಲಕೃಷ್ಣ ಕೆಮ್ಮಾರ,ಬ್ಲಾಕ್ ಕಿಸಾನ್ ಅಧ್ಯಕ್ಷ ಎಸ್ ಪಿ ಮುರಳೀದರ್ ಕೆಮ್ಮಾರ, ಗ್ರಾಪಂ ಸದಸ್ಯ ಪ್ರಮೋದ್ ಕೆ ಎಸ್, ಕೊಳ್ತಿಗೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶ್ರೀಧರ್ ಪೂಜಾರಿ ಚಾಲೆಪಡ್ಪು,ಗ್ರಾಪಂ ಮಾಜಿ ಸದಸ್ಯ ಭರತ್ ಕೆಮ್ಮಾರ, ವಿನೋದ್ ರೈ ಕೆಳಗಿನ ಮನೆ,ತಾಲೂಕು ಇಂಟಕ್ ಅಧ್ಯಕ್ಷ , ಕೋಡಿಂಬಾಡಿ ಗ್ರಾ.ಪಂ.ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ಪುತ್ತೂರು ನಗರ ಯುವಕ ಕಾಂಗ್ರೆಸ್ ಉಪಾಧ್ಯಕ್ಷ ಅಖಿಲ್ ಸಾಮೆತ್ತಡ್ಕ,ಉದ್ಯಮಿಗಳಾದ ರಾಕೇಶ್ ರೈ ಕುದ್ಕಾಡಿ, ನಿಹಾಲ್ ಶೆಟ್ಟಿ, ರಿತೇಶ್ ಶೆಟ್ಟಿ ಕುತ್ಯಾಡಿ, ಸುದೇಶ್ ಶೆಟ್ಟಿ ಕೋಡಿಂಬಾಡಿ ಮೊದಲಾದವರು ಉಪಸ್ಥಿತರಿದ್ದರು