ಕರಾಟೆ – ವಿವೇಕಾನಂದ ಪದವಿಪೂರ್ವ ಕಾಲೇಜಿನ ಅರುಣ್ ಕುಮಾರ್ ಗೆ ಪ್ರಶಸ್ತಿ

0

ಪುತ್ತೂರು: ಚೆನ್ನೈಯಲ್ಲಿ ನಡೆದ ಪ್ರಥಮ ಸೌತ್ ಇಂಡಿಯಾ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ಅರುಣ್ ಕುಮಾರ್ ಎಂ. ಆರ್ ಕುಮಿಟೆ ವಿಭಾಗದಲ್ಲಿ ಪ್ರಥಮ ಹಾಗೂ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಈತನು ಪುತ್ತೂರಿನ ಅಮ್ಚಿನಡ್ಕದ ಮಾಡ್ನೂರು ಗ್ರಾಮದ ರಮೇಶ್ ಎ ಎಂ ಮತ್ತು ಲಲಿತಾ ದಂಪತಿ ಪುತ್ರ. ಈತನ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here