ಶಾಂತಿನಗರ ಶಾಲೆಯಲ್ಲಿ ಸದ್ಭಾವನಾ ದಿವಸ್ ಆಚರಣೆ

0

ನೆಲ್ಯಾಡಿ: ಗೋಳಿತ್ತಟ್ಟು ಗ್ರಾಮದ ಶಾಂತಿನಗರ ಸರ್ಕಾರಿ ಹಿ.ಪ್ರಾ.ಶಾಲೆಯಲ್ಲಿ ರಾಷ್ಟ್ರೀಯ ಸದ್ಭಾವನಾ ದಿನಾಚರಣೆಯನ್ನು ಆಚರಿಸಲಾಯಿತು.


ವಿದ್ಯಾರ್ಥಿಗಳಲ್ಲಿ ಜಾತಿ,ಧರ್ಮ,ಮತ, ಭಾಷೆ ಅಥವಾ ಲಿಂಗ ಇವುಗಳನ್ನು ಮೀರಿ ಎಲ್ಲರೂ ಸೌಹಾರ್ದತೆಯಿಂದ ಬಾಳುವುದರ ಮೂಲಕ ರಾಷ್ಟ್ರದ ಐಕ್ಯತೆಗೆ ಪಾಲುದಾರರಾಗಬೇಕು ಎಂಬ ಉದ್ದೇಶದಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಸದ್ಭಾವನಾ ದಿನಾಚರಣೆಯ ಪ್ರತಿಜ್ಞೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯಶಿಕ್ಷಕರಾದ ಪ್ರದೀಪ್ ಬಾಕಿಲ, ಸಹಶಿಕ್ಷಕರುಗಳಾದ ಮಂಜುನಾಥ್ ಮಣಕವಾಡ,ವೀಕ್ಷಿತಾ, ಪ್ರಮೀಳಾ, ತಾರಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here